ಇಂಜಿನಿಯರ್ ಅಂತ ಮದುವೆ ಆಗಿದ್ದ ಕೇಸ್​ಗೆ ಬಿಗ್​ ಟ್ವಿಸ್ಟ್.. ಮಹಿಳೆಯ ಆ ಫೋಟೋಸ್, ವಿಡಿಯೋಸ್ ರಿಲೀಸ್

author-image
Bheemappa
Updated On
ಇಂಜಿನಿಯರ್ ಅಂತ ಮದುವೆ ಆಗಿದ್ದ ಕೇಸ್​ಗೆ ಬಿಗ್​ ಟ್ವಿಸ್ಟ್.. ಮಹಿಳೆಯ ಆ ಫೋಟೋಸ್, ವಿಡಿಯೋಸ್ ರಿಲೀಸ್
Advertisment
  • ಶಾಲಾ ದಿನಗಳಿಂದಲೇ ಮದುವೆಯಾದ ಇಬ್ಬರು ಸ್ನೇಹಿತರು ಆಗಿದ್ರಾ?
  • ಇಂಜಿನಿಯರ್ ಅಂತ ಸುಳ್ಳು ಹೇಳಿ ಮದುವೆ, ಮಹಿಳೆ ಆತ್ಮಹತ್ಯೆ ಯತ್ನ
  • ಪೋಷಕರಿಗೆ, ಹುಡುಗನಿಗೆ ಬೆದರಿಕೆ ಹಾಕಿ ಮದುವೆ ಮಾಡಿದ್ದು ನಿಜನಾ?

ಬೆಳಗಾವಿ: ಇಂಜಿನಿಯರ್ ಅಂತ ಸುಳ್ಳು ಹೇಳಿ ಮದುವೆಯಾಗಿದ್ದಾರೆ ಎಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮಾವ ಕೌಂಟರ್ ಪ್ರಕರಣ ದಾಖಲಿಸಿದ್ದು ಕೇಸ್​ನಲ್ಲಿ ಬಿಜೆಪಿ ಮುಖಂಡರೊಬ್ಬರ ಹೆಸರು ಕೇಳಿ ಬಂದಿದೆ.

ಇದನ್ನೂ ಓದಿ: 1ನೇ ತರಗತಿ ಮಗುವಿನ ಮೇಲೆ ಡ್ಯಾನ್ಸ್​ ಮಾಸ್ಟರ್ ಲೈಂಗಿಕ ದೌರ್ಜನ್ಯ.. ಕೀಚಕನಿಗೆ ಹಿಗ್ಗಾಮುಗ್ಗಾ ಥಳಿತ

ಸುಳ್ಳು ಹೇಳಿ ನಂಬಿಸಿ ಮದುವೆ ಆಗಿದ್ದಾರೆಂದು ಆತ್ಮಹತ್ಯೆಗೆ ಯತ್ನಿಸಿದ್ದ ಕನ್ವಿಕಾ, ಗಂಡ ಗಣೇಶ್ ಹಾಗೂ ಆತನ ಕುಟುಂಬದವರ ಮೇಲೆ ಆರೋಪ ಮಾಡಿದ್ದಳು. ಸದ್ಯ ಈ ಸಂಬಂಧ ಸೊಸೆ ವಿರುದ್ಧ ಕೌಂಟರ್​ ಪ್ರಕರಣ ದಾಖಲಿಸಿರುವ ಆಕೆಯ ಗಂಡನ ತಂದೆ ತಮ್ಮಣ್ಣ ಅವರು, ಪ್ರಕರಣದಲ್ಲಿ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಅವರ ಹೆಸರು ತಳಕು ಹಾಕಿಕೊಂಡಿದೆ. ಈ ಸಂಬಂಧ ಬೆಳಗಾವಿಯ ಕ್ಯಾಂಪ್ ಪೊಲೀಸ್​ ಠಾಣೆಯಲ್ಲಿ ಪೃಥ್ವಿಸಿಂಗ್ ಹಾಗೂ ಸೊಸೆ ಕನ್ವಿಕಾ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಲಕ್ಷ ಲಕ್ಷ ರೂಪಾಯಿ ಸಂಬಳ, ಇಂಜಿನಿಯರ್ ಅಂತ ನಂಬಿಸಿ ಮದುವೆ.. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

publive-image

ಶಾಲಾ ದಿನಗಳಿಂದಲೂ ನನ್ನ ಮಗ ಗಣೇಶ್ ಹಾಗೂ ಕನ್ವಿಕಾ ಇಬ್ಬರು ಸ್ನೇಹಿತರು ಆಗಿದ್ದರು. ಈ ಇಬ್ಬರು ಪ್ರೀತಿ ಮಾಡುತ್ತಿದ್ದಾರೆ. ಅವರಿಗೆ ಮದುವೆ ಮಾಡಬೇಕು ಎಂದು ಪೃಥ್ವಿಸಿಂಗ್ ನಮಗೆ ಕಿರುಕುಳ ನೀಡಿದ್ದನು. ನಮಗೆಲ್ಲ ಬೆದರಿಕೆ ಹಾಕಿ ಗಣೇಶ್ ಜೊತೆ ಕನ್ವಿಕಾ ಮದುವೆ ಮಾಡಿಸಲಾಗಿತ್ತು. ಮದುವೆಯಾದ ಮೇಲೆ ಕನ್ವಿಕಾ ಗಾಂಜಾ, ಸಿಗರೇಟ್, ಮದ್ಯಪಾನ ಮಾಡುತ್ತಿದ್ದಳು. ಬೇರೆ ಯುವಕರ ಜೊತೆಗೆ ಆಕೆ ಸಂಬಂಧ ಹೊಂದಿದ್ದಳು ಎಂದು ಆರೋಪ ಮಾಡಲಾಗಿದೆ. ಅಲ್ಲದೇ ಈ ಸಂಬಂಧದ ಕೆಲ ವಿಡಿಯೋ, ಫೋಟೋಸ್​ಗಳನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:  ನಂಬಿದ್ರೆ ನಂಬಿ ಬಿಟ್ಟರೇ ಬಿಡಿ..! ಒಂದು ಜೊತೆ ಮಾಮೂಲಿ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ

ಪತಿ ಗಣೇಶ್ ಹಾಗೂ ಪೋಷಕರಿಗೆ ಮಾಹಿತಿ ನೀಡದೆ ಎರಡ್ಮೂರು ದಿನ ಕನ್ವಿಕಾ ಟ್ರಿಪ್‌ಗೆ ಹೋಗುತ್ತಿದ್ದರು. ಬಂದ ಮೇಲೆ ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನೆ ಮಾಡಿದರೆ, ಗಂಡನಿಗೆ ಹಾಗೂ ಪೋಷಕರಿಗೆ ಪೃಥ್ವಿಸಿಂಗ್ ಹಾಗೂ ಇವರ ಸಹಚರರು ಧಮ್ಕಿ ಹಾಕುತ್ತಿದ್ದರು. ಹೀಗಾಗಿಯೇ ನಮ್ಮ ಮನೆಗೆ ಅಕ್ರಮವಾಗಿ ಪೃಥ್ವಿಸಿಂಗ್ ಪ್ರವೇಶ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೇ ದುಷ್ಚಟಗಳಿಂದ ಅಂಟಿಕೊಂಡು ತನ್ನಷ್ಟಕ್ಕೆ ತಾನೇ ಆತ್ಮಹತ್ಯೆಗೆ ಕನ್ವಿಕಾ ಯತ್ನಿಸಿದ್ದಳು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment