newsfirstkannada.com

ಸ್ಕೂಟರ್​​ ಸವಾರಿ ವೇಳೆ ಮೊಬೈಲ್​ ಬ್ಲಾಸ್ಟ್​.. ರಸ್ತೆಗೆಸೆಯಲ್ಪಟ್ಟು ಮಹಿಳೆ ಸಾವು

Share :

Published April 27, 2024 at 7:29am

Update April 27, 2024 at 8:57am

    ಹೆಲ್ಮೆಟ್​ ಧರಿಸಿದೆ, ಈಯರ್​ ಫೋನ್​ ಹಾಕಿ ಸ್ಕೂಟರ್​ ಸವಾರಿ

    ಮೊಬೈಲ್​ ಬ್ಲಾಸ್ಟ್​ ಆಗುತ್ತಿದ್ದಂತೆಯೇ ನಿಯಂತ್ರಣ ತಪ್ಪಿ ಸ್ಕೂಟರ್​ ಅಪಘಾತ

    ರೈಲ್ವೇ ನಿಲ್ದಾಣಕ್ಕೆ ಹೊರಟಿದ್ದ ಮಹಿಳೆ ರಸ್ತೆ ಅಪಘಾತದಲ್ಲಿ ಸಾವು

ಮಹಿಳೆಯೊಬ್ಬಳು ಸ್ಕೂಟರ್​ ಸವಾರಿ ಮಾಡುತ್ತಿದ್ದ ವೇಳೆ ತನ್ನ ಮೊಬೈನ್​ ಫೋನ್​ ಬ್ಲಾಸ್ಟ್​ ಆಗಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮಹಿಳೆ ಹೆಲ್ಮೆಟ್​ ಧರಿಸದೆ ಸ್ಕೂಟರ್​ ಸವಾರಿ ಮಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆಯೇ ಮೊಬೈಲ್​ ಬ್ಲಾಸ್ಟ್​ ಆಗಿದೆ.

ಸಾವನ್ನಪ್ಪಿರುವ ಮಹಿಳೆ ಸ್ಕೂಟರ್​ ಸವಾರಿ ಮಾಡುವ ವೇಳೆ ಹೆಲ್ಮೆಟ್​ ಧರಿಸಿರಲಿಲ್ಲ. ಕಿವಿಗೆ ಇಯರ್​ ಫೋನ್​ ಹಾಕಿ ಸಂಚಾರ ಮಾಡುತ್ತಿದ್ದಳು ಎಂದು ಪೊಲಿಸರು ತಿಳಿಸಿದ್ದಾರೆ.

ಮೊಬೈಲ್​ ಬ್ಲಾಸ್ಟ್​ ಆಗುತ್ತಿದ್ದಂತೆಯೇ ಮಹಿಳೆಯ ಸ್ಕೂಟರ್​ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಮಹಿಳೆ ಗಂಭೀರ ಗಾಯಗೊಂಡಿದ್ದಳು. ಕೂಡಲೇ ಸ್ಥಳೀಯರು ಪೊಲಿಸರಿಗೆ ಮಾಹಿತಿ ನೀಡುವ ಮೂಲಕ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತೆಗೆದುಕೊಂಡು ಹೋದಂತೆ ಮಹಿಳೆಯನ್ನು ಪರಿಶೀಲಿಸಿದ ವೈದ್ಯರು ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಟೈರ್​ ಬ್ಲಾಸ್ಟ್​ ಆಗಿ ದ್ವಿಚಕ್ರ ವಾಹನಕ್ಕೆ ಗುದ್ದಿದ ಕಾರು.. ನಡು ರಸ್ತೆಯಲ್ಲೇ ಪಲ್ಟಿ.. 2 ಸಾವು, 7 ಮಂದಿಗೆ ಗಂಭೀರ ಗಾಯ

ಸಾವನ್ನಪ್ಪಿದ ಮಹಿಳೆಯನ್ನು ಪೂಜಾ(28) ಎಂದು ಗುರುತಿಸಲಾಗಿದೆ. ನೆಹ್ರರಿಯಾ ಗ್ರಾಮದ ಫರೂಖಾಬಾದ್​​ ಜಿಲ್ಲೆಯವಳಾಗಿರುವ ಪೂಜಾ ರೈಲು ನಿಲ್ದಾಣಕ್ಕೆ ಸ್ಕೂಟರ್​ನಲ್ಲಿ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮುಂಬೈಯಿಂದ ಕಾನ್ಪುರ​ ರೈಲ್ವೇ ನಿಲ್ದಾಣಕ್ಕೆ ಹೋಗುವಾಗ ಸಾವನ್ನಪ್ಪಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಕೂಟರ್​​ ಸವಾರಿ ವೇಳೆ ಮೊಬೈಲ್​ ಬ್ಲಾಸ್ಟ್​.. ರಸ್ತೆಗೆಸೆಯಲ್ಪಟ್ಟು ಮಹಿಳೆ ಸಾವು

https://newsfirstlive.com/wp-content/uploads/2024/04/Mobile-blast-1.jpg

Load More