VIDEO: ಸಾಕಿದ ಬೆಕ್ಕಿನಂತೆ ಸಿಂಹವನ್ನು ಮುದ್ದಾಡಿದ ಮಹಿಳೆ; ವಿಡಿಯೋ ವೈರಲ್

author-image
Gopal Kulkarni
Updated On
VIDEO: ಸಾಕಿದ ಬೆಕ್ಕಿನಂತೆ ಸಿಂಹವನ್ನು ಮುದ್ದಾಡಿದ ಮಹಿಳೆ; ವಿಡಿಯೋ ವೈರಲ್
Advertisment
  • ಸಿಂಹವನ್ನು ಮುದ್ದಾಡಿದ ಮಹಿಳೆಯ ವಿಡಿಯೋ ವೈರಲ್
  • ಮಹಿಳೆಯ ತೊಡೆಯ ಮೇಲೆ ಹಾಯಾಗಿ ಮಲಗಿರುವ ಸಿಂಹ
  • ಇದು ಅಪಾಯವನ್ನು ತಂದೊಡ್ಡುವ ಕೆಲಸ ಎಂದ ನೆಟ್ಟಿಗರು

ಸಿಂಹ ಅಂದ ಕೂಡಲೇ ನಮಗೆ ಮೊದಲು ನೆನಪಾಗುವುದು ಅದರ ಆಕ್ರಮಣಕಾರಿತನ ಹಾಗೂ ಇಡೀ ಕಾಡಿಗೆ ರಾಜನಂತೆ ಬದುಕುವ ಅದರ ಜೀವನ. ಪರಭಕ್ಷಕ ಪ್ರಾಣಿಗಳಲ್ಲಿಯೇ ಅತ್ಯಂತ ಅಪಾಯಕಾರಿ ಪ್ರಾಣಿ ಅಂದ್ರೆ ಅದು ಸಿಂಹ. ಅದರ ಘರ್ಜನೆ ಹಾಗೂ ಲುಕ್​ನಿಂದ ಮಾತ್ರವಲ್ಲ, ಅದರ ಬೇಟೆಯಾಡುವ ಶೈಲಿಯಲ್ಲಿಯೂ ವಿಭಿನ್ನವಾಗಿ ಗುರುತಿಸಿಕೊಳ್ಳುವ ವನ್ಯಜೀವಿ.

ಇಂತಹ ಸಿಂಹ ಎದುರಿಗೆ ಬಂದಾಗ ಬೆಚ್ಚಿ ಬೀಳುವವರೆ ಹೆಚ್ಚು, ತಪ್ಪಿಸಿಕೊಂಡು ಓಡುವವರೇ ಜಾಸ್ತಿ. ಆದ್ರೆ ಇಲ್ಲೊಬ್ಬ ಮಹಿಳೆ ಸಿಂಹವನ್ನು ಪುಟ್ಟ ಮಗುವಿನಂತೆ ತೊಡೆ ಮೇಲೆ ಎಳೆದುಕೊಂಡು ಮುತ್ತಿಟ್ಟಿದ್ದಾಳೆ. ಮಹಿಳೆ ಸಿಂಹಕ್ಕೆ ಮುತ್ತಿಟ್ಟ ವಿಡಿಯೋ ವೈರಲ್ ಆಗಿದ್ದು. ಕೆಲವರು ಮಹಿಳೆಯ ಧೈರ್ಯವನ್ನು ಮೆಚ್ಚಿದರೆ, ಇನ್ನು ಕೆಲವರು ಇದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಕೆಲಸ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಜೈಲಿನಿಂದ ಎಸ್ಕೇಪ್ ಆದ್ರೂ ಬರೋಬ್ಬರಿ 6 ಸಾವಿರ ಕೈದಿಗಳು.. ಆಮೇಲೆ ಆಗಿದ್ದೇನು?

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ನಿಜಕ್ಕೂ ಹೌಹಾರಿದ್ದಾರೆ. ವಿಡಿಯೋದಲ್ಲಿ ಸಿಂಹ ಮಹಿಳೆಯ ತೊಡೆಯ ಮೇಲೆ ಹಾಯಾಗಿ ಮಲಗಿದೆ. ಮಲಗಿದ ಸಿಂಹವನ್ನು ನಿರಾಂತಕದಿಂದ ಮುದ್ದಿಸುತ್ತಿದ್ದಾಳೆ. ಸದಾ ಘರ್ಜನೆ, ತನ್ನ ಆರ್ಭಟದಲ್ಲಿಯೇ ಇರುವ ಸಿಂಹ ಮಹಿಳೆಯೊಂದಿಗಿದ್ದಾಗ ಅತ್ಯಂತ ಶಾಂತ ರೀತಿಯಿಂದ ಮನೆಯಲ್ಲಿ ಸಾಕಿದ ಬೆಕ್ಕಿನ ರೀತಿ ಹಾಯಾಗಿದೆ.


">December 25, 2024

ಈ ಒಂದು ವಿಡಿಯೋ ಸದ್ಯ ಎಕ್ಸ್​ ಖಾತೆಯಲ್ಲಿ ಹಲ್​ಚಲ್ ಸೃಷ್ಟಿಸಿದ್ದು ಸುಮಾರು 10 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಕೆಲವರು ಸಿಂಹ ಮತ್ತು ಮಹಿಳೆಯ ನಡುವಿನ ವಾತ್ಸಲ್ಯ ಕಂಡು ನಿಜಕ್ಕೂ ಇದು ಮನಮುಟ್ಟುವ ವಿಡಿಯೋ ಅಂತ ಕಮೆಂಟ್​ ಮಾಡಿದ್ರೆ, ಇನ್ನೂ ಕೆಲವರು ಇಂತಹ ಪ್ರಯತ್ನಗಳು ನಿಜಕ್ಕೂ ಅಪಾಯಕಾರಿ ಕಾಡು ಪ್ರಾಣಿಗಳ ಮೂಡ್ ಯಾವಾಗ ಸ್ವಿಂಗ್ ಆಗುತ್ತೊ ಹೇಳುವುದಕ್ಕೆ ಬರುವುದಿಲ್ಲ. ಇಂತಹ ಪ್ರಯತ್ನಗಳಿಂದ ಆದಷ್ಟು ದೂರ ಉಳಿಯುವುದು ಒಳ್ಳೆಯದು ಎಂದು ಹೇಳಿದ್ದಾರೆ. ಇನ್ನು ವಿಡಿಯೋ ಎಲ್ಲಿಯದು, ಮಹಿಳೆಯ ಹೆಸರು ಏನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment