ಮೆಟ್ರೋ ಪಿಲ್ಲರ್​​ಗೆ ಡಿಕ್ಕಿ ಹೊಡೆದ ಬಸ್​ಗೆ ಅಪಘಾತ.. ಸ್ಥಳದಲ್ಲೇ ಮಹಿಳೆ ಸಾವು; ಹಲವರ ಸ್ಥಿತಿ ಗಂಭೀರ

author-image
Veena Gangani
Updated On
ಮೆಟ್ರೋ ಪಿಲ್ಲರ್​​ಗೆ ಡಿಕ್ಕಿ ಹೊಡೆದ ಬಸ್​ಗೆ ಅಪಘಾತ.. ಸ್ಥಳದಲ್ಲೇ ಮಹಿಳೆ ಸಾವು; ಹಲವರ ಸ್ಥಿತಿ ಗಂಭೀರ
Advertisment
  • 20ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎಲೆಕ್ಟ್ರಿಕ್​​​ ಬಸ್ ಅಪಘಾತ
  • ಗಂಭೀರವಾಗಿ ಗಾಯಗೊಂಡ 14 ಪ್ರಯಾಣಿಕರನ್ನು ಅಗ್ರಸೇನ್ ಆಸ್ಪತ್ರೆಗೆ ಶಿಫ್ಟ್​
  • ಈ ಘಟನೆ ಸಂಬಂಧ ಪಂಜಾಬಿ ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ನವದೆಹಲಿ: ಎಲೆಕ್ಟ್ರಿಕ್​​ ಡಿಟಿಸಿ ಬಸ್​ವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರೋ ಘಟನೆ ಶಿವಾಜಿ ಪಾರ್ಕ್ ಮೆಟ್ರೋ ನಿಲ್ದಾಣ ಬಳಿ ನಡೆದಿದೆ.

ಇದನ್ನೂ ಓದಿ:ರಾಮನಗರದಲ್ಲಿ ತಾಯಿ, ಮಗನ ದುರಂತ.. ಸಾವಿನಲ್ಲೂ ಒಂದಾದ ಇಬ್ಬರು; ಆ ಕೋಣೆಯಲ್ಲಿ ಆಗಿದ್ದೇನು?

ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ದೆಹಲಿ ಸರ್ಕಾರಿ ಬಸ್ ಮಂಗೋಲ್ಪುರಿ ಮತ್ತು ಆನಂದ್ ವಿಹಾರ್ ನಡುವೆ ಸಂಚರಿಸುತ್ತಿದ್ದಾಗ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಬಳಿಕ ಇ-ರಿಕ್ಷಾ ಡಿಕ್ಕಿ ಹೊಡೆದ್ದಾನೆ. ಇನ್ನು, ಈ ಘಟನೆ ಸಂಬಂಧ ಪಂಜಾಬಿ ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

publive-image

ಆಟೋ ಚಾಲಕರು ಇದ್ದಕ್ಕಿದ್ದಂತೆ ಬಲಕ್ಕೆ ತಿರುಗಿಸಿದ್ದಾನಂತೆ. ಹೀಗಾಗಿ ಅಪಘಾತವನ್ನು ತಪ್ಪಿಸಲು ಬಸ್ ಚಾಲಕ ಸಹ ಬಲ ತಿರುವು ತೆಗೆದುಕೊಂಡಿದ್ದಾರೆ. ಆದರೆ ಕೊನೆಗೆ ಬಸ್​​ ಏಕಾಏಕಿ ಮೆಟ್ರೋ ಪಿಲ್ಲರ್‌ಗೆ ಬಂದು ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ 23 ಜನರ ಪೈಕಿ 14 ಪ್ರಯಾಣಿಕರನ್ನು ಮಹಾರಾಜ ಅಗ್ರಸೇನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment