newsfirstkannada.com

ಪತ್ನಿಯ ಮೊಬೈಲ್​ ಕಿತ್ತುಕೊಂಡ ಪತಿ; ಕಟ್ಟಿಹಾಕಿ ಥಳಿಸಿ, ವಿದ್ಯುತ್​ ಶಾಕ್​ ಕೊಟ್ಟ ಹೆಂಡತಿ! ಆಮೇಲೇನಾಯ್ತು?

Share :

Published May 31, 2024 at 1:40pm

    ಪ್ರತಿದಿನ ಫೋನ್​ನಲ್ಲೇ ಇರುವ ಹೆಂಡತಿ

    ಪತ್ನಿಯ ವರ್ತನೆ ಕಂಡು ಫೋನ್​ ಕಿತ್ತುಕೊಂಡ ಗಂಡ

    ಗಂಡನಿಗೆ ವಿದ್ಯುತ್​ ಶಾಕ್​ ನೀಡಿ ಕ್ರಿಕೆಟ್​ ಬ್ಯಾಟ್​​ನಿಂದ ಹಲ್ಲೆ

ಪತಿ ಮೊಬೈಲ್​​ ಕಿತ್ತುಕೊಂಡನೆಂದು ಪತ್ನಿ ವಿದ್ಯುತ್​ ಶಾಕ್​ ನೀಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮೈನ್​ಪುರಿಯಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ.

33 ವರ್ಷದ ಮಹಿಳೆ ಬೇಬಿ ಯಾದವ್​ ತನ್ನ ಪತಿ ಪ್ರದೀಪ್​ ಸಿಂಗ್ ಮೊಬೈಲ್​ ಕಿತ್ತುಕೊಂಡನೆಂದು ಮೊದಲಿಗೆ ಅಮಲು ಪದಾರ್ಥ ನೀಡಿ ಹಾಸಿಗೆಗೆ ಕಟ್ಟಿ ಹಾಕಿದ್ದಾಳೆ. ನಂತರ ಆತನನ್ನು ಥಳಿಸಿದ್ದಾಳೆ. ಬಳಿಕ ವಿದ್ಯುತ್​ ಶಾಕ್​ ನೀಡಿದ್ದಾಳೆ.

ತಾಯಿಯ ವಿಚಿತ್ರ ವರ್ತನೆಯನ್ನು ಕಂಡ 14 ವರ್ಷದ ಮಗ ತಂದೆಯನ್ನು ಕಾಪಾಡಲು ಮುಂದಾಗಿದ್ದಾನೆ. ಈ ವೇಳೆ ತಾಯಿ ಆತನಿಗೂ ಥಳಿಸಿದ್ದಾಳೆ. ಸದ್ಯ ಪತಿ ಪ್ರದೀಪ್​ ಸೈಫೈ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: ನಾರಿಯ ಸೀರೆ ಇತಿಹಾಸ.. ಮೊದಲು ಧರಿಸಿದ್ಯಾರು? ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು ಹೇಗೆ?

ಪತಿ ಪ್ರದೀಪ್​ ಸಿಂಗ್​ ಹೇಳುವಂತೆ, ‘ನನ್ನ ಪತ್ನಿ ದಿನಾಲು ಮೊಬೈಲ್​ನಲ್ಲಿ ಮಾತನಾಡುತ್ತಿರುತ್ತಾಳೆ. ನಾನು ಅದನ್ನು ವಿರೋಧಿಸಿದೆ ಮತ್ತು ಆಕೆಯ ಮನೆಯವರಿಗೆ ತಿಳಿಸಿದ್ದೇನೆ. ಇದರಿಂದ ಕೋಪಗೊಂಡ ಆಕೆ ನನಗೆ ಬೆದರಿಕೆ ಹಾಕಿದ್ದಳು. ಕಳೆದ ವಾರ ನನ್ನ ಮತ್ತು ಮಗನ ಮೇಲೆ ಹಲ್ಲೆ ಮಾಡಿದ್ದಾಳೆ, ಕ್ರಿಕೆಟ್​ ಬ್ಯಾಟ್​​ನಿಂದ ಹಲ್ಲೆ ಮಾಡಿದ್ದಾಳೆ ಎಂದು ಹೇಳಿದ್ದಾರೆ.

2007ರಲ್ಲಿ ಪ್ರದೀಪ್​​ ಸಿಂಗ್​ ಔರೈಯಾದ ದಿವಾನ್​ ಸಿಂಗ್​ ಅವರ ಮಗಳಾದ ಬೇಬಿ ಯಾದವ್​ ಅವರನ್ನ ವಿವಾಹವಾಗುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತ್ನಿಯ ಮೊಬೈಲ್​ ಕಿತ್ತುಕೊಂಡ ಪತಿ; ಕಟ್ಟಿಹಾಕಿ ಥಳಿಸಿ, ವಿದ್ಯುತ್​ ಶಾಕ್​ ಕೊಟ್ಟ ಹೆಂಡತಿ! ಆಮೇಲೇನಾಯ್ತು?

https://newsfirstlive.com/wp-content/uploads/2024/05/Call-1.jpg

Load More