ಲಕ್ಷ ಲಕ್ಷ ರೂಪಾಯಿ ಸಂಬಳ, ಇಂಜಿನಿಯರ್ ಅಂತ ನಂಬಿಸಿ ಮದುವೆ.. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

author-image
Bheemappa
Updated On
ಇಂಜಿನಿಯರ್ ಅಂತ ಮದುವೆ ಆಗಿದ್ದ ಕೇಸ್​ಗೆ ಬಿಗ್​ ಟ್ವಿಸ್ಟ್.. ಮಹಿಳೆಯ ಆ ಫೋಟೋಸ್, ವಿಡಿಯೋಸ್ ರಿಲೀಸ್
Advertisment
  • ಹೊಸ ವರಸೆ ಶುರು ಮಾಡಿದ್ದ ಗಂಡನ ಕಡೆಯವರು, ಏನದು..?
  • ವರದಕ್ಷಿಣೆ ರೂಪದಲ್ಲಿ ಲಕ್ಷ ಲಕ್ಷ ಹಣ, ಚಿನ್ನಾಭರಣ ಕೊಟ್ಟಿದ್ದರು
  • ಮಾವನ ಮನೆಯಲ್ಲಿ ಸೊಸೆಗೆ ಯಾಕೆ ಕಿರುಕುಳ ನೀಡುತ್ತಿದ್ದರು?

ಬೆಳಗಾವಿ: ಲಕ್ಷ ಲಕ್ಷ ರೂಪಾಯಿ ಸಂಬಳ, ಇಂಜಿನಿಯರ್ ಎಂದು ಸುಳ್ಳು ಹೇಳಿ ಮದುವೆ ಆಗಿದ್ದಾರೆ ಅಂತ ಆರೋಪಿಸಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ:1ನೇ ತರಗತಿ ಮಗುವಿನ ಮೇಲೆ ಡ್ಯಾನ್ಸ್​ ಮಾಸ್ಟರ್ ಲೈಂಗಿಕ ದೌರ್ಜನ್ಯ.. ಕೀಚಕನಿಗೆ ಹಿಗ್ಗಾಮುಗ್ಗಾ ಥಳಿತ

ಕನ್ವಿಕಾ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ. ಈಕೆಯ ಗಂಡ ಗಣೇಶ ಇಂಜಿನಿಯರ್ ಅಂತ ಹೇಳಿ ಮೋಸ ಮಾಡಿದ್ದಾನೆ ಎಂದು ಆರೋಪವಿದೆ. ವಿವಾಹದ ವೇಳೆ 130 ಗ್ರಾಂ ಚಿನ್ನಾಭರಣ ಹಾಗೂ 7 ಲಕ್ಷ ರೂಪಾಯಿಗಳನ್ನು ಮಹಿಳೆಯ ಪೋಷಕರು ವರದಕ್ಷಿಣೆ ರೂಪದಲ್ಲಿ ನೀಡಿದ್ದರು ಎಂದು ಕನ್ವಿಕಾ ಹೇಳುತ್ತಿದ್ದಾರೆ. ವಿವಾಹದ ನಂತರ ಗಂಡ ನಿರುದ್ಯೋಗಿ ಎನ್ನುವುದು ಗೊತ್ತಾಗಿದ್ದು ಕೆಲ ದಿನಗಳವರೆಗೆ ಚೆನ್ನಾಗಿ ನೋಡಿಕೊಂಡರು. ಆದರೆ ಈಗ ಹೊಸ ವರಸೆ ಶುರು ಮಾಡಿದ್ದು ತವರು ಮನೆಯಿಂದ ಮತ್ತೆ ವರದಕ್ಷಿಣೆ ತರುವಂತೆ ಗಂಡ ಹಾಗೂ ಪೋಷಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ನಂಬಿದ್ರೆ ನಂಬಿ ಬಿಟ್ಟರೇ ಬಿಡಿ..! ಒಂದು ಜೊತೆ ಮಾಮೂಲಿ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ

publive-image

ತವರು ಮನೆಯಿಂದ ಹಣ ತರದಿದ್ದರೇ ಒಂದು ಕ್ಷಣವೂ ಮನೆಯಲ್ಲಿರಬೇಡ ಎಂದು ಮಾನಸಿಕ ಕಿರಿಕಿರಿ ನೀಡುತ್ತಿದ್ದಾರೆ. ಹೀಗಾಗಿಯೇ ಈ ವರದಕ್ಷಿಣೆ ಕಿರಿಕಿರಿಗೆ ಬೇಸತ್ತು ನಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ ಎಂದು ಕನ್ವಿಕಾ ಹೇಳಿದ್ದಾರೆ. ಸದ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಕನ್ವಿಕಾ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment