ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್

author-image
Bheemappa
Updated On
ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್
Advertisment
  • ಮಹಿಳೆಗೆ ಇಷ್ಟೊಂದು ಅನಕೊಂಡಗಳು ಎಂದ್ರೆ ಭಯವೇ ಇಲ್ವಾ?
  • ಜಿರಳೆ, ಹಲ್ಲಿಗಳಿಗೆ ಹೆದರೋ ಮಹಿಳೆಯರು ಸ್ವಲ್ಪ ಇಲ್ಲಿ ನೋಡಿ
  • ಮಹಿಳೆ ಎಷ್ಟು ಅನಕೊಂಡಗಳ ಜತೆ ಟೈಮ್ ಪಾಸ್ ಮಾಡಿದ್ದಾರೆ?

ಮನೆಯಲ್ಲಿ ಜಿರಳೆ, ಹಲ್ಲಿಯಂತ ಸಣ್ಣ ಸಣ್ಣ ಸರಿಸೃಪಗಳನ್ನು ಕಂಡರೆ ಮಹಿಳೆಯರು, ಯುವತಿಯರು ಪ್ರಾಣ ಹೋದಂಗೆ ಭಯಪಡುತ್ತಾರೆ. ಅನೇಕ ಮಹಿಳೆಯರು ಅವುಗಳೇನು ಮಾಡುತ್ತಾವೆಂದು ಕೊಂಚ ಧೈರ್ಯ ತೋರಿದರು ಕೊನೆಗೆ ಅವುಗಳ ಬಳಿ ಸುಳಿಯುವುದೇ ಬೇಡವೆಂದು ದೂರ ಸರಿಯುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಅನಕೊಂಡಗಳ ಜೊತೆ ಆಟವಾಡುತ್ತಾರೆ ಎಂದರೆ ನೀವು ನಂಬಲೇಬೇಕು.

ಅಮೆರಿಕದ ಕ್ಯಾಲಿಫೋರ್ನಿಯಾದ ಮಹಿಳೆ ಜೇ ಬ್ರೂವರ್ ಎನ್ನುವರು ಅನಕೊಂಡಗಳ ಜೊತೆ ಆಡವಾಡುತ್ತಾರೆ. ಅಲ್ಲದೇ ಅವುಗಳನ್ನ ಮೈ ಮೇಲೆ ಎಲ್ಲ ಎಳೆದುಕೊಂಡು ಮುದ್ದಾಡುತ್ತಾರೆ. ಆ ಅನಕೊಂಡಗಳು ಕೂಡ ಆಕೆಯ ಮೇಲೆ ಹೋಗುತ್ತಿರುತ್ತಾವೆ. ಅವುಗಳ ಮೇಲೆ ಮಲಗಿಕೊಳ್ಳುತ್ತಾಳೆ. ಇದಕ್ಕೆ ಬ್ರೂವರ್ ಭಯ ಬೀಳದೆ ಅವುಗಳಿಗೆ ಫ್ರೆಂಡ್​ ರೀತಿ ಟ್ರೀಟ್ ಮಾಡುತ್ತಿರುತ್ತಾಳೆ. ಇನ್ನೊಂದು ಸಂಗತಿ ಎಂದರೆ ಬ್ರೂವರ್ ಕೇವಲ ಒಂದೋ, ಎರಡೋ ಅನಕೊಂಡಗಳ ಜೊತೆ ಆಟವಾಡುತ್ತಿಲ್ಲ. ಬರೋಬ್ಬರಿ 27 ಅನಕೊಂಡಗಳ ಜೊತೆಗೆ ತನ್ನ ಸಮಯವನ್ನು ಕಳೆದಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ನಟ‌ ಚೇತನ್​ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ.. ಸಿನಿಮಾ ಸ್ಟೈಲ್​ನಲ್ಲಿ ರಾಬರಿ.. ಅಸಲಿಗೆ ಆಗಿದ್ದೇನು..?

ಇನ್ನು ಮಾಹಿತಿ ಪ್ರಕಾರ, ಜೇ ಬ್ರೂವರ್ ಕ್ಯಾಲಿಫೋರ್ನಿಯಾದ ಫೌಂಟೇನ್ ವ್ಯಾಲಿಯಲ್ಲಿ ಸರೀಸೃಪಗಳ ಮೃಗಾಲಯ ಹೊಂದಿದ್ದಾರೆ. ಮೃಗಾಲಯದಲ್ಲಿ ಹಾವುಗಳು, ಚಿರತೆಗಳು, ಹೆಬ್ಬಾವುಗಳು, ಬಿಳಿ ಮೊಸಳೆಗಳು, ಆನೆಗಳು, ಆಮೆಗಳು, ಅನಕೊಂಡಗಳು ಸೇರಿ ಇನ್ನು ಬೇರೆ ಬೇರೆ ಪ್ರಾಣಿಗಳು ಇವೆ. ಜೇ ಬ್ರೂವರ್ ತಮ್ಮ ಮಗಳು ಜೂಲಿಯೆಟ್ ಜೊತೆ ಮೃಗಾಲಯಕ್ಕೆ ಭೇಟಿ ನೀಡಿದ್ದಾಗ ಅನಕೊಂಡಗಳ ಜೊತೆ ಟೈಮ್​ಪಾಸ್ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment