ತಮ್ಮನ ಹೆಂಡತಿಯನ್ನ ಕೊಚ್ಚಿ ಕೊಲೆ ಮಾಡಿದ ಮಾವ.. ಹತ್ಯೆಗೆ ಅಸಲಿ ಕಾರಣವೇನು?

author-image
Bheemappa
Updated On
ತಮ್ಮನ ಹೆಂಡತಿಯನ್ನ ಕೊಚ್ಚಿ ಕೊಲೆ ಮಾಡಿದ ಮಾವ.. ಹತ್ಯೆಗೆ ಅಸಲಿ ಕಾರಣವೇನು?
Advertisment
  • ಗಂಡ ಸಾವನ್ನಪ್ಪಿದ ಮೇಲೆ ತನ್ನ ತವರು ಮನೆ ಸೇರಿದ್ದ ಹೆಂಡತಿ
  • ಹತ್ಯೆ ಮಾಡಿದ ಆರೋಪಿಯನ್ನು ಕಂಬಕ್ಕೆ ಕಟ್ಟಿರುವ ಗ್ರಾಮಸ್ಥರು
  • ತಮ್ಮನ ಹೆಂಡತಿಯನ್ನ ಅಣ್ಣ, ಅಣ್ಣನ ಮಗ ಕೊಲೆ ಮಾಡಿದ್ಯಾಕೆ?

ಚಿತ್ರದುರ್ಗ: ಆಸ್ತಿಯಲ್ಲಿ ಭಾಗ ಕೇಳಿದ್ದಕ್ಕೆ ತಮ್ಮನ ಹೆಂಡತಿಯನ್ನು ಅಣ್ಣ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಳ್ಳಕೆರೆ ತಾಲೂಕಿನ ಹಾಲಗೊಂಡನಹಳ್ಳಿಯಲ್ಲಿ ನಡೆದಿದೆ.

ಹಾಲಗೊಂಡನಹಳ್ಳಿ ಈರಕ್ಕ (45) ಕೊಲೆಯಾದ ಮಹಿಳೆ. ಈಕೆಯ ಗಂಡನ ಅಣ್ಣ ಚಂದ್ರಣ್ಣ ಹಾಗೂ ಈತನ ಮಗ ಗಂಗಾಧರ ಕೃತ್ಯ ಎಸಗಿದ ಆರೋಪಿಗಳು. ಚಂದ್ರಣ್ಣನ ತಮ್ಮ ಗೋವಿಂದಪ್ಪ 8 ವರ್ಷಗಳ ಹಿಂದೆ ಸಾವನ್ನಪ್ಪಿದ್ದನು. ಗಂಡ ಮೃತಪಟ್ಟ ಮೇಲೆ ಮಹಿಳೆ ತವರು ಮನೆ ಸೇರಿಕೊಂಡಿದ್ದರು. ಆದರೆ ಈಗ ಬಂದು ಗಂಡನ ಆಸ್ತಿ ಭಾಗ ಮಾಡಿಕೊಡುವಂತೆ ಮಾವನ ಬಳಿ ಕೇಳಿಕೊಂಡಿದ್ದಳು. 8 ಎಕರೆ ಜಮೀನಿನಲ್ಲಿ ಭಾಗ ಮಾಡಿಕೊಡುವಂತೆ ಕೇಳಿದ್ದಳು.

ಇದನ್ನೂ ಓದಿ: ಫಾಲ್ಸ್​ನಲ್ಲಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್.. ಇನ್​ಸ್ಟಾ ವಿಡಿಯೋ ಕುರಿತು ಬ್ಯೂಟಿ ಹೇಳಿದ್ದೇನು?

ಆದರೆ ಆಸ್ತಿ ಭಾಗ ಕೊಡಲು ಒಪ್ಪದ ಮಾವ ಇದರಿಂದ ಕೋಪಗೊಂಡು, ತನ್ನ ಮಗನ ಜೊತೆ ಸೇರಿ ಮಹಿಳೆಯ ತಲೆ ಚಚ್ಚಿ ಇಬ್ಬರು ಭೀಕರವಾಗಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಗ್ರಾಮಸ್ಥರೆಲ್ಲ ಸೇರಿ ಚಂದ್ರಣ್ಣನನ್ನ ಕಂಬಕ್ಕೆ ಕಟ್ಟಿದ್ದರು. ಹತ್ಯೆಯ ಬಳಿಕ ಪರಾರಿಯಾಗಿದ್ದ ಈತನ ಮಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಪರುಶುರಾಂಪುರ ಠಾಣೆಯ ಪಿಎಸ್​ಐ ಬಸವರಾಜ್, ಚಳ್ಳಕೆರೆಯ ಡಿವೈಎಸ್​ಪಿ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment