ಜನರು ನನ್ನ ಕಣ್ಮುಂದೆಯೇ ಜೀವ ಬಿಟ್ಟರು.. ದೆಹಲಿ ಕಾಲ್ತುಳಿತಕ್ಕೆ ಕಾರಣವೇನು? ಭೀಕರತೆ ತೆರೆದಿಟ್ಟ ಮಹಿಳೆ!

author-image
Gopal Kulkarni
Updated On
ಜನರು ನನ್ನ ಕಣ್ಮುಂದೆಯೇ ಜೀವ ಬಿಟ್ಟರು.. ದೆಹಲಿ ಕಾಲ್ತುಳಿತಕ್ಕೆ ಕಾರಣವೇನು? ಭೀಕರತೆ ತೆರೆದಿಟ್ಟ ಮಹಿಳೆ!
Advertisment
  • ಕಬ್ಬಿಣದ ಗ್ರಿಲ್​ ಹಿಡಿದುಕೊಂಡು ನಾವು ಜೋತಾಡುತ್ತಿದ್ದೇವು
  • ನನ್ನ ಕಣ್ಣ ಮುಂದೆಯೇ 10 ಜನರ ಜೀವು ಬಿಟ್ಟಿದ್ದು ನೋಡಿದೆ
  • ದೆಹಲಿಯ ಕಾಲ್ತುಳಿತದ ಪ್ರತ್ಯಕ್ಷದರ್ಶಿ ಕಿರಣ್ ಕುಮಾರಿ ಹೇಳಿಕೆ

ನನಗೆ ಆ ಜನಜಂಗುಳಿಯಲ್ಲಿ ಉಸಿರಾಡಲು ಕೂಡ ಆಗಲಿಲ್ಲ. ಜನರು ನನ್ನನ್ನು ತುಳಿದುಕೊಂಡೆ ನಡೆದು ಹೊದರು. ನಾನು ನನ್ನ ಸಹೋದರಿಯನ್ನು ಎಳೆದುಕೊಂಡು ಮೆಟ್ಟಿಲಗಳನ್ನು ಏರಿ ಕಬ್ಬಿಣದ ಗ್ರಿಲ್ ಏರಿ ಅಲ್ಲಿಯೇ ಅಂಟಿಕೊಂಡವರಂತೆ ಕುಳಿತೆವು. ಹಿಂದಿನಿಂದ ನಮಗೆ ಜನರು ಡಿಕ್ಕಿ ಹೊಡೆಯುತ್ತಿದ್ದರು. ಆದ್ರೆ ನಾವು ಗಟ್ಟಿಯಾಗಿಯೇ ಜೋತುಬಿದ್ದುಕೊಂಡಿದ್ದೇವು ಎಂದು ದೆಹಲಿಯಲ್ಲಿ ನಡೆದ ಭೀಕರ ಕಾಲ್ತುಳಿತದ ಪ್ರತ್ಯಕ್ಷದರ್ಶಿ 35 ವರ್ಷದ ಕಿರಣ್ ಕುಮಾರಿ ಅವರು ಹೇಳಿದ್ದಾರೆ. ಕೇವಲ ಹತ್ತೇ ಹತ್ತು ನಿಮಿಷದಲ್ಲಿ ಇಡೀ ರೈಲ್ವೆ ನಿಲ್ದಾಣವೇ ಸ್ಮಶಾನದಂತಾಗಿ ಹೋಗಿತ್ತು ಎಂದು, ಪ್ಲಾಟಫಾಂ ನಂಬರ್ 14 ರಲ್ಲಿ ನಾನು ಆ ಭೀಕರತೆಯನ್ನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಐತಿಹಾಸಿಕ ದಾಖಲೆ.. ಇಲ್ಲಿವರೆಗೆ ಎಷ್ಟು ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ..?

10 ನಿಮಿಷ ಮಹಿಳೆ ಹಾಗೂ ಆಕೆಯ ಸಹೋದರಿ ಕಬ್ಬಿಣದ ಗ್ರಿಲ್​ ಹಿಡಿದು ಜೋತು ಬಿದ್ದೆ ಉಳಿಸಿಕೊಂಡರು. ಅನೇಕ ಮಹಿಳೆಯರು ನಮ್ಮನ್ನು ಕಾಪಾಡಿ ಎಂದು ಕೂಗಿಕೊಳ್ಳುವುದನ್ನು ನೋಡಿದೇವು 10 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದನ್ನು ಕಣ್ಣಾರೆ ಕಂಡೆವು ಎಂದು ಕಿರಣ್​ ಕುಮಾರಿ ಕಣ್ಣೀರಿಡುತ್ತಲೇ ಹೇಳಿದ್ದಾರೆ.

ಇದನ್ನೂ ಓದಿ:ಭೀಕರ ಕಾಲ್ತುಳಿತ ಘಟಿಸಿ 12 ಗಂಟೆಯಾದರೂ ನಿಲ್ಲದ ಜನಜಂಗುಳಿ.. ದೆಹಲಿ ರೈಲ್ವೆ ನಿಲ್ದಾಣದ ಸ್ಥಿತಿ ಈಗ ಹೇಗಿದೆ?

ಲೋಕನಾಯಕ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ವಾರ್ಡ್​​ನಲ್ಲಿ ತನ್ನ ಸೋದರ ಮಾವ ಶೈಲೆಂದ್ರ ಬಾಬು ಅಡ್ಮಿಟ್​ ಆಗಿದ್ದ ವೇಳೆ ಅಲ್ಲಿಯೇ ನಿಂತಿದ್ದ ಕಿರಣ್ ಕುಮಾರಿ ದೆಹಲಿ ಕಾಲ್ತುಳಿತದ ಭೀಕರತೆಯನ್ನು ತೆರೆದಿಟ್ಟಿದ್ದಾರೆ. ನಮ್ಮಿಡೀ ಕುಟುಂಬ ಮಹಾಕುಂಭಮೇಳಕ್ಕೆ ಹೋಗಲೆಂದು ಟಿಕೆಟ್​ ಬುಕ್ ಮಾಡಿದ್ದೇವು. ಆದರೆ ಇಷ್ಟೆಲ್ಲಾ ಆಯಿತು. ನಮ್ಮ ಸೋದರ ಮಾವ ಕ್ಯಾನ್ಸರ್​​ನಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ನಾವು ಕುಂಭಮೇಳಕ್ಕೆ ಹೋಗಿ ಅವನು ಹುಷಾರಾಗಲಿ ಎಂದು ಬೇಡಿಕೊಂಡು ಬರಬೇಕೆಂದುಕೊಂಡಿದ್ದೇವು ಎಂದು ಹೇಳಿದ್ದಾರೆ.

ಕಾಲ್ತುಳಿತಕ್ಕೆ ಅಸಲಿ ಕಾರಣವೇನು ಗೊತ್ತಾ?
ಇನ್ನು ದೆಹಲಿಯ ಪೊಲೀಸರು ಈ ದುರ್ಘಟನೆಗೆ ಅಸಲಿ ಕಾರಣವೇನು ಎಂಬುದನ್ನು ತೆರೆದಿಟ್ಟಿದ್ದಾರೆ. ಒಂದೇ ಮಾದರಿಯ ಹೆಸರಿರುವ ಟ್ರೇನ್​​ಗಳ ಘೋಷಣೆಯಾದಾಗ ಈ ಒಂದು ಕಾಲ್ತುಳಿತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ ಪ್ರಯಾಗರಾಜ್ ಸ್ಪೇಷಲ್​ ಟ್ರೇನ್ ಪ್ಲಾಟಫಾರಂ ನಂಬರ್ 16ಕ್ಕೆ ಬಂದು ಸೇರಲಿದೆ ಎಂದು ಅನೌನ್ಸ್ ಆಗಿದೆ. ಯಾರು ಪ್ರಯಾಗರಾಜ್ ಸ್ಪೇಷಲ್ ಟ್ರೇನ್​ಗೆ ಹೋಗಬೇಕಿತ್ತೋ ಮತ್ತು ಯಾರು ಪ್ರಯಾಗರಾಜ್ ಎಕ್ಸ್​ಪ್ರೆಸ್​ಗೆ ಹೋಗಬೇಕಿತ್ತೋ ಎಲ್ಲರೂ ಕೂಡ ಗೊಂದಲಕ್ಕೆ ಈಡಾಗಿ 16ನೇ ಪ್ಲಾಟಫಾರಂನತ್ತ ನುಗ್ಗಿದ್ದಾರೆ ಈ ಕಾರಣದಿಂದ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment