/newsfirstlive-kannada/media/post_attachments/wp-content/uploads/2025/02/HUSBAND-LOVE.jpg)
ಮಹಾಕುಂಭಮೇಳದಲ್ಲಿ ಒಂದಿಲ್ಲೊಂದು ಘಟನೆ ನಡೆಯುತ್ತಲೇ ಇರುತ್ತವೆ. ಕೆಲವೊಂದಿಷ್ಟು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೋಟ್ಯಾಂತರ ಜನ ಸೇರುವ ಸ್ಥಳದಲ್ಲಿ ಒಂದಿಲ್ಲೊಂದು ವಿಶೇಷ ಘಟನೆ ನಡೆಯುವುದು ಸಾಮಾನ್ಯ. ಈಗ ಮಹಾಕುಂಭಮೇಳದಲ್ಲಿ ನಡೆದ ಒಂದು ಘಟನೆಯ ವಿಡಿಯೋ ವೈರಲ್ ಆಗಿದೆ. ಇಟರ್ನೆಟ್ನಲ್ಲಿ ದೊಡ್ಡ ಸೌಂಡ್ ಮಾಡುತ್ತಿದೆ.
ವಿಡಿಯೋವೊಂದರಲ್ಲಿ ಪತಿ ಕನ್ನಡಿ ಹಿಡಿದುಕೊಂಡಿದ್ದಾನೆ. ಪತ್ನಿ ಕನ್ನಡಿಯನ್ನು ನೋಡಿಕೊಂಡು ಮೇಕಪ್ ಮಾಡಿಕೊಳ್ಳುತ್ತಿದ್ದಾರೆ. ಈ ಒಂದು ವಿಡಿಯೋ ಈಗ ಭಾರೀ ವೈರಲ್ ಆಗಿದೆ.ಪುಟ್ಟ ಪುಟ್ಟ ವಿಷಯಗಳಲ್ಲೂ ಪ್ರೀತಿ ಹೇಗೆ ಆವರಿಸಿಕೊಂಡಿರುತ್ತೆ ಎಂಬುದಕ್ಕೆ ಈ ಒಂದು ವಿಡಿಯೋ ನಿದರ್ಶನವಾಗಿದೆ.
ಇದನ್ನೂ ಓದಿ:10 ಲಕ್ಷಕ್ಕಾಗಿ ಗಂಡನ ಕಿಡ್ನಿ ಮಾರಿಸಿದ ಕಿಲಾಡಿ ಹೆಂಡತಿ; ಆಮೇಲೆ ಆಕೆ ಮಾಡಿದ್ದೇ ಅನಾಹುತ ಕೆಲಸ
ಸದ್ಯ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದೆ. ಇಬ್ಬರ ನಡುವಿನ ಪ್ರೀತಿಯ ಧಾರೆ ಹಾಗೂ ಬಾಂಧ್ಯವದ ಬಗ್ಗೆ ಎಲ್ಲರೂ ಹೊಗಳುತ್ತಿದ್ದಾರೆ. ಇಂತಹ ಸಣ್ಣ ಸಣ್ಣ ವಿಷಯಗಳಲ್ಲಿಯೇ ಪ್ರೀತಿಯ ಪ್ರತಿರೂಪ ವ್ಯಕ್ತವಾಗುವುದು ಎಂದು ಜನರು ಪ್ರತಿಕ್ರಿಯಿಸುತ್ತಿದ್ದಾರೆ. ಪತ್ನಿ ಮೇಕಪ್ ಮಾಡಿಕೊಳ್ಳುತ್ತಿರುವಷ್ಟು ಹೊತ್ತು ಪತಿ ತುಂಬಾ ಸಹನೆಯಿಂದ ಕನ್ನಡಿಯನ್ನು ಹಿಡಿದುಕೊಂಡು ನಿಂತಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಇದನ್ನೂ ಓದಿ: ವಿಮಾನಗಳ ಟಿಕೆಟ್ ಸೋಲ್ಡ್ ಔಟ್.. KKRTC ಇಂದ ಕುಂಭಮೇಳಕ್ಕೆ ವಿಶೇಷ ಬಸ್ ವ್ಯವಸ್ಥೆ
View this post on Instagram
ಇನ್ನು ಸಿಂಗಲ್ಸ್ಗಳು ತಮ್ಮದೇ ಗೋಳನ್ನು ಕಮೆಂಟ್ಸ್ನಲ್ಲಿ ಹಾಕುತ್ತಿದ್ದಾರೆ. ನನ್ನ ಬದುಕಲ್ಲಿ ಡಿಲೀಟ್ ಆದ ಸೀನ್ ಇದು ಎಂದು ಗೋಳಾಡುತ್ತಿದ್ದಾರೆ. ಇನ್ನು ಕೆಲವರು ಮನುಷ್ಯ ಪ್ರೀತಿಯಲ್ಲಿ ಬೀಳುವುದೇ ಈ ಭೂಮಿಯ ಅದ್ಭತದವಾದ ಸೃಷ್ಟಿ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ