/newsfirstlive-kannada/media/post_attachments/wp-content/uploads/2024/05/Call-1.jpg)
ಪತಿ ಮೊಬೈಲ್​​ ಕಿತ್ತುಕೊಂಡನೆಂದು ಪತ್ನಿ ವಿದ್ಯುತ್​ ಶಾಕ್​ ನೀಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮೈನ್​ಪುರಿಯಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ.
33 ವರ್ಷದ ಮಹಿಳೆ ಬೇಬಿ ಯಾದವ್​ ತನ್ನ ಪತಿ ಪ್ರದೀಪ್​ ಸಿಂಗ್ ಮೊಬೈಲ್​ ಕಿತ್ತುಕೊಂಡನೆಂದು ಮೊದಲಿಗೆ ಅಮಲು ಪದಾರ್ಥ ನೀಡಿ ಹಾಸಿಗೆಗೆ ಕಟ್ಟಿ ಹಾಕಿದ್ದಾಳೆ. ನಂತರ ಆತನನ್ನು ಥಳಿಸಿದ್ದಾಳೆ. ಬಳಿಕ ವಿದ್ಯುತ್​ ಶಾಕ್​ ನೀಡಿದ್ದಾಳೆ.
ತಾಯಿಯ ವಿಚಿತ್ರ ವರ್ತನೆಯನ್ನು ಕಂಡ 14 ವರ್ಷದ ಮಗ ತಂದೆಯನ್ನು ಕಾಪಾಡಲು ಮುಂದಾಗಿದ್ದಾನೆ. ಈ ವೇಳೆ ತಾಯಿ ಆತನಿಗೂ ಥಳಿಸಿದ್ದಾಳೆ. ಸದ್ಯ ಪತಿ ಪ್ರದೀಪ್​ ಸೈಫೈ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ: ನಾರಿಯ ಸೀರೆ ಇತಿಹಾಸ.. ಮೊದಲು ಧರಿಸಿದ್ಯಾರು? ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು ಹೇಗೆ?
ಪತಿ ಪ್ರದೀಪ್​ ಸಿಂಗ್​ ಹೇಳುವಂತೆ, ‘ನನ್ನ ಪತ್ನಿ ದಿನಾಲು ಮೊಬೈಲ್​ನಲ್ಲಿ ಮಾತನಾಡುತ್ತಿರುತ್ತಾಳೆ. ನಾನು ಅದನ್ನು ವಿರೋಧಿಸಿದೆ ಮತ್ತು ಆಕೆಯ ಮನೆಯವರಿಗೆ ತಿಳಿಸಿದ್ದೇನೆ. ಇದರಿಂದ ಕೋಪಗೊಂಡ ಆಕೆ ನನಗೆ ಬೆದರಿಕೆ ಹಾಕಿದ್ದಳು. ಕಳೆದ ವಾರ ನನ್ನ ಮತ್ತು ಮಗನ ಮೇಲೆ ಹಲ್ಲೆ ಮಾಡಿದ್ದಾಳೆ, ಕ್ರಿಕೆಟ್​ ಬ್ಯಾಟ್​​ನಿಂದ ಹಲ್ಲೆ ಮಾಡಿದ್ದಾಳೆ ಎಂದು ಹೇಳಿದ್ದಾರೆ.
2007ರಲ್ಲಿ ಪ್ರದೀಪ್​​ ಸಿಂಗ್​ ಔರೈಯಾದ ದಿವಾನ್​ ಸಿಂಗ್​ ಅವರ ಮಗಳಾದ ಬೇಬಿ ಯಾದವ್​ ಅವರನ್ನ ವಿವಾಹವಾಗುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us