ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೂಗಲ್ಲಿ ರಕ್ತ, ಬಾಯಲ್ಲಿ ನೊರೆ.. ಕ್ಷಣದಲ್ಲೇ ಸಾವು; ವೈದ್ಯರ ವಿರುದ್ಧ ಆರೋಪ

author-image
Bheemappa
Updated On
ಆಸ್ಪತ್ರೆಗೆ ಆರಾಮಾಗಿ ಹೋದವಳು ಶವವಾಗಿ ವಾಪಸ್; ಬೆಂಗಳೂರಲ್ಲಿ ಘೋರ ದುರಂತ; ಏನಾಯ್ತು?
Advertisment
  • ಸಿಲಿಕಾನ್ ಸಿಟಿಯ ವೈದ್ಯರ ನಿರ್ಲಕ್ಷ್ಯಕ್ಕೆ ಇನ್ನೂ ಎಷ್ಟು ಬಲಿಯಾಗಬೇಕು?
  • ಆಸ್ಪತ್ರೆಯೊಂದರ ಸಲಹೆ ಮೇರೆಗೆ ಇನ್ನೊಂದು ಆಸ್ಪತ್ರೆಗೆ ದಾಖಲಾಗಿದ್ರು
  • ಆರಾಮಾಗಿಯೇ ಆಸ್ಪತ್ರೆಗೆ ನಡೆದುಕೊಂಡು ಬಂದಿದ್ದ ಮಹಿಳೆ ಸಾವು

ಬೆಂಗಳೂರು: ಗರ್ಭಕೋಶದಲ್ಲಿ ಗುಳ್ಳೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಆಪರೇಷನ್ ಥಿಯೇಟರ್​ನಲ್ಲಿ ಸಾವನ್ನಪ್ಪಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಮುಖ್ಯ ಕಾರಣವೆಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಶಾಲಾ-ಕಾಲೇಜುಗಳಿಗೆ ರಜೆ.. ಧಾರಾಕಾರ ಮಳೆ, ಜಲಾಶಯಗಳಿಗೆ ಜೀವ ಕಳೆ, ಇನ್ನೂ 4 ದಿನ ವರುಣಾರ್ಭಟ..!

ದಿವ್ಯಾ ಸಾವನ್ನಪ್ಪಿರುವ ಮಹಿಳೆ. ಇವರು 7 ವರ್ಷದ ಹಿಂದೆ ಮದುವೆಯಾಗಿದ್ದರು. ಗರ್ಭಕೋಶದಲ್ಲಿ ಗುಳ್ಳೆ ರೀತಿ ಇದ್ದಿದ್ದರಿಂದ ಮುದ್ರಾ ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮುದ್ರಾ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಯಶವಂತರಪುರದ ತುಳಸಿ ಜೈನ್ ಆಸ್ಪತ್ರೆಗೆ ಮಹಿಳೆ ಬಂದಿದ್ದರು. ಆಸ್ಪತ್ರೆಗೆ ಬರುವಾಗ ಚೆನ್ನಾಗಿಯೇ ನಡೆದುಕೊಂಡು ಬಂದಿದ್ದರು. ಯಾವುದೇ ಸಮಸ್ಯೆ ಇರಲಿಲ್ಲ.

ಇದನ್ನೂ ಓದಿ: ಮಳೆ ನೀರಲ್ಲಿ ನಿಂತ ಇಡೀ ಗ್ರಾಮ.. ಭಾರತೀಯ ಕದಂಬ ನೌಕಾನೆಲೆ ಇದಕ್ಕೆ ಕಾರಣವಾಯ್ತಾ?

publive-image

ಆದರೆ ಆಪರೇಷನ್​ಗೂ ಮುನ್ನಾ ಮಹಿಳೆಗೆ ಇಸಿಜಿ ಸೇರಿದಂತೆ ಎಲ್ಲ ಟೆಸ್ಟ್​ಗಳನ್ನು ಮಾಡಿದ್ದರು. ಇದರಲ್ಲಿ ಎಲ್ಲವೂ ನಾರ್ಮಲ್ ಎಂದು ತೋರಿಸಲಾಗಿದೆ. ಚಿಕ್ಕ ಆಪರೇಷನ್​ ಅಷ್ಟೇ ಎಂದು ವೈದ್ಯರು ಆಪರೇಷನ್ ಥಿಯೇಟರ್​ಗೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದರು. ಆದರೆ ಆಪರೇಷನ್ ಥಿಯೇಟರ್​​ಗೆ ಹೋದ ಕೆಲವೇ ನಿಮಿಷದಲ್ಲಿ ಮಹಿಳೆಯ ಮೂಗಿನಲ್ಲಿ ರಕ್ತ, ಬಾಯಲ್ಲಿ ನೊರೆ ಬಂದಿದೆ.

ಇದನ್ನೂ ಓದಿ: ವಿಶ್ವ ದರ್ಜೆ ಬೌಲರ್​​ಗೆ ಕಾಡಿತ್ತು ಕೊಹ್ಲಿಯಿಂದ ಕೀಳರಿಮೆ -ನಿವೃತ್ತಿ ವೇಳೆ ಸತ್ಯ ಬಿಚ್ಚಿಟ್ಟ ಲೆಜೆಂಡ್..!

ಇದಾದ ಕೆಲವೇ ನಿಮಿಷದಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಈ ಸಂಬಂಧ ಯಶವಂತರಪುರದ ತುಳಸಿ ಜೈನ್ ಆಸ್ಪತ್ರೆ ವೈದ್ಯರ ವಿರುದ್ಧ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಹೀಗಾಗಿದೆ ಎಂದು ಆರೋಪಿಸಿ ಯಶವಂತರಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment