ಸಾಲ ತೀರಿಸದ ಮಹಿಳೆಯ ಅರ್ಧ ತಲೆ ಬೋಳಿಸಿದರು; ತ್ರಿಪುರಾದಲ್ಲಿ ಹೃದಯವಿದ್ರಾವಕ ಘಟನೆ

author-image
Gopal Kulkarni
Updated On
ಸಾಲ ತೀರಿಸದ ಮಹಿಳೆಯ ಅರ್ಧ ತಲೆ ಬೋಳಿಸಿದರು; ತ್ರಿಪುರಾದಲ್ಲಿ ಹೃದಯವಿದ್ರಾವಕ ಘಟನೆ
Advertisment
  • ತ್ರಿಪುರಾದಲ್ಲೂ ಮೈಕ್ರೋ ಫೈನಾನ್ಸ್ ಕಂಪನಿಗಳ ವಿಪರೀತ ಕಾಟ
  • ಸಾಲ ತೀರಿಸದ ಮಹಿಳೆಯ ಅರ್ಧ ತಲೆ ಬೋಳಿಸಿದ ಮಹಿಳಾ ಪಡೆ
  • ಮನೆಯಿಂದ ಎಳೆದುಕೊಂಡು ಬಂದು ನಡು ಬೀದಿಯಲ್ಲಿ ಹೀನ ಕೃತ್ಯ

ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್​ಗಳ ಕಾಟ ವಿಪರೀತಕ್ಕೆ ಹೋಗಿದೆ. ಸಾಲ ತೀರಿಸಲಾಗದ ಅನೇಕರು ತಮ್ಮ ಜೀವವನ್ನೆ ಕಳೆದುಕೊಳ್ಳುತ್ತಿರುವ ಉದಾಹರಣೆಗಳು ಕಣ್ಣ ಮುಂದೆ ಕಾಣತೊಡಗಿವೆ. ಈಗ ಇಂತಹುದೇ ಒಂದು ಘಟನೆ ತ್ರಿಪುರಾದಲ್ಲಿ ನಡೆದಿದೆ. ಆದ್ರೆ ಇದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಹೀನ ಕೃತ್ಯ.

ತ್ರಿಪುರಾದ ಸೆಪಹಾಜಿಲಾ ಜಿಲ್ಲೆಯ ಬಿಶಾಲ್​ಘರ್​​ನ ಮುರಾ ಪ್ರದೇಶದಲ್ಲಿ ಸಾಲವನ್ನು ವಾಪಸ್ ತೀರಿಸದೇ ಇದ್ದ ಕಾರಣಕ್ಕಾಗಿ ಮಹಿಳೆಯರ ಗುಂಪೊಂದು ಸೇರಿ ಮಹಿಳೆಯನ್ನು ಹಿಂಸಿಸಿ, ಕಿರುಕುಳ ಕೊಟ್ಟು ಕೊನೆಗೆ ಆಕೆಯ ಅರ್ಧ ತಲೆಯನ್ನೇ ಬೋಳಿಸಿರುವ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆ ಹೇಳುವ ಪ್ರಕಾರ ಸೆಲ್ಫ್ ಹೆಲ್ಪ್​ ಗ್ರೂಪ್ ಎಂಬ ಮಹಿಳಾ ಸಂಘದಿಂದ ಸಾಲ ಪಡೆದಿದ್ದು ಅದನ್ನು ವಾಪಸ್​ ನೀಡಲು ಕೊಂಚ ತಡವಾಗಿದ್ದಕ್ಕೆ ಹೀಗೆಲ್ಲಾ ನನ್ನ ಜೊತೆ ನಡೆದುಕೊಂಡಿದ್ದಾರೆ ಎಂದು ಪೊಲೀಸರ ಎದುರು ಅವಲತ್ತು ತೋಡಿಕೊಂಡಿದ್ದಾಳೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ 17 ಮಂದಿ ಜೀವ ತೆಗೆದ ವಿಚಿತ್ರ ಕಾಯಿಲೆ ಕೇಸ್​ಗೆ ಟ್ವಿಸ್ಟ್.. ಬ್ಯಾಕ್ಟಿರಿಯಾನೂ ಅಲ್ಲ, ವೈರಸ್ಸೂ ಅಲ್ಲ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಸುರಕ್ಷತೆಯ ದೃಷ್ಟಿಯಿಂದ ಹಾಗೂ ವಿಚಾರಣೆಯ ದೃಷ್ಟಿಯಿಂದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿಯೇ ಇರಿಸಿಕೊಂಡಿದ್ದಾರೆ. ಇನ್ನು ಪ್ರಕರಣವನ್ನು ಕೈಗೆತ್ತಿಕೊಂಡಿರುವ ಬಿಶಾಲಘರ್ ಮಹಿಳಾ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಶೀಯೂಲಿ ದಾಸ್​ ತನಿಖೆಯನ್ನು ನಡೆಸುತ್ತಿದ್ದಾರೆ. ಆರಂಭಿಕ ವಿಚಾರಣೆಯಲ್ಲಿ ಸ್ಥಳೀಯ ಸೆಲ್ಫ್​ ಹೆಲ್ಪ್​ ಗ್ರೂಪ್​ನ ಮಹಿಳಾ ಸದಸ್ಯರಿಂದ ಈ ಒಂದು ಕೃತ್ಯ ನಡೆದಿದೆ. ಇದು ನಿಜಕ್ಕೂ ಹೇಯ ಕೃತ್ಯ. ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಲ್ಲದೇ ಆಕೆಯ ಅರ್ಧ ತಲೆಯನ್ನು ಕೂಡ ಬೋಳಿಸಿದ್ದಾರೆ. ಹಣಕಾಸಿನ ವಿವಾದ ಈ ಇಬ್ಬರ ನಡುವೆ ಇತ್ತು. ಒಟ್ಟು 15 ರಿಂದ 20 ಜನ ಸ್ಥಳೀಯ ಮಹಿಳೆಯರಿಂದ ಇಂತಹದೊಂದು ಹೀನ ಕೃತ್ಯ ನಡೆದಿದ ಎಂದು ಮಹಿಳಾ ಇನ್ಸ್​ಪೆಕ್ಟರ್ ಹೇಳಿದ್ದಾ​ರೆ.

ಇದನ್ನೂ ಓದಿ:ರಾಮಗೋಪಾಲ್ ವರ್ಮಾಗೆ ಜೈಲು ಶಿಕ್ಷೆ; ಏನಿದು ಗಂಭೀರ ಪ್ರಕರಣ..?

ಇನ್ನು ತನಿಖೆಯಿಂದ ತಿಳಿದು ಬಂದ ಮತ್ತಷ್ಟು ವಿಚಾರವೆಂದರೆ 15 ರಿಂದ 20 ಜನ ಮಹಿಳೆಯರು ಸಂತ್ರಸ್ತೆಯ ಮನೆಗೆ ನುಗ್ಗಿ ಆಕೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದಿದ್ದಾರೆ. ಬಳಿಕ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆಕೆಯ ತಲೆಯನ್ನು ಅರ್ಧ ಬೋಳಿಸಿ ಕೂಡಲೇ ಹಣವನ್ನು ಹಿಂದಿರುಗಿಸುವಂತೆ ಕಿರುಕುಳ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಪ್ರಕರಣದಲ್ಲಿ ಒಟ್ಟು 20 ರಿಂದ 21 ಜನರ ಮೇಲೆ ಸುಮೊಟೊ ಕೇಸ್ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತ ಸೆಕ್ಸನ್​ನ 74ರ ಅಡಿಯಲ್ಲಿ ಹಾಗೂ ಸೆಕ್ಷನ್ 155(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment