ಅಗತ್ಯಕ್ಕಿಂತ ಹೆಚ್ಚು ತಿಂದು ನಾಯಿ ಸಾವು- ಶ್ವಾನ ಸಾಕಿದ್ದ ಮಹಿಳೆಗೆ ಜೈಲು ಶಿಕ್ಷೆ..

author-image
Ganesh
Updated On
ಅಗತ್ಯಕ್ಕಿಂತ ಹೆಚ್ಚು ತಿಂದು ನಾಯಿ ಸಾವು- ಶ್ವಾನ ಸಾಕಿದ್ದ ಮಹಿಳೆಗೆ ಜೈಲು ಶಿಕ್ಷೆ..
Advertisment
  • ನಾಯಿಗಳಿಗೆ ಮಿತಿ ಮೀರಿ ಆಹಾರ ಕೊಡೋದಕ್ಕೂ ಮೊದಲು ಯೋಚಿಸಿ
  • ನಾಯಿ ಕೊಂದ ನಾರಿಗೆ ಕೋರ್ಟ್​ ಏನೆಲ್ಲ ಶಿಕ್ಷೆ ನೀಡಿದೆ ಗೊತ್ತಾ..?
  • 10 ಮೀಟರ್ ದೂರ ನಡೆಯಲು 3 ಬಾರಿ ನಿಂತಿದ್ದ ಮುದ್ದಿನ ನಾಯಿ

ಬೀದಿ ನಾಯಿಗಳಿಗೆ ಮತ್ತು ನಿಮ್ಮ ಸಾಕು ನಾಯಿಗಳಿಗೆ ಮಿತಿ ಮೀರಿ ಆಹಾರ ಹಾಕುವುದಕ್ಕೂ ಮೊದಲು ಒಮ್ಮೆ ಯೋಚಿಸಿ. ಇಲ್ಲದಿದ್ದರೆ ನೀವು ಒಂದು ದಿನ ಜೈಲು ಸೇರಬೇಕಾದೀತು ಹುಷಾರ್​! ಯಾಕೆಂದರೆ ಅವು ಕೊಟ್ಟಷ್ಟೂ ಆಹಾರವನ್ನು ಸೇವಿಸಿ ಬಿಡುತ್ತವೆ. ಆಮೇಲಿ ಫಜೀತಿಗೆ ಸಿಲುಕೋದು ನೀವೇ! ಹೀಗೆ ಮಹಿಳೆಯೊಬ್ಬರು ತನ್ನ ನೆಚ್ಚಿನ ನಾಯಿಗೆ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಕೊಡುತ್ತಿದ್ದ ಪರಿಣಾಮ ಮುಂದೆ ಒಂದು ದಿನ ಆ ನಾಯಿ ಸತ್ತು ಹೋಗಿದೆ.

ಏನಿದು ಪ್ರಕರಣ..?

ಅಂದ್ಹಾಗೆ ಈ ಪ್ರಸಂಗ ನಡೆದಿರೋದು ಭಾರತದಲ್ಲಿ ಅಲ್ಲ. ನ್ಯೂಜಿಲೆಂಡ್​ನ ಅಕ್ಲೆಂಡ್​ (Auckland)ನಲ್ಲಿ. ಮಹಿಳೆಯೊಬ್ಬರಿಗೆ ನಾಯಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಅದರಂತೆ ಒಂದು ನಾಯಿಯನ್ನು ಮುದ್ದಿನಿಂದ ಸಾಕಿದ್ದಳು. ಅದರ ಮೇಲಿನ ಅತಿಯಾದ ಪ್ರೀತಿಯಿಂದ ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ನೀಡುತ್ತಿದ್ದಳು.

ಪರಿಣಾಮ ಆ ನಾಯಿ ದೈತ್ಯಾಕಾರವಾಗಿ ಬೆಳೆಯಲು ಶುರುವಾಯಿತು. ಅದರ ತೂಕವು 53.7 ಕೆಜಿಗೆ ಏರಿ ಬಿಟ್ಟಿತ್ತು. ತುಂಬಾ ಕೊಬ್ಬಿದ್ದರಿಂದ ಅದರ ಎದೆಬಡಿತದಲ್ಲಿ ದೋಷ ಕಂಡು ಬಂದಿತ್ತು. ಜೊತೆಗೆ ಕಾಂಜಂಕ್ಟಿವಿಟಿಸ್ ಇತ್ತು ಮತ್ತು ಅದರ ಉಗುರುಗಳು ಮಿತಿ ಮೀರಿ ಬೆಳೆದಿದ್ದವು. ಅದರ ಪರಿಸ್ಥಿತಿ ಎಷ್ಟು ಹದಗೆಟ್ಟಿತು ಅಂದರೆ 10 ಮೀಟರ್ ದೂರ ನಡೆಯಲು ಮೂರು ಬಾರಿ ನೆಲ್ಲಬೇಕಾದ ಪರಿಸ್ಥಿತಿ ಇತ್ತು. ಕೊನೆಗೆ ಒಂದು ದಿನ ಅದು ಸತ್ತೇ ಹೋಗಿದೆ.

ಇದನ್ನೂ ಓದಿ:MS ಧೋನಿ ಅಭಿಮಾನಿಗಳಿಗೆ ಕೊನೆಗೂ ಸಿಕ್ಕೇಬಿಡ್ತು ಗುಡ್​ನ್ಯೂಸ್​..

ರಾಯಲ್ ನ್ಯೂಜಿಲೆಂಡ್ ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೌಲ್ಟಿ ಟು ಅನಿಮಲ್ಸ್ (SPCA) ಪ್ರಕಾರ, ಪ್ರಾಣಿ ನಿಯಂತ್ರಣ ಅಧಿಕಾರಿಗಳು ಅಕ್ಟೋಬರ್ 2021ರಲ್ಲಿ ಈ ಮಹಿಳೆಯ ನಿವಾಸಕ್ಕೆ ಭೇಟಿ ನೀಡಿದ್ದರು. ಮಹಿಳೆ ಮನೆಗೆ ಭೇಟಿ ನೀಡಿದ ವೇಳೆ ನುಗ್ಗಿ ಎಂಬ ನಾಯಿ ಪರಿಸ್ಥಿತಿ ನೋಡಿದ್ದರು. ನಾಯಿ ಸತ್ತಾಗ ಈ ಪ್ರಕರಣವು ಕೋರ್ಟ್​ ಮೆಟ್ಟಿಲೇರಿತ್ತು. ಕೊನೆಗೆ ನಾಯಿಯ ಮಾಲೀಕನನ್ನು ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ನಾಯಿಗೆ ಬಿಸ್ಕತ್ ಹೊರತಾಗಿ ಪ್ರತಿದಿನ 8 ರಿಂದ 10 ಚಿಕನ್ ತುಂಡುಗಳನ್ನು ನೀಡಿರುವ ಬಗ್ಗೆ ಗೊತ್ತಾಗಿದೆ.

ಮಿತಿ ಮೀರಿ ಆಹಾರ ನೀಡಿ ನಾಯಿ ಸಾವಿಗೆ ಕಾರಣಳಾದ ಮಹಿಳೆಗೆ ಕೋರ್ಟ್​ ಶಿಕ್ಷೆ ವಿಧಿಸಿದೆ. ಅಲ್ಲಿನ Manukau ಜಿಲ್ಲಾ ನ್ಯಾಯಾಲಯವು ಎರಡು ತಿಂಗಳ ಜೈಲು ಶಿಕ್ಷೆಯನ್ನು ನೀಡಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಅಲ್ಲದೇ ಮುಂದಿನ ಒಂದು ವರ್ಷಗಳ ಕಾಲ ನೀವು ಯಾವುದೇ ನಾಯಿಗಳನ್ನು ಸಾಕುವಂತಿಲ್ಲ ಎಂದು ತಾಕೀತು ಮಾಡಿ ಆದೇಶ ನೀಡಿದೆ.

ಇದನ್ನೂ ಓದಿ:ರೀಚಾರ್ಜ್ ಬೆಲೆ ಏರಿಸಿದ್ದ ಕಂಪನಿಗಳಿಗೆ TRAI ಗುನ್ನಾ.. ಮತ್ತೆ ಕಡಿಮೆ ಬೆಲೆಗೆ ಹೊಸ ಪ್ಲಾನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment