Advertisment

ದೇಗುಲದ ದ್ವಾರ ಬಾಗಿಲಲ್ಲೇ ಪ್ರಾಣಬಿಟ್ಟ ಮಹಿಳೆ; ಸಾವಿಗೆ ಕಾರಣ ಒಂದು ಮಂಗ..

author-image
Ganesh
Updated On
ದೇಗುಲದ ದ್ವಾರ ಬಾಗಿಲಲ್ಲೇ ಪ್ರಾಣಬಿಟ್ಟ ಮಹಿಳೆ; ಸಾವಿಗೆ ಕಾರಣ ಒಂದು ಮಂಗ..
Advertisment
  • ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ ದಾರುಣ ಘಟನೆ
  • ತರಕಾರಿ ಮಾರುತ್ತಿದ್ದ ಮಹಿಳೆ ದುರ್ಘಟನೆಯಲ್ಲಿ ಸಾವು
  • ಚಂದ್ರಾದೇವಿ ದೇವಸ್ಥಾನದ ದ್ವಾರಬಾಗಿಲಿನಲ್ಲಿ ನಡೆದಿದ್ದು ಏನು?

ಬಾಗಲಕೋಟೆ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಚಂದ್ರಾದೇವಿ ದೇವಸ್ಥಾನದ ದ್ವಾರಬಾಗಿಲಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ದ್ವಾರ ಬಾಗಲಿನ ಕಲ್ಲು ತಲೆ ಮೇಲೆ ಬಿದ್ದು ತರಕಾರಿ ಮಾರುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. ಸುರೇಖಾ ಕಂಬಾರ (44) ಸಾವಿಗೀಡಾದ ಮಹಿಳೆ.

Advertisment

ಸಾವಿಗೆ ಕಾರಣವಾಯ್ತು ಮಂಗ..!
ಆಲಗೂರು ಗ್ರಾಮದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ಈ ಸಂತೆಯಲ್ಲಿ ತರಕಾರಿ ಮಾರಲು ಸುರೇಖಾ ಹೋಗುತ್ತಿದ್ದಳು. ತರಕಾರಿ ಮಾರಾಟದಿಂದ ಬಂದ ಹಣದಿಂದಲೇ ಜೀವನ ಕಟ್ಟಿಕೊಂಡಿದ್ದ ಅವರು, ಇಂದು ಕೂಡ ವ್ಯಾಪಾರಕ್ಕೆ ಹೋಗಿದ್ದರು. ಎಂದಿನಂತೆ ದೇವಾಲಯದ ದ್ವಾರ ಬಾಗಿಲನಲ್ಲಿ ತರಕಾರಿಗಳನ್ನು ಇಟ್ಟುಕೊಂಡು ಕೂತಿದ್ದರು.

ಇದನ್ನೂ ಓದಿ:ಜಿಯೋ-ಏರ್‌ಟೆಲ್​​ಗೆ ನೆಲ ಕಚ್ಚುವ ಆತಂಕ; ಸಂಚಲನ ಸೃಷ್ಟಿಸಿದ TATA-BSNL ಒಪ್ಪಂದ..!

publive-image

ಸಾವು ಹೇಗೆ ಸಂಭವಿಸಿತು..?
ತರಕಾರಿ ಮಾರುತ್ತಿದ್ದ ಸುರೇಖಾಗೆ ಇಂದು ತನ್ನ ಬದುಕಿನ ಕೊನೆಯ ದಿನ ಅನ್ನೋದು ಸಣ್ಣ ಸುಳಿವು ಕೂಡ ಇರಲಿಲ್ಲ. ದೇವಾಲಯದ ಬಳಿಯಿದ್ದ ಮಂಗಗಳು ಅತ್ತಿಂದಿತ್ತ ಓಡಾಟ ನಡೆಸುತ್ತಿದ್ದವು. ಈ ವೇಳೆ ದ್ವಾರ ಬಾಗಿಲಿಗೆ ಮಂಗವೊಂದು ಛಂಗನೇ ಜಿಗಿದಿದೆ. ಮಂಗ ಜಿಗಿಯುತ್ತಿದ್ದಂತೆಯೇ ದ್ವಾರಬಾಗಿಲಿನಲ್ಲಿ ಸಿಮೆಂಟ್ ಕಲ್ಲು ಸುರೇಖಾ ತಲೆ ಮೇಲೆ ಬಿದ್ದಿದೆ.

Advertisment

ಪರಿಣಾಮ ಸುರೇಖಾ ನೆಲಕ್ಕೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುರೇಖಾ ತಲೆಯಿಂದ ತೀವ್ರ ರಕ್ತಸ್ರಾವ ಉಂಟಾಗಿದೆ. ಸುರೇಖಾ ತರಕಾರಿ ಮುರುತ್ತಿದ್ದ ಜಾಗದಲ್ಲೇ ಉಸಿರು ಚೆಲ್ಲಿದ್ದಾರೆ. ಜಮಖಂಡಿ ಗ್ರಾಮಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ದೇಗುಲದ ಆಡಳಿತ ಮಂಡಳಿ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಆಡಳಿತ ಮಂಡಳಿ ದ್ವಾರಬಾಗಿಲಿನ್ನು ಸರಿಯಾಗಿ ನಿರ್ಮಿಸಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment