/newsfirstlive-kannada/media/post_attachments/wp-content/uploads/2024/12/49-YEAR-MISSING-CASE.jpg)
ಉತ್ತರ ಪ್ರದೇಶದ ಅಜಂಗರ್ ಪೊಲೀಸರು 49 ವರ್ಷದಿಂದ ಕಾಣೆಯಾಗಿದ್ದ ಮಹಿಳೆಯನ್ನು ಮರಳಿ ಅವರ ಕುಟುಂಬದೊಂದಿಗೆ ಸೇರಿಸುವ ಕೆಲವನ್ನು ಮಾಡಿದ್ದಾರೆ. ಮಹಿಳೆ ತನ್ನ ಕುಟುಂಬವನ್ನು ಮತ್ತೆ ಸೇರುವ ಭಾವನಾತ್ಮಕ ಕ್ಷಣಗಳಿಗೆ ಅಜಂಗರ್ ಪೊಲೀಸರು ಸಾಕ್ಷಿಯಾಗಿದ್ದಾರೆ.
ಈ ಮಹಿಳೆಯನ್ನು ಆಕೆಯ ಕುಟುಂಬದೊಂದಿಗೆ ಸೇರಿಸುವ ಕಾರ್ಯದಲ್ಲಿ ಈ ಪೊಲೀಸರು ಹಲವು ದಿನಗಳಿಂದ ಪ್ರಯತ್ನ ನಡೆಸಿದ್ದರು. ಒಂದು ಕಾರ್ಯಕ್ಕೆ ಆಪರೇಷನ್​ ಮುಸ್ಕಾನ್ ಎಂದು ಕೂಡ ಹೆಸರು ನೀಡಿದ್ದರು. ಕೊನೆಗೂ ಕುಟುಂಬವನ್ನು ತೊರೆದು ಹೋಗಿದ್ದ ಆ ಬಾಲೆಯನ್ನು ಮರಳಿ ಕುಟುಂಬದೊಂದಿಗೆ ಸೇರಿಸುವ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಪೊಲೀಸರು ಹೇಳುವ ಪ್ರಕಾರ, 57 ವರ್ಷದ ಫಲ್ಮುತಿ ಅಲಿಯಾಸ ಫುಲಾ ದೇವಿಯವರು ತಮ್ಮ 8ನೇ ವರ್ಷದವರಿದ್ದಾರೆ. ಕುಟುಂಬದೊಂದಿಗೆ ಮೊರಾದಬಾದ್​ಗೆ ಜಾತ್ರೆಗೆಂದು ಹೋಗಿದ್ದರು. ಆ ವೇಳೆ ಕಾಣೆಯಾಗಿದ್ದ ಫುಲ್ಮತಿ, ಮರಳಿ ಕಂಡಿರಲಿಲ್ಲ. ಜಿಲ್ಲೆಯ ಎಸ್​ಪಿ ಹೇಮರಾಜ್​ ಮೀನಾ ಅವರು ಹೇಳುವ ಪ್ರಕಾರ ಜಾತ್ರೆಯಲ್ಲಿ ಅಂದು ಎಂಟು ವರ್ಷದ ವಯಸ್ಸಿನಲ್ಲಿದ್ದ ಫುಲ್ಮತಿಯನ್ನು ಒಬ್ಬನು ಅಪಹರಿಸಿ ರಾಮಪುರದ ನಿವಾಸಿಯೊಬ್ಬರಿಗೆ ಮಾರಿಬಿಟ್ಟಿದ್ದ. ಅಲ್ಲಿ ಬದುಕನ್ನು ನೋಡುತ್ತಲೇ ಬೆಳೆದ ಫುಲ್ಮತಿ ಮರಳಿ ತನ್ನ ಕುಟುಂಬದೊಂದಿಗೆ ಸೇರಬೇಕು ಎಂಬ ಕನಸಿನಲ್ಲಿಯೇ ಇದ್ದರು.
/newsfirstlive-kannada/media/post_attachments/wp-content/uploads/2024/12/49-YEAR-MISSING-CASE-1.jpg)
ಇದನ್ನೂ ಓದಿ:ನನ್ನ ಕಾರು ಇದಲ್ಲ… ಅದು ಎಂದಿದ್ದ ಮನಮೋಹನ್ ಸಿಂಗ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಡಿಸೆಂಬರ್​ 19 ರಂದು ಈ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಡಾ ಪೂಜಾ ರಾಣಿ ಎಂಬ ಶಾಲೆಯ ಶಿಕ್ಷಕಿಯೊಬ್ಬರು ಅಡಿಷನಲ್ ಎಸ್​ಪಿ ಶೈಲೇಂದ್ರ ಅವರಿಗೆ ಫುಲ್ಮತಿಯ ಕಥೆಯನ್ನು ಹೇಳುತ್ತಾರೆ. ಈ ಮಹಿಳೆ ಕಳೆದ ಹಲವು ದಶಕಗಳಿಂದ ತನ್ನ ಕುಟುಂಬವನ್ನು ಸೇರಬೇಕು ಎಂದು ಆಶಿಸುತ್ತಿರುವ ವಿಚಾರವನ್ನು ಕೂಡ ಹೇಳುತ್ತಾರೆ.
ಇದನ್ನೂ ಓದಿ:VIDEO: 8 ಬಾರಿ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ ಶಪಥ; ಕಾರಣ ಡಿಎಂಕೆ ಸರ್ಕಾರ!
ಇದನ್ನು ಕೇಳಿದ ಶೈಲೇಂದ್ರ ಒಂದು ಟೀಂನ್ನು ರೆಡಿ ಮಾಡುತ್ತಾರೆ. ಫುಲ್ಮಿತಿಯಿಂದ ಪಡೆದ ಮಾಹಿತಿಯನ್ನು ಬೆನ್ನಟ್ಟಿದ ಪೊಲೀಸರಿಗೆ ಮಾವು ಜಿಲ್ಲೆಯಲ್ಲಿ ಮಹಿಳೆಯ ಚಿಕ್ಕಪ್ಪ ಇರುವುದು ಗೊತ್ತಾಗುತ್ತದೆ. ಅವರನ್ನು ಭೇಟಿಯಾದ ಪೊಲೀಸರು ಫುಲ್ಮತಿಯ ಬಗ್ಗೆ ವಿಚಾರಿಸುತ್ತಾರೆ. ಅವರ ಚಿಕ್ಕಪ್ಪ ರಹ್ಮಿತ್ ಫುಲ್ಮತಿ ನಮ್ಮ ಮನೆಯ ಮಗಳು 1975ರಲ್ಲಿ ಕಾಣೆಯಾಗಿದ್ದರ ಬಗ್ಗೆ ಹಾಗೂ ಮಹಿಳೆಯ ಸಹೋದರ ಅಜಂಗರ್​ನ ಬೆದಪುರ್​ ಗ್ರಾಮದಲ್ಲಿ ಇರುವ ಬಗ್ಗೆ ಮಾಹಿತಿ ನೀಡುತ್ತಾರೆ. ಇವೆಲ್ಲಾ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು ಫುಲ್ಮತಿಯನ್ನು ಕರೆದುಕೊಂಡು ಬಂದು ಅವರ ಕುಟುಂಬದೊಂದಿಗೆ ಸೇರಿಸಿದ್ದಾರೆ.
ಈ ಒಂದು ಅಪರೂಪದ ಸಹೋದರ ಸಹೋದರಿಯ ಪುನಃ ಒಂದಾಗುವ ಸನ್ನಿವೇಶ ದೊಡ್ಡ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಎಲ್ಲರ ಕಣ್ಣಂಚಲ್ಲಿಯೂ ಕೂಡ ನೀರು ಜಿನುಗಿತ್ತು. ಕೊನೆಗೂ ಪೊಲೀಸರ ಆಪರೇಷನ್ ಮುಸ್ಕಾನ್​ ಸಾರ್ಥಕ ರೀತಿಯಲ್ಲಿ ಕೊನೆಗೊಂಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us