ಲಕ್ ಅಂದ್ರೆ ಇದು ಅಲ್ಲವೇ..! ಸತತ 2 ವರ್ಷ ಶ್ರಮ, ಛಲ ಬಿಡದ ಮಹಿಳೆಗೆ ಸಿಕ್ಕ 2.69 ಕ್ಯಾರೆಟ್ ವಜ್ರ

author-image
Bheemappa
Updated On
ಲಕ್ ಅಂದ್ರೆ ಇದು ಅಲ್ಲವೇ..! ಸತತ 2 ವರ್ಷ ಶ್ರಮ, ಛಲ ಬಿಡದ ಮಹಿಳೆಗೆ ಸಿಕ್ಕ 2.69 ಕ್ಯಾರೆಟ್ ವಜ್ರ
Advertisment
  • ಸರ್ಕಾರ ಹರಾಜು ಹಾಕಿ ಆ ಮಹಿಳೆಗೆ ಎಷ್ಟು ಹಣ ನೀಡುತ್ತದೆ?
  • ಸರ್ಕಾರಿ ಜಮೀನು ಲೀಸ್‌ಗೆ ಪಡೆದು ಹುಡುಕುವಾಗ ಸಿಕ್ಕ ವಜ್ರ
  • ಎರಡು ವರ್ಷಗಳ ಪರಿಶ್ರಮ, ಜೀವನ ಬದಲಿಸಿದ ಡೈಮೆಂಡ್​.!

ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಜನರು ಭೂಮಿಯಲ್ಲಿ ವಜ್ರವನ್ನು ಹುಡುಕುತ್ತಾರೆ. ವಜ್ರ ಸಿಕ್ಕರೆ ಜನರ ಅದೃಷ್ಟವೇ ಬದಲಾಗುತ್ತೆ. ವಜ್ರ ಸಿಕ್ಕರೆ ಜೀವನವೇ ಬದಲಾಗುತ್ತೆ. ಈಗ ಮಧ್ಯವಯಸ್ಕ ಕಾರ್ಮಿಕ ಮಹಿಳೆ ಸಾವಿತ್ರಿಭಾಯಿ ಸಿಸೋಡಿಯಾ ಎನ್ನುವವರಿಗೆ ಅದೃಷ್ಟ ಬಂದಿದ್ದು ಜೀವನ ಬದಲಾಗುವ ಸಮಯ ಬಂದಿದೆ. ಸಾವಿತ್ರಿಭಾಯಿ ಸಿಸೋಡಿಯಾಗೆ 2.69 ಕ್ಯಾರೆಟ್ ವಜ್ರ ಸಿಕ್ಕಿದೆ.

ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಅನ್ನು ಲೀಸ್‌ಗೆ ಪಡೆದು ಜನರು ವಜ್ರಗಳನ್ನು ಹುಡುಕುತ್ತಾರೆ. ಹೀಗೆ ಸರ್ಕಾರಿ ಜಮೀನು ಲೀಸ್‌ಗೆ ಪಡೆದು ವಜ್ರ ಹುಡುಕುವಾಗ ಸಾವಿತ್ರಿ ಭಾಯಿ ಸಿಸೋಡಿಯಾಗೆ 2.69 ಕ್ಯಾರೆಟ್ ವಜ್ರ ಸಿಕ್ಕಿದೆ. ಸುಡು ಬಿಸಿಲು, ಧೂಳು ಮತ್ತು ಕೊಳೆಯನ್ನು ಲೆಕ್ಕಿಸದೆ, ತನ್ನ ಕುಟುಂಬದ ಭವಿಷ್ಯ ಬದಲಾಯಿಸುವ ವಜ್ರ ಹುಡುಕುವ ದೃಢ ನಂಬಿಕೆಯೊಂದಿಗೆ, ಸಾವಿತ್ರಿ ಬಾಯಿ ಕಳೆದ 2 ವರ್ಷಗಳಿಂದ ಚೋಪ್ರಾ ಪ್ರದೇಶದ ಖಾಸಗಿ ಗಣಿಯಲ್ಲಿ ವಜ್ರ ಹುಡುಕಲು ಶ್ರಮಪಡುತ್ತಿದ್ದರು.

ಸರ್ಕಾರಿ ಭೂಮಿ ಲೀಸ್‌ಗೆ ಪಡೆಯಬೇಕು

ವಜ್ರವನ್ನು ಪರಿಶೀಲಿಸಿದ ಸರ್ಕಾರಿ ಅನುಪಮ್ ಸಿಂಗ್, ನಿಯಮಗಳ ಪ್ರಕಾರ, ಸಾವಿತ್ರಿಭಾಯಿ ಸಿಸೋಡಿಯಾಗೆ ಸಿಕ್ಕ ವಜ್ರವನ್ನು ಹರಾಜು ಹಾಕಲಾಗುವುದು ಎಂದು ಹೇಳಿದ್ದಾರೆ. ಈಗ ಸಿಕ್ಕ ವಜ್ರವನ್ನು ಸರ್ಕಾರದ ಖಜಾನೆಯಲ್ಲಿ ಠೇವಣಿ ಇಡಲಾಗಿದೆ. ವಜ್ರದ ಹರಾಜಿನಿಂದ ಬಂದ ಮೊತ್ತದಲ್ಲಿ ಸರ್ಕಾರದ ರಾಯಧನ, ತೆರಿಗೆಯನ್ನು ಕಡಿತಗೊಳಿಸಿಕೊಂಡು ಉಳಿದ ಹಣವನ್ನು ಸಾವಿತ್ರಿಭಾಯಿ ಸಿಸೋಡಿಯಾಗೆ ನೀಡಲಾಗುತ್ತೆ ಎಂದು ಅನುಪಮ ಸಿಂಗ್ ಹೇಳಿದ್ದರು.

ಇದನ್ನೂ ಓದಿ:ಸ್ಯಾಡ್ ರೀಲ್ಸ್​ ಮಾಡುವಾಗ 13ನೇ ಅಂತಸ್ತಿನಿಂದ ಬಿದ್ದು ಪ್ರಾಣ ಬಿಟ್ಟ ಯುವತಿ

publive-image

ಮಧ್ಯಪ್ರದೇಶ ರಾಜ್ಯ ಸರ್ಕಾರ ಪ್ರತಿ ವರ್ಷ ನಾಮಿನಲ್ ಬೆಲೆಗೆ ಭೂಮಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ವಿಂಗಡಿಸಿ ಜನರಿಗೆ ವಜ್ರ ಹುಡುಕಲು ಗುತ್ತಿಗೆ ನೀಡುತ್ತೆ. ವಜ್ರ ಹುಡುಕಲು ಸಾವಿರಾರು ಜನರು ಭೂಮಿಯನ್ನು ಲೀಸ್‌ಗೆ ಪಡೆಯುತ್ತಾರೆ. ಇವರಲ್ಲಿ ಕೆಲವೇ ಕೆಲವು ಮಂದಿಗೆ ಮಾತ್ರವೇ ವಜ್ರ ಸಿಗುತ್ತೆ. ವಜ್ರ ಸಿಕ್ಕವರು ನಸೀಬು ಚೆನ್ನಾಗಿತ್ತು ಅಂತ ಅರ್ಥ. ಸರ್ಕಾರಿ ಭೂಮಿ ವಜ್ರ ಹುಡುಕಲು ಲೀಸ್‌ಗೆ ಪಡೆಯಲು 250 ರಿಂದ 350 ರೂಪಾಯಿ ಹಣ ಪಾವತಿಸಬೇಕು. ಫಾರ್ಮ್ ಭರ್ತಿ ಮಾಡಿ ಸರ್ಕಾರಿ ಕಚೇರಿಗೆ ನೀಡಬೇಕು. ಬಳಿಕ ಸರ್ಕಾರದ ಕಚೇರಿಯಿಂದ 25, 30 ಅಡಿ ಸುತ್ತಳತೆಯ ಜಾಗವನ್ನು ಗುರುತಿಸಿ ಲೀಸ್‌ಗೆ ನೀಡಲಾಗುತ್ತೆ. ನಂತರ ನಿರ್ದಿಷ್ಟ ಸಮಯದವರೆಗೆ ಆ ಜಾಗದಲ್ಲಿ ವಜ್ರ ಹುಡುಕಾಟವನ್ನು ಲೀಸ್​ಗೆ ಪಡೆದವರು ಮಾಡುತ್ತಾರೆ.

ಯಾರ್​ ಯಾರಿಗೆ ಡೈಮಂಡ್ ಸಿಕ್ಕಿದೆ?

ಪನ್ನಾ ಡೈಮಂಡ್ ಕಚೇರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಸಾವಿತ್ರಿಭಾಯಿ ಸಿಸೋಡಿಯಾಗೆ ಸಿಕ್ಕ ವಜ್ರದ ನಿಖರವಾದ ಮೌಲ್ಯ ಇನ್ನೂ ತಿಳಿದಿಲ್ಲ. "ಇದನ್ನು ಹರಾಜಿಗೆ ಇಡಲಾಗುವುದು. ಪನ್ನಾ ಜಿಲ್ಲೆಯ ದೇವೇಂದ್ರ ನಗರದ ನಿವಾಸಿ ಸಾವಿತ್ರಿ ಬಾಯಿ ಸಿಸೋಡಿಯಾ ಅವರು 2.69 ಕ್ಯಾರೆಟ್‌ಗಳ ವಜ್ರವನ್ನು ಹುಡುಕಿದ್ದಾರೆ ಎಂದು ಹೇಳಿದ್ದಾರೆ. ಈ ಘಟನೆಗೂ ಮುನ್ನ, ದಿಲೀಪ್ ಮಿಸ್ತ್ರಿ ಎಂಬ ಕಾರ್ಮಿಕ 2024ರ ನವೆಂಬರ್‌ನಲ್ಲಿ 7.44 ಕ್ಯಾರೆಟ್ ವಜ್ರವನ್ನು ಪತ್ತೆ ಮಾಡಿದ್ದರು. ಕೇವಲ 3 ತಿಂಗಳಲ್ಲಿ ಇದು ಅವರ 2ನೇ ಅದೃಷ್ಟವಾಗಿತ್ತು. ಜುಲೈ 2024ರ ಆರಂಭದಲ್ಲಿ, ಈ ಪ್ರದೇಶದ ಕಾರ್ಮಿಕನೊಬ್ಬ 19.22 ಕ್ಯಾರೆಟ್ ವಜ್ರವನ್ನು ಹುಡುಕಿದ್ದರು. ಇದು ಭಾರತದಲ್ಲಿ ವಜ್ರ ಗಣಿಗಾರಿಕೆಗೆ ಪ್ರಮುಖ ಕೇಂದ್ರವಾಗಿ ಪನ್ನಾ ಜಿಲ್ಲೆಯ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment