/newsfirstlive-kannada/media/post_attachments/wp-content/uploads/2025/01/4-Babies-Single-Delivery.jpg)
ಮಂಗಳೂರಲ್ಲಿ ಫಾದರ್ ಮುಲ್ಲರ್ ಖಾಸಗಿ ಅಸ್ಪತ್ರೆಯಲ್ಲಿ ತಾಯಿಯೊಬ್ಬರು ಒಂದೇ ಬಾರಿ 4 ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. ಎರಡು ಗಂಡು ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಬಾನೋತ್ ದರ್ಗಾ ಎಂಬವವರಿಗೆ ಸಿಜೇರಿಯನ್ ಮೂಲಕ ಹೆರಿಗೆಯಾಗಿದೆ. ಎನ್​ಐಸಿಯುವಿನಲ್ಲಿ ನಾಲ್ಕು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
/newsfirstlive-kannada/media/post_attachments/wp-content/uploads/2025/01/4-Babies-Single-Delivery-1.jpg)
ಸ್ತ್ರೀರೋಗ ತಜ್ಞೆ ಡಾ. ಜೋಯ್ಲೀನ್ ಡಿ ಅಲ್ಮೇಡಾ ಹೇಳುವ ಪ್ರಕಾರ 7 ಲಕ್ಷ ಜನರಲ್ಲಿ ಒಬ್ಬರು ಮಾತ್ರ ಈ ರೀತಿ ಅಪರೂಪಕ್ಕೆ ಹೆಚ್ಚು ಮಕ್ಕಳಿಗೆ ಜನ್ಮ ನೀಡುತ್ತಾರೆ ಎಂದು ಹೇಳಿದ್ದಾರೆ. ಸದ್ಯ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಬಾನೋತ್ ದರ್ಗಾ ಅವರು ತೆಲಂಗಾಣದ ಮೂಲದವರು ಎಂದು ತಿಳಿದು ಬಂದಿದೆ. ತಾಯಿ ಹಾಗೂ ಮಕ್ಕಳ ಆರೋಗ್ಯ ಸ್ಥಿರವಿದ್ದು ಎನ್​ಐಸಿಯುವಿನಲ್ಲಿ ನಾಲ್ಕು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ಮತ್ತೊಂದು ವಂಚನೆ ಕೇಸ್.. ಐಶ್ವರ್ಯಾ ಗೌಡ ಬಂಧನದ ಬೆನ್ನಲ್ಲೇ ಬಿಡುಗಡೆ; ಏನಿದು ಹೊಸ ಟಿಸ್ಟ್?
ಇನ್ನು ವಿಶ್ವದಲ್ಲಿ ಒಂದೇ ಹೆರಿಗೆಯಲ್ಲಿ ಅತಿಹೆಚ್ಚು ಜನ್ಮ ನೀಡಿದ ದಾಖಲೆ ಮೊರೆಕ್ಕಾದ ಕಾಸಾಬ್ಲಾನ್ಕಾದಲ್ಲಿ ಹಲೀಮಾ ಸಿಸ್ಸೇ ಎಂಬುವವರು ನೀಡಿದ್ದು ಗಿನ್ನಿಸ್ ರೆಕಾರ್ಡ್​ನಲ್ಲಿ ಅವರ ಹೆಸರು ದಾಖಲಾಗಿದೆ. 2021ರಲ್ಲಿ ಹಲೀಮಾ ಸಿಸ್ಸೆ ಎಂಬುವವರು ಒಟ್ಟು 9 ಜನ ಮಕ್ಕಳಿಗೆ ಜನ್ಮ ನೀಡಿ ಗಿನ್ನಿಸ್ ರೆಕಾರ್ಡ್ ದಾಖಲಿಸಿದ್ದರು. ಇದಕ್ಕೂ ಮೊದಲು 2009ರಲ್ಲಿ ನಾದ್ಯಾ ಸುಲೇಮನ್ ಎಂಬುವವರು 8 ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us