ಕ್ರಿಸ್​ಗೇಲ್ ಹೆಸರಲ್ಲಿ ಸಹೋದರನಿಗೆ ₹2.8 ಕೋಟಿ ವಂಚಿಸಿದ ಖತರ್ನಾಕ್ ಲೇಡಿ! ಹಣ ದೋಚಲು ಮಾಡಿದ್ದೇನು?

author-image
Gopal Kulkarni
Updated On
ಕ್ರಿಸ್​ಗೇಲ್ ಹೆಸರಲ್ಲಿ ಸಹೋದರನಿಗೆ ₹2.8 ಕೋಟಿ ವಂಚಿಸಿದ ಖತರ್ನಾಕ್ ಲೇಡಿ! ಹಣ ದೋಚಲು ಮಾಡಿದ್ದೇನು?
Advertisment
  • ಕಾಫಿ ಪೌಡರ್​​ ಕಂಪನಿಗೆ ಬಂಡವಾಳ ಹೂಡಲು ಸಹೋದರಿಗೆ ದುಂಬಾಲು
  • ಕ್ರಿಸ್​ ಗೇಲ್​ ಹೆಸರನ್ನು ಬಳಸಿಕೊಂಡು ಹಣವನ್ನು ಪಡೆದುಕೊಂಡ ಸಹೋದರಿ
  • ಫೇಕ್ ಕಾಫಿ ಪೌಡರ್ ಕಂಪನಿಯ ಹೆಸರು ಬಳಸಿ 2.8 ಕೋಟಿ ರೂಪಾಯಿ ವಂಚನೆ

60 ವರ್ಷ ಹೈದ್ರಾಬಾದ್​​ನ ಮಹಿಳಾ ಉದ್ಯಮಿಯೊಬ್ಬಳು ತನ್ನ ಸಹೋದರನನ್ನ ಸೇರಿ ಒಟ್ಟು ಆರು ಜನರಿಗೆ 5.7 ಕೋಟಿ ರೂಪಾಯಿ ವಂಚನೆ ಮಾಡಿದ್ದಾಳೆ ಅದು ಕೂಡ ಖ್ಯಾತ ಕ್ರಿಕೆಟರ್ ಕ್ರಿಸ್ ಗೇಲ್ ಹೆಸರು ಬಳಸಿಕೊಂಡು. ನಾನು ಸದ್ಯದಲ್ಲಿಯೇ ಒಂದು ಕಾಫಿ ಪೌಡರ್​ ಕಂಪನಿಯಲ್ಲಿ ನಾನು ಹೂಡಿಕೆ ಮಾಡಲಿತ್ತಿದ್ದೇನೆ. ಅದಕ್ಕೆ ಬಂಡವಾಳಗಾರರನ್ನು ಆಕರ್ಷಿಸಲು ಕ್ರಿಸ್ ಗೇಲ್​ ಪ್ರಮೋಟರ್ ಆಗಿ ಬರಲಿದ್ದಾರೆ ಹೀಗಾಗಿ ಇದರಲ್ಲಿ ನೀವು ಇನ್ವೆಸ್ಟ್ ಮಾಡಿ ಎಂದು ಹೇಳಿ ಆರು ಜನರಿಗೆ ವಂಚಿಸಿದ್ದಾಳೆ.

ಆಕೆಯ ಸಹೋದರ ಸೇರಿ ಒಟ್ಟು ಆರು ಜನರು ಈ ಮೋಸಗಾತಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಒಟ್ಟು 5.7 ಕೋಟಿಯ ಬ್ಯುಸಿನೆಸ್ ಇದಾಗಿದ್ದು. ಲಾಭ ಬಂದ ಕೂಡಲೇ ನಿಮಗೆ ನೀವು ಹೂಡಿದ ಬಂಡವಾಳಕ್ಕಿಂತ ಹೆಚ್ಚು ಹಣವನ್ನು ನೀಡುವುದಾಗಿ ಮಹಿಳೆ ಹೇಳಿದ್ದಳಂತೆ. ಇದನ್ನು ನಂಬಿ ದುಡ್ಡು ಹಾಕಿದವರು ಈಗ ಮೋಸಹೋಗಿ ಗೋಳೊ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ:ಬಾಹ್ಯಾಕಾಶದಲ್ಲಿ 9 ತಿಂಗಳು.. ಸುನೀತಾ ವಿಲಿಯಮ್ಸ್‌ಗೆ ನಾಸಾ ಹೆಚ್ಚುವರಿ ಭತ್ಯೆ ಕೊಡುತ್ತಾ? ಇಲ್ಲಿದೆ ಶಾಕಿಂಗ್ ಮಾಹಿತಿ!

ಇದು ನಡೆದಿದ್ದು 2019ರಲ್ಲಿಯೇ ಈ ಮಹಿಳಾ ಉದ್ಯಮಿ ತನ್ನ ಸಹೋದರ ಹಾಗೂ ಆಕೆಯ ಪತ್ನಿಯನ್ನು ನಾನು ಕಾಫಿ ಪೌಡರ್ ಉತ್ಪಾದನಾ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಅದರಲ್ಲಿ ನೀವು ಹೂಡಿಕೆ ಮಾಡಿ. ತಿಂಗಳಿಗೆ ಶೇಕಡಾ 4 ರಷ್ಟ ಹಣ ನಿಮಗೆ ಬರುತ್ತದೆ. ಈ ಕಂಪನಿ ಮೂಲತಃ ಕೀನ್ಯಾ ದೇಶದ್ದು ಇದನ್ನು ಯುಎಸ್​ಗೆ ವಿಸ್ತರಿಸುವ ಯೋಜನೆಯೂ ಇದೆ ಎಂದು ರೀಲ್ ಬಿಟ್ಟಿದ್ದಾಳೆ.

ಇದನ್ನೂ ಓದಿ:ಜಮೀನೇ ಇವರದ್ದಲ್ಲ.. ಅದ್ರಲ್ಲೇ ಸೈಟ್​ ಕೊಡ್ತಾರಂತೆ! ಹುಬ್ಬಳ್ಳಿ-ಧಾರವಾಡದಲ್ಲಿ ‘ಎವರ್​ಗ್ರೀನ್’ ನಾಮ

ಕ್ರಿಸ್ ಗೇಲ್ ನಮ್ಮ ಬ್ರ್ಯಾಂಡ್ ಪ್ರಮೋಷನ್​ಗೆ ಬರ್ತಾರೆ ಅಂತ ನಂಬಿಸಲು, ಗೇಲ್​ ಜೊತೆಗಿದ್ದ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿದ್ದಾಳೆ. ಸಹೋದರಿಯನ್ನು ನಂಬಿ 2.8 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದ ಸಹೋದರ, ತನ್ನ ಉಳಿದ ಕುಟುಂಬದವರು ಹಾಗೂ ಸ್ನೇಹಿತರನ್ನು ಕೂಡ ಹೂಡಿಕೆ ಮಾಡುವಂತೆ ಹೇಳಿದ್ದಾನೆ. ಅವರೆಲ್ಲರೂ ಸೇರಿ ಒಟ್ಟು 2.2 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದ್ದಾರೆ. ಒಟ್ಟು 5.7 ಕೋಟಿ ರೂಪಾಯಿಯನ್ನು ಬಾಚಿಕೊಂಡ ಚಾಲಾಕಿ ಆರಂಭದಲ್ಲಿ ಒಂದಿಷ್ಟು ಹಣವನ್ನು ಹಿಂದಿರುಗಿಸಿದ್ದಾಳೆ. ಬ್ಯುಸಿನೆಸ್ ತುಂಬಾ ಚೆನ್ನಾಗಿ ಹೋಗುತ್ತಿದೆ ಎಂದು ನಂಬಿಸಿದ್ದಾಳೆ.

ಯಾವಾಗ ಹಣ ವಾಪಸ್ ಬರೋದು ನಿಂತಿತೋ ಆಗ ಆತ ತನ್ನ ಮಕ್ಕಳಿಗೆ ಯುಎಸ್​ನ ಘಟಕದ ಆಪರೇಷನ್​ನ ಬಗ್ಗೆ ತಿಳಿದುಕೊಳ್ಳಲು ಹೇಳೀದ್ದಾನೆ. ಅದಕ್ಕೆ ಯಾವುದೇ ಉತ್ತರವೂ ಬಂದಿಲ್ಲ. ಕೊನೆಗೆ 5.7 ಕೋಟಿ ಹೂಡಿಕೆ ಮಾಡಿದ ಸಂತ್ರಸ್ಥರಿಗೆ ವಾಪಸ್ ಸಿಕ್ಕ ಹಣ ಕೇವಲ 90 ಲಕ್ಷ ರೂಪಾಯಿ ಮಾತ್ರ.ಹೀಗಾಗಿ ಆಕೆಯ ಸಹೋದರ ಸೇರಿ ಒಟ್ಟು ಆರು ಜನರು ಆಕೆಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment