/newsfirstlive-kannada/media/post_attachments/wp-content/uploads/2024/11/LADY-ON-TRANSFORMER.jpg)
ಸೋಷಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ಕೆಂಪು ಸ್ಕರ್ಟ್, ಕಪ್ಪು ಬಟ್ಟೆ ಹಾಕಿಕೊಂಡು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೇರಿ ಕುಳಿತು ಹುಚ್ಚಾಟ ನಡೆಸಿದ ಒಂದು ವಿಡಿಯೋ ವೈರಲ್ ಆಗುತ್ತಿದೆ. ಯುಎಸ್ನ ಸಾಲ್ಟ್ ಲೇಕ್ ಸಿಟಿಯಲ್ಲಿ ಈ ಒಂದು ಘಟನೆ ನಡೆದಿದ್ದು ಈ ಯುವತಿಯ ಹುಚ್ಚಾಟದಿಂದಾಗಿ ಒಟ್ಟು 800 ಮನೆಗಳು ವಿದ್ಯುತ್ ಕಡಿತದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು.
ಪೊಲೀಸರು ಹೇಳುವ ಪ್ರಕಾರ ಯುವತಿ ಮಾನಸಿಕವಾಗಿ ಕೊಂಚ ಸಮಸ್ಯೆಯನ್ನು ಹೊಂದಿದ್ದಾಳೆ. ಅವಳ ತಲೆಯಲ್ಲಿ ಏನು ಬಂತೋ ಗೊತ್ತಿಲ್ಲ. ಏಕಾಏಕಿ ದೈತ್ಯ ವಿದ್ಯುತ್ ಕಂಬ ಏರಿ ಅಲ್ಲಿ ಜೋಡಿಸಲಾಗಿರುವ ದೈತ್ಯ ಸಿಲಿಂಡರ್ಗಳನ್ನು ಹಿಡಿದುಕೊಂಡು ನಿಂತಿದ್ದಾಳೆ. ಬಳಿಕ ಹೈವೊಲ್ಟೇಜ್ ಇರುವ ವಿದ್ಯುತ್ ತಂತಿಗಳ ಮೇಲೆ ಬಳ್ಳಿ ಜೋತು ಬಿದ್ದದಂತೆ ಜೋತು ಬಿದ್ದಿದ್ದಾಳೆ. ಆಕೆಯನ್ನು ಕಾಪಾಡಲು ಹರಸಾಹಸ ಪಡಬೇಕಾಯ್ತು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಸಂಸತ್ತಿನಲ್ಲಿ ಡಾನ್ಸ್ ಮಾಡಿ ವೈರಲ್ ಆದ ಸಂಸದೆ ಯಾರು? ಹನಾ ರವೈಟಿ ಹಿನ್ನೆಲೆ ಏನು? ಇಲ್ಲಿವೆ ಇಂಟರೆಸ್ಟಿಂಗ್ ಮಾಹಿತಿಗಳು!
🚨#BREAKING: More than 800 Utah Homes Lost Power After Woman Climbs on a High Voltage Transformer Inside Substation
Authorities and electric crews responded to a call in Salt Lake City, Utah, after a woman damaged power equipment and climbed a… pic.twitter.com/pDDgRn3jqW
— R A W S A L E R T S (@rawsalerts)
🚨#BREAKING: More than 800 Utah Homes Lost Power After Woman Climbs on a High Voltage Transformer Inside Substation
📌#SaltLakeCity | #Utah
Authorities and electric crews responded to a call in Salt Lake City, Utah, after a woman damaged power equipment and climbed a… pic.twitter.com/pDDgRn3jqW— R A W S A L E R T S (@rawsalerts) November 14, 2024
">November 14, 2024
ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳ ಹಾಗೂ ಆಂಬ್ಯುಲೆನ್ಸ್ ಸೇವೆ ಎಲ್ಲವೂ ಕೂಡ ಸ್ಥಳದಲ್ಲಿ ಬಿಡಾರ ಹೂಡಿದ್ದವು. ಯುವತಿಯ ರಕ್ಷಣೆಗಾಗಿ ಚೆರಿಽ ಪಿಕರ್ಗಳನ್ನು ಕೂಡ ಸ್ಥಳಕ್ಕೆ ತರಲಾಗಿತ್ತು. ಪೊಲೀಸ್ ಅಧಿಕಾರಿಗಳಿ ಚೆರಿಽ ಪಿಕರ್ನಲ್ಲಿ ಇಳಿಯುವಂತೆ ಯುವತಿಯನ್ನು ಕೇಳಿಕೊಂಡಿದ್ದಾರೆ. ಆದರೂ ಕೂಡ ಪೊಲೀಸರ ಮಾತನ್ನು ಆಕೆ ಕೇಳಿಲ್ಲ. ಒಂದು ವೇಳೆ ಅಲ್ಲಿಂದ ಕೆಳಗೆ ಇಳಿಯದೇ ಇದ್ದರೆ ಶೂಟ್ ಮಾಡುವುದಾಗಿ ಪೊಲೀಸರು ಬೆದರಿಸಿದ್ದಾರೆ ಆದರೂ ಕೂಡ ಆಕೆ ತನ್ನ ಹುಚ್ಚಾಟವನ್ನು ಮುಂದುವರಿಸಿದ್ದಾಳೆ. ಕೊನೆಗೆ ಲೆಸ್ ಲೆಥಲ್ ಗನ್ನಿಂದ ಅನಿವಾರ್ಯವಾಗಿ ಶೂಟ್ ಮಾಡಿದ್ದರೆ.
ಇದನ್ನೂ ಓದಿ:ಕಳೆದ 6 ವರ್ಷಗಳಿಂದ ಈ ದೇಶದ ಜೈಲುಗಳಲ್ಲಿ ಕೈದಿಗಳೇ ಇಲ್ಲ! ಇದೇ ಅಲ್ಲವೇ ಅಸಲಿ ರಾಮರಾಜ್ಯ
ಗುಂಡು ಆಕೆಗೆ ತಗುಲುದ್ದಿದ್ದಂತೆ ಕುಸಿದು ಹೋದ ಯುವತಿ ಕೊನೆಗೆ ಚೆರಿಽ ಪಿಕ್ಕರ್ನಲ್ಲಿ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದೃಶ್ಯವನ್ನು ಕಣ್ಣಾರೆ ಕಂಡ ವ್ಯಕ್ತಿಗಳು ಹೇಳುವ ಪ್ರಕಾರ ಆಕೆ ವಿದ್ಯುತ್ ಕಂಬವನ್ನು ಏರಿ ಈ ಜಗತ್ತು ನನಗೆ ಹಾಗೂ ನನ್ನ ಮಕ್ಕಳಿಗೆ ಸುರಕ್ಷಿತವಲ್ಲ ಎಂದು ಹೇಳುತ್ತಿದ್ದಳಂತೆ. ನಾವು ಆಕೆ ಸುರಕ್ಷಿತವಾಗಿ ಕೆಳಗೆ ಇಳಿಯಲಿ ಎಂದು ಪ್ರಾರ್ಥಿಸುತ್ತಿದ್ದೇವು, ಕೊನೆಗೂ ಈ ಒಂದು ಸನ್ನಿವೇಶ ಸುಖಾಂತ್ಯಗೊಂಡಿದ್ದು ಸಂತಸವನ್ನುಂಟು ಮಾಡಿದೆ ಎಂದು ಪ್ರತ್ಯಕ್ಷದರ್ಶಿ ಕೆಂಟ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ