/newsfirstlive-kannada/media/post_attachments/wp-content/uploads/2024/12/PARCEL-SHOCK.jpg)
ಆಂಧ್ರಪ್ರದೇಶದ ದಕ್ಷಿಣ ಗೋದಾವರಿ ಜಿಲ್ಲೆಯಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಪಾರ್ಸೆಲ್​ವೊಂದನ್ನು ಬಿಚ್ಚಿ ನೋಡಿದಾಗ ಮೃತದೇಹ ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ಒಂದು ಘಟನೆ ದಕ್ಷಿಣ ಗೋದಾವರಿ ಜಿಲ್ಲೆಯ ಉಂಡಿಮಂಡಲ್​ನ ಯೆಂಡಗಂಡಿಯಲ್ಲಿ ನಡೆದಿದೆ.ತುಳಸಿ ಎಂಬ ಮಹಿಳೆ ಕ್ಷತ್ರೀಯ ಸೇವಾ ಸಮಿತಿಯ ಬಳಿ ಮನೆ ಕಟ್ಟಿಸುವ ಸಲುವಾಗಿ ಹಣಕಾಸಿನ ಸಹಾಯ ಕೇಳಿಕೊಂಡು ಅರ್ಜಿ ಹಾಕಿದ್ದರು. ಸಮಿತಿ ಮಹಿಳೆಗೆ ಒಂದಿಷ್ಟು ಟೈಲ್ಸ್​ಗಳನ್ನು ಕಳುಹಿಸಿತ್ತು. ಆದ್ರೆ ಬಂದ್ ಪಾರ್ಸೆಲ್​ನಲ್ಲಿ 45 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹವೂ ಕೂಡ ಇತ್ತು. ಅದರೊಂದಿಗೆ ಒಂದು ಲೆಟರ್ ಕೂಡ ಇತ್ತು. ಕೆಲವು ವರ್ಷಗಳ ಹಿಂದೆ ತೆಗೆದುಕೊಂಡ ಸಾಲ ಈಗ ಒಂದು ಕೋಟಿ ರೂಪಾಯಿಗೆ ಆಗಿದೆ ಕೂಡಲೇ ಅದನ್ನು ಪಾವತಿಸುವಂತೆ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿತ್ತು.
ಗುರುವಾರ ರಾತ್ರಿ ಈ ಕುಟುಂಬದ ಮನೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಬಂದಿತ್ತು. ಘಟನೆಯನ್ನು ತಿಳಿದ ಜಿಲ್ಲಾ ಎಸ್​ಪಿ ಅಡ್ನಾನ್ ನಯೀಮ್ ಅಸ್ಮಿ ಈ ಒಂದು ಬಾಕ್ಸ್​ ಗುರುವಾರ ರಾತ್ರಿ ಬಂದಿದೆ ಈ ಹಿಂದೆ ತೆಗೆದುಕೊಂಡ ಸಾಲ 1.35 ಕೋಟಿ ರೂಪಾಯಿಯನ್ನು ಕೂಡಲೇ ನೀಡುವಂತೆ ಆ ಪತ್ರದಲ್ಲಿ ಬರೆಯಲಾಗಿತ್ತು.ಸದ್ಯ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆಯನ್ನು ಕೈಗೊಂಡಿದ್ದಾರೆ.
ಪೊಲೀಸರು ಹೇಳುವ ಪ್ರಕಾರ ಮೃತದೇಹವಿದ್ದ ಬಾಕ್ಸ್​ ಸಾಗಿ ತುಳಸಿಯವರ ಮನೆ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಆಟೋರಿಕ್ಷಾ ಮೂಲಕ ತಂದು ಇಡಲಾಗಿದೆ ಎಂದು ಹೇಳಿದ್ದಾರೆ. ಇನ್ನೂ ಒಂದು ಅಚ್ಚರಿಯ ವಿಷಯ ಅಂದ್ರೆ ತುಳಸಿ ಅವರ ಪತಿ ಕಳೆದ 10 ವರ್ಷಗಳಿಂದ ನಾಪತ್ತೆಯಾಗಿದ್ದಾರೆ. ಇಂದಿಗೂ ಕೂಡ ಮನೆಗೆ ಬಂದಿಲ್ಲ.
/newsfirstlive-kannada/media/post_attachments/wp-content/uploads/2024/12/PARCEL-SHOCK-1.jpg)
ಅಂದಿನಿಂದ ತುಳಸಿ ತಮ್ಮ ತಂದೆ ತಾಯಿಯ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಪೊಲೀಸರು ಹೇಳುವ ಪ್ರಕಾರ ತುಳಸಿ ತನ್ನ ತಂಗಿ ವಾಪಸ್ ಮನೆಗೆ ಬರುವರೆಗೂ ತಂದೆ ತಾಯಿಯ ಜೊತೆಗೆ ಇದ್ದರು. ನಂತರ ಅವರು ಬಾಡಿಗೆ ಮನೆಗೆ ಶಿಫ್ಟ್ ಆದರು. ಅದಾದ ಕೆಲವು ದಿನಗಳ ಬಳಿಕ ತುಳಸಿ ತನ್ನದೇ ಆದ ಒಂದು ಮನೆಯನ್ನು ಕಟ್ಟಲು ಆರಂಭಿಸಿದರು. ಪರೋಪಕಾರಿ ಸಂಸ್ಥೆಗಳ ಮೂಲಕ ಹಣಕಾಸಿನ ನೆರವನ್ನು ಪಡೆದು ಮನೆ ಕಟ್ಟಲು ಆರಂಭಿಸಿದ್ದರು. ಸೆಪ್ಟಂಬರ್​ನಲ್ಲಿ ಒಂದು ಸಂಸ್ಥೆ ಟೈಲ್ಸ್ ಮತ್ತು ಪೇಂಟ್​ನ್ನು ನೀಡಿತ್ತು.
ಇದನ್ನೂ ಓದಿ: ಮಧ್ಯರಾತ್ರಿ ಹೆಣ್ಣುಮಕ್ಕಳಿಗೆ ಲಿಫ್ಟ್​​ ಕೊಡೋ ಮುನ್ನ ಎಚ್ಚರ! ಪುರುಷರು ಓದಲೇಬೇಕಾದ ಸ್ಟೋರಿ
ಇನ್ನು ಒಂದು ವಿಚಾರ ಅಂದ್ರೆ ಒಂದು ಅನಾಮಿಕ NGO ತುಳಸಿ ಅವರಿಗೆ ನಾವು ಒಂದೇ ಜಾತಿಗೆ ಸೇರಿದವರು ಅದು ಅಲ್ಲದೇ ನೀವು ವಿಧವೆ ಬೇರೆ ಹೀಗಾಗಿ ನಾವು ನಿಮಗೆ ಸಹಾಯ ಮಾಡುತ್ತಿದ್ದೇವೆ ಎಂದು ಪತ್ರವನ್ನು ಬರೆದಿತ್ತು. ಅದರ ಜೊತೆಗೆ ಗುರುವಾರದಂದು ತುಳಸಿಗೆ ಒಂದು ಮೆಸೇಜ್ ಬಂದಿತ್ತು. ನಿಮ್ಮೆ ಮನೆಯ ಕಡೆಗೆ ನಾವು ಒಂದಿಷ್ಟು ಎಲೆಕ್ಟ್ರಿಕಲ್ ಸರುಕುಗಳನ್ನು ಕಳುಹಿಸಿದ್ದೇವೆ ಎಂದು ಹೇಳಲಾಗಿತ್ತು ಅದರೊಂದಿಗೆ ಈ ಅಪರಿಚಿತ ವ್ಯಕ್ತಿಯ ಕಳೆಬರಹವು ಕೂಡ ಇತ್ತು.
ಇದನ್ನೂ ಓದಿ:Breaking: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ನಿಧನ
ಅದನ್ನು ಕಂಡ ತುಳಸಿ ಕುಟುಂಬದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ರದಲ್ಲಿ ಬರೆದಿರುವ ಪ್ರಕಾರ ಅವರ ಪತಿ 2008 ರಲ್ಲಿ 3 ಲಕ್ಷ ರೂಪಾಯಿ ಸಾಲ ಪಡೆದಿದ್ದರಂತೆ. ಅದು ಈಗ ಬಡ್ಡಿಯೆಲ್ಲಾ ಸೇರಿ 1.35 ಕೋಟಿ ರೂಪಾಯಿ ಆಗಿದೆಯಂತೆ. ಒಂದು ವೇಳೆ ನಿಮಗೆ ಏನೂ ಆಗಬಾರದು ಅಂತ ಇದ್ರೆ ನೀವು ಕೂಡಲೇ ಆ ಮೊತ್ತವನ್ನು ಪಾವತಿ ಮಾಡಿ ಎಂದು ಬರೆಯಲಾತ್ತಂತೆ. ಆದರೆ ತುಳಿಸಿ ಕುಟುಂಬ ಹೇಳುವ ಪ್ರಕಾರ ಈ ತರಹದ ಯಾವುದೇ ಹಣಕಾಸು ವ್ಯವಹಾರವನ್ನು ನಾವು ಮಾಡಿಲ್ಲ ಎನ್ನುತ್ತಿದೆ.
ಇನ್ನು ಈ ಪ್ರಕರಣದಲ್ಲಿ ಆಸ್ತಿಯ ವ್ಯಾಜ್ಯವೂ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಸದ್ಯ ನಾವು ಕಳೆದ ನಾಲ್ಕೈದು ದಿನಗಳಲ್ಲಿ ಮಿಸ್ಸಿಂಗ್ ಆಗಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಪೋಸ್ಟ್ ಮಾರ್ಟಮ್ ವರದಿ ಬಂದಮೇಲೆ ನಮಗೆ ಸ್ಪಷ್ಟವಾದ ಮಾಹಿತಿ ಸಿಗುತ್ತದೆ ಎಂದು ಎಸ್​ಪಿ ಅಸ್ಮಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us