/newsfirstlive-kannada/media/post_attachments/wp-content/uploads/2024/07/BGK_PSI.jpg)
ಬಾಗಲಕೋಟೆ: ದುಷ್ಕರ್ಮಿಗಳ ಗ್ಯಾಂಗ್​ವೊಂದು ಹೊಲದಲ್ಲಿದ್ದ ಶೆಡ್​ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಮಹಿಳೆಯರು ಸಜೀವವಾಗಿ ದಹನಗೊಂಡಿದ್ದರು. ಜಿಲ್ಲೆಯ ಬೆಳಗಲಿ ವ್ಯಾಪ್ತಿಯ ಹೊಲವೊಂದರಲ್ಲಿ ನಡೆದ ಈ ಘಟನೆಯಲ್ಲಿ ಪಿಎಸ್​ಐ ಅಧಿಕಾರಿ ಆಗಬೇಕು ಎಂದುಕೊಂಡಿದ್ದ ಕನಸೊಂದು ಬೆಂಕಿಯಲ್ಲೇ ನಶಿಸಿ ಹೋಗಿದೆ.
ಇದನ್ನೂ ಓದಿ:PUC ರಿಸಲ್ಟ್​ ಔಟ್.. ದ್ವಿತೀಯ ಪಿಯುಸಿ ಪರೀಕ್ಷೆ- 3ರಲ್ಲೂ ಬಾಲಕಿಯರೇ ಮೇಲುಗೈ
ಮಹಾಲಿಂಗಪೂರ ಮೂಲದ ದಸ್ತಗಿರಿ ಸಾಬ ಮೌಲಾಸಾಬ್ ಪೆಂಡಾರಿ ಎಂಬುವರು ಹೊಲದಲ್ಲಿ ಶೆಡ್​ ನಿರ್ಮಿಸಿಕೊಂಡು ಕುಟುಂಬದ ಜೊತೆ ವಾಸವಿದ್ದರು. ಇವರ ಮಗಳು ಸಭಾನಾ ಪೆಂಡಾರಿ (26) ಓದಿನಲ್ಲಿ ಮುಂದೆ ಇದ್ದರು. ಮುಂದಿನ ಬದುಕಿಗಾಗಿ ಸಾಕಷ್ಟು ಕನಸು ಕಂಡಿದ್ದರು. ಅದಕ್ಕಾಗಿ ಒಂದೊಂದೆ ಮೆಟ್ಟಿಲು ಏರುತ್ತ ಇಲ್ಲಿವರೆಗೆ ಬಂದಿದ್ದರು. ಇನ್ನೊಂದು ಮೆಟ್ಟಿಲು ಏರಿದ್ದರೇ ಆ ಪಿಎಸ್​ಐ ಕನಸು ಕೈಗೂಡುತ್ತಿತ್ತು. ಹೀಗಾಗಿಯೇ ಸಭಾನಾ ಮುಧೋಳದಲ್ಲಿ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತ ಪಿಎಸ್​ಐ ಪರೀಕ್ಷೆ ಓದಿಗೆ ಹೆಚ್ಚಿನ ಗಮನ ಕೊಟ್ಟಿದ್ದರು. ಇತ್ತೀಚೆಗೆ ನಡೆದಿದ್ದ ಪಿಎಸ್​ಐ ಪರೀಕ್ಷೆಗೂ ಹಾಜರಾಗಿದ್ದರು. ಕಳೆದ ಒಂದು ವಾರದ ಹಿಂದೆಯಷ್ಟೇ ಮನೆಗೆ ಬಂದಿದ್ದರು. ಇವರ ಬಹುದೊಡ್ಡ ಕನಸು ಎಂದರೆ ಪಿಎಸ್​ಐ ಅಧಿಕಾರಿ ಆಗಬೇಕು ಎನ್ನುವುದು.
ಪಿಎಸ್​ಐ ಪರೀಕ್ಷೆ ಬರೆದಿದ್ದರಿಂದ ಫಲಿತಾಂಶದ ನಿರೀಕ್ಷೆಯಲ್ಲಿ ಇರುವಾಗ ದುಷ್ಕರ್ಮಿಗಳು ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಮನೆಗೆ ಬಿದ್ದ ಬೆಂಕಿಯ ಕೆನ್ನಾಲಿಗೆಗೆ ಸಭಾನಾ ಸಜೀವವಾಗಿ ದಹನಗೊಂಡಿದ್ದಾರೆ. ಮನೆಗೆ ಹಚ್ಚಿದಾಗ ಒಟ್ಟು 5 ಮಂದಿ ಒಳಗೆ ಮಲಗಿದ್ದರು. ಇದರಲ್ಲಿ ಸಭಾನಾ ಹಾಗೂ 60 ವರ್ಷದ ಜಯನಬಿ ಪೆಂಡಾರಿ ಬಲಿಯಾಗಿದ್ದಾರೆ. ಉಳಿದ ಮೂವರು ಸ್ವಲ್ಪದರಲ್ಲೇ ಜೀವ ಉಳಿಸಿಕೊಂಡಿದ್ದಾರೆ. ಪಿಎಸ್​ಐ ಆಗಬೇಕೆಂದು ನೂರಾರು ಕನಸುಗಳ ಜೊತೆ ಸಭಾನಾ ಕೂಡ ಅಗ್ನಿಯಲ್ಲೇ ಸುಟ್ಟು ಹೋಗಿದ್ದಾರೆ.
ಇದನ್ನೂ ಓದಿ: ರಾತ್ರಿ ಮಲಗಿದ್ದ ವೇಳೆ ಭಾರೀ ದುರಂತ.. ಅಂಬಲಪಾಡಿ ಶೆಟ್ಟಿ ಬಾರ್ ಮಾಲೀಕ ಸಾವು
ಇನ್ನು ಘಟನೆಯಲ್ಲಿ ಸ್ಕೂಟಿ, ಸ್ಕಾರ್ಪಿಯೋ ಕಾರು, ಬುಲೆಟ್ ಬೈಕ್​ ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟು ಹೋಗಿವೆ. ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗಾವಿಯಿಂದ ಎಫ್ಎಸ್ಎಲ್ ತಂಡವನ್ನ ಕರೆಸಲಾಗಿದ್ದು ಸ್ಥಳದಲ್ಲಿದ್ದ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ