ಹೋಟೆಲ್ ಬುಕ್ ಮಾಡುವಾಗ ಆದ ಸಣ್ಣ ತಪ್ಪು.. 93 ಸಾವಿರ ಹಣ ಕಳ್ಕೊಂಡ ಯೂಟ್ಯೂಬರ್! ಆಗಿದ್ದೇನು?

author-image
Gopal Kulkarni
Updated On
ಹೋಟೆಲ್ ಬುಕ್ ಮಾಡುವಾಗ ಆದ ಸಣ್ಣ ತಪ್ಪು.. 93 ಸಾವಿರ ಹಣ ಕಳ್ಕೊಂಡ ಯೂಟ್ಯೂಬರ್! ಆಗಿದ್ದೇನು?
Advertisment
  • ಗೂಗಲ್​​ ನಂಬಿ ಹೋಟೆಲ್ ಬುಕ್ ಮಾಡುವ ಮುನ್ನ ಹುಷಾರ್​
  • ಪುರಿಯಲ್ಲಿ ಹೋಟೆಲ್ ಬುಕ್ ಮಾಡಲು ಹೋದವರಿಗೆ ವಂಚನೆ
  • ಗೂಗಲ್ ನಂಬಿ ಒಟ್ಟು 93,600 ರೂ. ಕಳೆದುಕೊಂಡ ಯೂಟ್ಯೂಬರ್

ಆನ್​ಲೈನ್ ಯುಗದಲ್ಲಿ ಈಗ ಆನ್​ಲೈನ್ ಸ್ಕ್ಯಾಮ್​​ಗಳು ಕೂಡ ಹೆಚ್ಚಾಗುತ್ತಲಿವೆ. ಹೊರ ಬೀಳುತ್ತಿರುವ ಒಂದಕ್ಕಿಂತ ಒಂದು ಸುದ್ದಿಗಳು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿವೆ. ಜನರು ಒಂದಲ್ಲ ಒಂದು ರೀತಿಯಲ್ಲಿ ದುಡ್ಡು ಕಳೆದುಕೊಂಡು ಸಂತ್ರಸ್ತರ ಪಟ್ಟಿಯನ್ನು ಸೇರುತ್ತಿದ್ದಾರೆ. ಅದಕ್ಕಿಗ ಮತ್ತೊಂದು ಉದಾಹರಣೆಗೆ ಕಾರಣರಾಗಿದ್ದಾರೆ ಒಬ್ಬ ಮಹಿಳೆ.
ಇನ್​​ಸ್ಟಾಗ್ರಾಮ್​​ನಲ್ಲಿ ಸದಾ ಸಕ್ರಿಯರಾಗಿರುವ, ಯೂಟ್ಯೂಬ್​ ಕಂಟೆಂಟ್ ಕ್ರಿಯೇಟರ್ ಆಗಿರುವ ಶ್ರೇಯಾ ಮಿತ್ರಾ ಎಂಬವವರು ಒಡಿಶಾದ ಪುರಿಗೆ ಭೇಟಿ ನೀಡುವ ಉತ್ಸಾಹದಲ್ಲಿದ್ದರು. ಅದಕ್ಕಾಗಿ ಒಳ್ಳೆಯ ಹೋಟೆಲ್​ಗಾಗಿ ಅವರು ಗೂಗಲ್​​ನಲ್ಲಿ ಸರ್ಚ್​ ಮಾಡಿದ್ದಾರೆ. ಅಲ್ಲಿ ಮೇಫೇರ್ ಹೆರಿಟೇಜ್ ಪುರಿ ಎಂಬ ಹೋಟೆಲ್ ಕಂಡಿದೆ. ಅದರ ಮೇಲೆ ಕ್ಲಿಕ್ ಮಾಇಡದನ ಶ್ರೇಯಾ. ಅದರ ಸೌಕರ್ಯಗಳಿಗೆ ಮಾರು ಹೋಗಿ ಕಾಂಟ್ಯಾಕ್ಟ್​ ನಂಬರ್ ತೆಗೆದುಕೊಂಡು ಕಾಲ್ ಮಾಡಿದ್ದಾರೆ. ಅಲ್ಲಿ ಉಳಿದುಕೊಳ್ಳುವ ಬಗ್ಗೆ ಅವರಲ್ಲಿ ವಿಚಾರಿಸಿದ್ದಾರೆ. ಆ ಕಡೆ ಇದ್ದ ವಂಚಕ ರೂಮ್ ಹಾಗೂ ಅದರ ಪೂರ್ತಿ ವಿವರಗಳ ಫೋಟೋಗಳನ್ನು ಶ್ರೇಯಾಗೆ ಕಳುಹಿಸಿದ್ದಾರೆ. ಅಲ್ಲದೇ ರೂಮ್ ಬುಕ್ಕಿಂಗ್​ನ ಸಂಪೂರ್ಣ ವಿವವರನ್ನು ಹೇಳಿದ್ದಾನೆ ಅಲ್ಲದೇ ಸದ್ಯ ಕೊಡಬೇಕಾದ ಹಣದ ಬಗ್ಗೆಯೂ ಹೇಳಿದ್ದಾರೆ.

ಇದಾದ ಬಳಿಕ ಒಂದು ಫೇಕ್ ಇನ್ವೈಸ್ ಕಳುಹಿಸಿದ್ದಾನೆ. ಆದರೆ ಶ್ರೇಯಾ ಇ-ಮೇಲ್ ಕನ್ಫರ್ಮೇಷನ್ ಬಗ್ಗೆ ಆತನಲ್ಲಿ ಕೇಳಿದ್ದಾರೆ. ಮಾರನೇ ದಿನ ಮತ್ತೆ ಶ್ರೇಯಾಗೆ ಕಾಲ್ ಮಾಡಿದ ವಂಚಕ ನಿಮ್ಮ ಗೂಗಲ್ ಪೇ ಒಪನ್ ಮಡಿ ಮತ್ತು ಪೇಯ್ಲಿ ಕ್ಲಿಕ್ ಮಾಡಿದಲ್ಲಿ ನಿಮ್ಮ ಬುಕ್ಕಿಂಗ್ ಐಡಿ ಕನ್ಫರ್ಮೆಷನ್​ ನೀವು ಸ್ವೀಕರಿಸಲಿದ್ದೀರಿ ಎಂದು ಹೇಳಿದ್ದಾನೆ. ಶ್ರೇಯಾಗೆ ಈ ಬಾರಿ ಫುಲ್ ಡೌಟ್ ಬಂದಿದೆ. ಇ-ಮೇಲ್ ಕನ್ಫರ್ಮೇಷನ್ ಬರುವವರೆಗೂ ನಾನು ಪೇಮೆಂಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ವಂಚಕ ಫೋನ್ ಕಟ್ ಮಾಡಿದ್ದಾರೆ.

ಇದನ್ನೂ ಓದಿ:ಕ್ಲಾಸ್​​ ರೂಮ್​​ನಲ್ಲೇ ವಿದ್ಯಾರ್ಥಿ ಜೊತೆ ಮದುವೆ.. ಲೇಡಿ ಪ್ರೊಫೆಸರ್​​ಗೆ ಬಿಗ್​ ಶಾಕ್! ಏನಾಯ್ತು?

ಇದಾದ ಬಳಿಕ ಶ್ರೇಯಾ ಮಿತ್ರಾ ಮೇಫೆರ್​ನ ಅಧಿಕೃತ ವೆಬ್​ಸೈಟ್ ಹುಡುಕಿದ್ದಾರೆ. ಮತ್ತು ತಮ್ಮ ಬುಕ್ಕಿಂಗ್ ಕನ್ಫರ್ಮಮೇಷನ್ ಬಗ್ಗೆ ಮಾಹಿತಿ ಕೇಳಿದ್ದಾರೆ. ಆಗ ಹೋಟೆಲ್​ನವರು ನಿಮಗೆ ಯಾರೋ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಶ್ರೇಯಾ ಒಟ್ಟು 93,600 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ತಮಗಾದ ಈ ವಂಚನೆಯನ್ನು ಶ್ರೇಯಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ನಾನು ಪುರಿಯ ಮೇಫೇರ್​​ ಹೋಟೆಲ್​ ಬುಕ್ಕಿಂಗ್ ವಿಚಾರದಲ್ಲಿ 93,600 ರೂಪಾಯಿಗಳನ್ನು ಸ್ಕ್ಯಾಮ್​ ಮೂಲಕ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನ ಹೊಸ ನಾಟಕ.. ಬೆನ್ನಲ್ಲೇ ದಿಢೀರ್ ಸಭೆ ನಡೆಸಿದ ಅಮಿತ್ ಶಾ.. ಆಗಿದ್ದೇನು..?

ಆಯ್ತು ಹಣವೇನೋ ಹೋಗಿದೆ. ಪೊಲೀಸರು ಅವನನ್ನು ಹಿಡಿಯುವುದಾಗಿ ಭರವಸೆ ಕೊಟ್ಟಿದ್ದಾರೆ. ಆದರೆ ಒಂದು ಬಾರಿ ಹಣ ಹೋಗಿ ಬಿಟ್ಟರೆ ಅದು ವಾಪಸ್ ಬರೋದು ತುಂಬಾ ಕಡಿಮೆ ಸಾಧ್ಯತೆಯಿರುತ್ತದೆ. ನನಗಾಗಿದ್ದನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ನೋವು ತೋಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment