/newsfirstlive-kannada/media/post_attachments/wp-content/uploads/2025/03/DIGITAL-ARREST.jpg)
ದೇಶದಲ್ಲಿ ದಿನದಿಂದ ದಿನಕ್ಕೆ ಹಣವನ್ನು ವಂಚಿಸುವ ಕೇಸ್ಗಳ ಸಂಖ್ಯೆ ಹೆಚ್ಚುತ್ತಿದೆ. ಆನ್ಲೈನ್ ಮೂಲಕ ಜನರ ಜನರ ಹಣವನ್ನು ವಂಚಿಸುವ ಪ್ರಕರಣಗಳಂತೂ ಇನ್ನೂ ಹೆಚ್ಚುತ್ತಿವೆ. ಇದೇ ಮಾದರಿಯ ಘಟನೆ ಮುಂಬೈನಲ್ಲಿ ನಡೆದಿದ್ದು, 86 ವರ್ಷದ ವೃದ್ಧಯಿಂದ 20 ಕೋಟಿ ರೂಪಾಯಿ ವಂಚಿಸಲಾಗಿದೆ.
ವ್ಯಕ್ತಿಯೊಬ್ಬನ ಫೋನ್ ಕಾಲ್ ರಿಸೀವ್ ಮಾಡುವ ಮೂಲಕ ಈ ಒಂದು ಸ್ಕ್ಯಾಮ್ ಶುರುವಾಗಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಸಿಬಿಐ ಆಫೀಸರ್ ಎಂದು ಹೇಳಿಕೊಂಡು, ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ಗೆ ಲಿಂಕ್ ಆಗಿದ್ದು. ನೀವು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಕೊಂಡಿರುವುದು ಕಂಡು ಬಂದಿದೆ. ನೀವು ಸರಿಯಾಗಿ ನಮಗೆ ಸಹಕರಿಸದೇ ಇದ್ದರೆ ನಿಮ್ಮ ಕುಟುಂಬದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆದರಿಸಿದ್ದಾನೆ.
ಇದನ್ನೂ ಓದಿ:ನಟ ಸುಶಾಂತ್ ಸಿಂಗ್ ಸಾವಿಗೆ ಕಾರಣ ಹೇಳಿದ ಸಿಬಿಐ! ಕಾಣದ ಕೈಗಳ ಕೈವಾಡಕ್ಕೆ ಸಾಕ್ಷಿಯಿಲ್ಲ ಎಂದ ತನಿಖಾ ಸಂಸ್ಥೆ!
ಮಹಿಳೆ ಇದರಿಂದ ಬೆಚ್ಚಿ ಬಿದ್ದಿದ್ದು, ಕರೆ ಮಾಡಿದ ವ್ಯಕ್ತಿ ಹೇಳಿದ್ದನ್ನು ಪಾಲಿಸಿದ್ದಾರೆ. ಕರೆ ಮುಗಿಯುವರೆಗೂ ಈ ರೀತಿಯಾಗುತ್ತಿದೆ ಎಂದು ಯಾರೊಂದಿಗೂ ಕೂಡ ಹೇಳಿಕೊಂಡಿಲ್ಲ. ಕಾರಣ ಆ ವ್ಯಕ್ತಿ ಮಹಿಳೆಗೆ ಹಾಗೆಯ ಷರತ್ತು ವಿಧಿಸಿದ್ದ. ಈ ವಿಷಯವನ್ನು ಮುಂದಿನ ಎರಡು ತಿಂಗಳು ಯಾರೊಂದಿಗೂ ಚರ್ಚೆ ಮಾಡುವಂತಿಲ್ಲ ಎಂದು ಹೇಳಿದ ಆತ, ಮಹಿಳೆಯ ಲೋಕೆಷನ್ಗಳನ್ನು ಕೂಡ ಚೆಕ್ ಮಾಡುತ್ತಿದ್ದ. ಒಂದೇ ಕಡೆ ಕೂರವಂತೆ ಧಮ್ಕಿ ಹಾಕಿ ಮಹಿಳೆ ಅತ್ತಿತ್ತ ಅಲ್ಲಾಡದಂತೆ ಡಿಜಿಟಲ್ ಅರೆಸ್ಟ್ ಮಾಡಿದ್ದ.
ಇದೇ ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ಸರಿಯಾಗಿ ಪರಿಶೀಲಿಸಬೇಕಿದೆ ಎಂದು ಹೇಳಿ ಮಹಿಳೆಯ ಬ್ಯಾಂಕ್ ಅಕೌಂಟ್ಗಳ ವಿವವರನ್ನು ಪಡೆದಿದ್ದಾನೆ. ಬ್ಯಾಂಕ್ ವಿವರ ಪಡೆದವನು ಮಹಿಳೆಯ ಅಕೌಂಟ್ನಿಂದ 20 ಕೋಟಿ ರೂಪಾಯಿ ಎಗರಿಸಿ ಇದು ಅಕ್ರಮ ಹಣ ಎಂದು ಸಂಶವಿದೆ. ಅದು ಅಲ್ಲ ಎಂದು ಖಚಿತವಾದ ಮೇಲೆ ನಿಮ್ಮ ಹಣವನ್ನು ನಿಮಗೆ ವಾಪಸ್ ನೀಡಲಾಗುವುದು ಎಂದು ಸ್ಕ್ಯಾಮರ್ ಹೇಳಿದ್ದಾನೆ.
ಇದನ್ನೂ ಓದಿ:ವಿಶ್ವ ಜಲ ದಿನ: ಭಾರತದಲ್ಲಿ ಹೆಚ್ಚಾಗುತ್ತಿದೆ ನೀರಿನ ಸಮಸ್ಯೆ.. ಏನು ಮಾಡಬೇಕು? ಇಲ್ಲಿದೆ ವಿಶೇಷ ಮಾಹಿತಿ!
ಇದಾದ ಬಳಿಕ ಸಂಶಯ ಬಂದ 86ರ ವೃದ್ಧೆ ತನ್ನ ಪುತ್ರಿಯನ್ನು ಸಂಪರ್ಕ ಮಾಡಿ ನಡೆದ ವಿಷಯ ತಿಳಿಸಿದ್ದಾರೆ. ಕೂಡಲೇ ಅವರ ಮಗಳು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣವೇ ತನಿಖೆಗೆ ಇಳಿದ ಪೊಲೀಸರು ಸೈಬರ್ ಪೊಲೀಸರ ಸಹಾಯದಿಂದ ಹಣವನ್ನು ಎಗರಿಸಿದ್ದವನನ್ನು ಟ್ರ್ಯಾಕ್ ಮಾಡಿದ್ದಾರೆ. ಅದರಲ್ಲಿ 77 ಲಕ್ಷ ರೂಪಾಯಿಯನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿ ಕೂಡ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ