ಅಬಾರ್ಷನ್ ವೇಳೆ ಪ್ರಿಯತಮೆ ಸಾವು.. ಆಕೆಯ ಶವದ ಜೊತೆ ಇಬ್ಬರು ಮುದ್ದಾದ ಮಕ್ಕಳನ್ನೂ ನದಿಗೆ ಎಸೆದು ಸಾಯಿಸಿದ..

author-image
Ganesh
Updated On
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Advertisment
  • ಗರ್ಭಿಣಿ ಮಾಡಿ ಪ್ರಿಯತೆಮೆಯನ್ನು ಕೊಂದ ಪ್ರಿಯಕರ
  • ಅಮ್ಮನ ಕಳೆದುಕೊಂಡು ಅಳುತ್ತಿದ್ದ ಮಕ್ಕಳನ್ನೂ ತಳ್ಳಿದ
  • ಅನುಮಾನ ಬಾರದಂತೆ ದಿನ ಕಳೆದಿದ್ದ ಆರೋಪಿಗಳು ಸಿಕ್ಕಿದ್ದೇಗೆ..?

ಪ್ರಿಯತಮೆ ಹಾಗೂ ಆಕೆಯ ಇಬ್ಬರು ಮುದ್ದಾದ ಮಕ್ಕಳನ್ನು ನದಿಗೆ ಎಸೆದ ಪ್ರಕರಣದಲ್ಲಿ ಪ್ರಿಯಕರ ಸೇರಿ ಇಬ್ಬರು ಆರೋಪಿಗಳನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ಜುಲೈ 8 ರಂದು ನವ ಮುಂಬೈನಲ್ಲಿರುವ ಆಸ್ಪತ್ರೆ ಒಂದರಲ್ಲಿ ಆರೋಪಿಯು ತನ್ನ 25 ವರ್ಷದ ಪ್ರಿಯತಮೆಗೆ ಅಬಾರ್ಷನ್ ಮಾಡಿಸಿಲು ಕರ್ಕೊಂಡು ಬಂದಿದ್ದ. ಈ ವೇಳೆ ತೀವ್ರ ರಕ್ತಸ್ರಾವ ಉಂಟಾಗಿ ಗರ್ಭಿಣಿ ಸಾವನ್ನಪ್ಪಿದ್ದಳು.

ಇದನ್ನೂ ಓದಿ:ಸೂಪರ್ ಸ್ಟಾರ್​​ಗಾಗಿ ಕಪ್ ಗೆಲ್ಲಿಸಿಕೊಟ್ಟ ಹೀರೋಗೆ ಅನ್ಯಾಯ..? ಗುಜರಾತ್ ಟೈಟನ್ಸ್​ನಲ್ಲಿ ಭಾರೀ ಬದಲಾವಣೆ..!

ಲವರ್​ ಅಬಾರ್ಷನ್ ಮಾಡುವ ವೇಳೆ ಸಾವನ್ನಪ್ಪಿದ ಬೆನ್ನಲ್ಲೇ, ಗಜೇಂದ್ರ ತನ್ನ ಸ್ನೇಹಿತ ರವಿಕಾಂತ್​ ಗಾಯಕ್ವಾಡ್​​ನ ಸಹಾಯ ಕೇಳಿದ್ದಾನೆ. ಇಂದ್ರಯಾನಿ ನದಿಗೆ ಆಕೆಯ ಮೃತದೇಹವನ್ನು ಎಸೆಯಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಆಕೆಯ ಮೃತದೇಹ ನದಿಗೆ ಎಸೆದ ಬಳಿಕ ಅವಳ ಐದು ಹಾಗೂ ಎರಡು ವರ್ಷದ ಮಕ್ಕಳು ಜೋರಾಗಿ ಅಳಲು ಶುರುಮಾಡಿದ್ದಾರೆ. ಆಗ ಅವರನ್ನೂ ನದಿಗೆ ತಳ್ಳಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ಸಿಕ್ಕಿರುವ ಮಾಹಿತಿ ಪ್ರಕಾರ.. ಮೃತ ಮಹಿಳೆ ಗಂಡನಿಂದ ದೂರವಾಗಿದ್ದಳು. ನಂತರ ಪ್ರಿಯಕರನ ಜೊತೆ ಸಂಬಂಧದಲ್ಲಿದ್ದು, ಗರ್ಭ ಧರಿಸಿದ್ದಳು. ಆದರೆ ಜುಲೈ 8 ರಂದು ಅಮರ್ ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಆಕೆ ಸಾವನ್ನಪ್ಪಿದ್ದಳು. ಇವರು ಏಜೆಂಟ್ ಮೂಲಕ ಕಾನೂನು ಬಾಹೀರವಾಗಿ ಅಬಾರ್ಷನ್ ಮಾಡಲು ಬಂದಿದ್ದರು ಎನ್ನಲಾಗಿದೆ.

ಇದನ್ನೂ ಓದಿ:Breaking: ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನ ಪತನ.. ಭಾರೀ ಸಾವು ನೋವಿನ ಆತಂಕ..

ಸಿಕ್ಕಿಬಿದ್ದಿದ್ದು ಹೇಗೆ..? 

ಘಟನೆ ನಡೆದ ಹಲವು ದಿನಗಳ ಬಳಿಕ ಈ ವಿಚಾರ ಯಾರಿಗೂ ಗೊತ್ತಾಗಿರಲಿಲ್ಲ. ಇತ್ತ ಮಹಿಳೆ ತನ್ನ ಕುಟುಂಬಸ್ಥರ ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ಅವರು ಪೊಲೀಸರಿಗೆ ನಾಪತ್ತೆ ಆಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯ ಫೋನ್ ನಂಬರ್ ಟ್ರೇಸ್ ಮಾಡಿದ್ದಾರೆ. ಈ ವೇಳೆ ಗಜೇಂದ್ರ ಹಾಗೂ ಆಕೆಯ ನಡುವೆ ಸಂಪರ್ಕ ಇರೋದು ಗೊತ್ತಾಗಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಸಲಿ ವಿಚಾರ ಗೊತ್ತಾಗಿದೆ.

ಇದನ್ನೂ ಓದಿ:ರಾಹುಲ್ ದ್ರಾವಿಡ್​​ IPLಗೆ ರಿಟರ್ನ್​.. KKRಗೆ ಬಿಗ್ ಶಾಕ್.. ಈ ತಂಡದ ನೂತನ ಕೋಚ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment