/newsfirstlive-kannada/media/post_attachments/wp-content/uploads/2024/08/Maharatsra.jpg)
ಸೆಲ್ಫಿ ಗೀಳಿಗೆ ಯುವತಿಯೊಬ್ಬಳು 100 ಅಡಿ ಆಳಕ್ಕೆ ಬಿದ್ದು ಬದುಕುಳಿದ ಘಟನೆ ದೃಶ್ಯ ಸಮೇತ ಸೆರೆಯಾಗಿದೆ. ಸೆಲ್ಫಿ ಕ್ಲಿಕ್ಕಿಸುವಾಗ ಈ ಅವಾಂತರ ನಡೆದಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಉಂಗಾರ್​ ರಸ್ತೆಯಲ್ಲಿ ಸಿಗುವ ಬೋರ್ನ್​ ಫಾಟ್​ನಲ್ಲಿ ಯುವತಿಯೊಬ್ಬಳು ಸೆಲ್ಫಿ ಕ್ಲಿಕ್ಕಿಸಲು ಮುಂದಾಗುತ್ತಾಳೆ. ಈ ವೇಳೆ ಯುವತಿ 100 ಅಡಿ ಅಳಕ್ಕೆ ಬೀಳುತ್ತಾಳೆ.
ಅದೃಷ್ಟವಶಾತ್​ 100 ಅಡಿ ಅಳಕ್ಕೆ ಬಿದ್ದರೂ ಯುವತಿ ಬದುಕುಳಿದಿದ್ದಾಳೆ. ಕೊನೆಗೆ ಆಕೆಯನ್ನು ಸ್ಥಳೀಯರು ಹಗ್ಗದ ಮೂಲಕ ರಕ್ಷಿಸಿದ್ದಾರೆ. ರಕ್ಷಣೆ ವೇಳೆ ಅಭಿ ಅಭಿ ಎಂದು ಜೋರಾಗಿ ಕೂಗಿದ್ದಾಳೆ.
ಇತ್ತೀಚೆಗೆ ಮುಂಬೈ ಮೂಲದ ಆನ್ವಿ ಕಾಮ್ದಾರ್​ ಎಂಬವರು ಇನ್​​ಸ್ಟಾ ರೀಲ್ಸ್​ ಚಿತ್ರೀಕರಿಸುವಾಗ ಕುಂಬೆ ಜಲಪಾತಕ್ಕೆ ಬಿದ್ದ ಸಾವನ್ನಪ್ಪಿದ್ದಳು. 350 ಅಡಿ ಆಳಕ್ಕೆ ಬಿದ್ದು ಕೊನೆಯುಸಿರೆಳೆದಿದ್ದಳು. ಆದರೀಗ ಇಂತಹದೇ ಮತ್ತೊಂದು ಘಟನೆ ಬೇಳಕಿಗೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us