/newsfirstlive-kannada/media/post_attachments/wp-content/uploads/2025/06/soorappa-babu.jpg)
ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​ ನಟನೆಯ ಕೋಟಿಗೊಬ್ಬ 2, 3 ಸಿನಿಮಾ ನಿರ್ಮಾಪಕನ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಂಚನೆ ಕೇಸ್ ದಾಖಲಾಗಿದೆ.
ಕೋಟಿಗೊಬ್ಬ, ಪೃಥ್ವಿ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವಂತಹ ಸ್ಯಾಂಡಲ್​ವುಡ್​ ಖ್ಯಾತ ನಿರ್ಮಾಪಕನ ವಿರುದ್ಧ ಈಗ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಿರ್ಮಾಪಕ ಸೂರಪ್ಪ ಬಾಬು ಅವರ ವಿರುದ್ಧ ಮಹಿಳೆಯೊಬ್ಬರು ವಂಚನೆ ಆರೋಪ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/06/soorappa-babu1.jpg)
2023ರಲ್ಲಿ ಮಹಿಳೆಗೆ ಪರಿಚಯವಾಗಿದ್ದ ಸೂರಪ್ಪ ಬಾಬು ಅವರು ಶಿವರಾಜ್ ಕುಮಾರ್, ಗಣೇಶ್ ಜೊತೆ ಫಿಲ್ಮ್ ಮಾಡ್ತಿದ್ದೀನಿ ಎಂದಿದ್ದರು. ಅದರಂತೆ ಚಿತ್ರ ನಿರ್ಮಾಣಕ್ಕೆ ಸಾಲಬೇಕೆಂದು ಕೇಳಿದ್ದ ಸೂರಪ್ಪ ಬಾಬು ಅವರಿಗೆ ಹಂತಹಂತವಾಗಿ 92 ಲಕ್ಷ ರೂ. ನೀಡಿದ್ದೆ. ಆದರೆ ಕೆಲ ದಿನಗಳ ಕಾಲ ಸೂರಪ್ಪ ಬಾಬು ಸಂಪರ್ಕಕ್ಕೆ ಸಿಗಲಿಲ್ಲ. ಈ ವೇಳೆ ವಿಚಾರಿಸಿದಾಗ ಸೂರಪ್ಪ ಬಾಬು ಶಿವರಾಜ್ ಕುಮಾರ್ ಜೊತೆ ಫಿಲ್ಮ್ ಮಾಡುತ್ತಿಲ್ಲ ಎಂಬುದು ಗೊತ್ತಾಗಿದೆ. ಇದಾದ ಮೇಲೆ ಹಣ ಕೇಳಿದಾಗ 25 ಲಕ್ಷ ರೂ. ವಾಪಸ್ ನೀಡಿದ್ದಾರೆ. ಆದರೆ ಉಳಿದ ಹಣ ಕೇಳಿದಾಗ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಹೀಗಾಗಿ ಸೂರಪ್ಪ ಬಾಬು ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us