/newsfirstlive-kannada/media/post_attachments/wp-content/uploads/2025/04/BGM_WOMAN.jpg)
ಬೆಳಗಾವಿ: ಕೀಟನಾಶಕ ಮಾತ್ರೆಗಳನ್ನು ನುಂಗಿ ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ ಒಬ್ಬರು ಜೀವ ಕಳೆದುಕೊಂಡಿರುವ ಘಟನೆ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ.
ಇಂಚಲ ಗ್ರಾಮದ ಲಕ್ಷ್ಮಿ ಮಂಜುನಾಥ ಹೂಗಾರ (22) ಪ್ರಾಣ ಬಿಟ್ಟ ದುರ್ದೈವಿ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಲಕ್ಷ್ಮಿ ಕೀಟನಾಶಕ ಮಾತ್ರೆಗಳನ್ನು ನುಂಗಿದ್ದಾಳೆ. ಇದರಿಂದ ಅಸ್ವಸ್ಥರಾಗಿದ್ದ ಅವರನ್ನು ಕುಟುಂಬಸ್ಥರು ಮೊದಲು ಬೈಲಹೊಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆ ಬೇಕಿದ್ದರಿಂದ ಲಕ್ಷ್ಮಿಯನ್ನು ಅಲ್ಲಿಂದ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ: CSK ಪ್ಲೇ ಆಫ್ ಹಾದಿ ಭಾರೀ ಕಠಿಣ.. ಕೂಲ್ ಕ್ಯಾಪ್ಟನ್ ಧೋನಿ ಮುಂದೆ ಸಾಲು ಸಾಲು ಚಾಲೆಂಜಸ್.!
ಕಳೆದ ಡಿಸೆಂಬರ್ 7 ರಂದು ಲಕ್ಷ್ಮಿ, ಮಂಜುನಾಥ ಹೂಗಾರ ಎನ್ನುವರನ್ನು ಮದುವೆಯಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದರು. ಮದುವೆಯಾಗಿ ಕೇವಲ ಐದು ತಿಂಗಳುಗಳು ಆಗಿದ್ದವು. ಇದರ ನಡುವೆ ಕ್ರಿಮಿನಾಶಕದ ಮಾತ್ರೆ ಸೇವನೆ ಮಾಡಿ ಲಕ್ಷ್ಮಿ ಜೀವ ಕಳೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ