/newsfirstlive-kannada/media/post_attachments/wp-content/uploads/2024/11/DATING-WITH-TREE-2.jpg)
ಒಂದು ಹುಡುಗಿ ಬದುಕಿಗೆ ಒಂದು ಹುಡುಗ, ಒಂದು ಹುಡುಗನ ಬದುಕಿಗೆ ಒಂದು ಹುಡುಗಿ ಇರಲೇಬೇಕು. ಅದು ಸೃಷ್ಟಿಯ ನಿಯಮ. ಒಂದು ವಯಸ್ಸಿಗೆ ಬಂದಾಗ ಹುಡುಗಿ ಬಗ್ಗೆ ಹುಡುಗನಿಗೆ, ಹುಡುಗನ ಬಗ್ಗೆ ಹುಡುಗಿಗೆ ಒಂದು ಆಕರ್ಷಣೆ ಹುಟ್ಟಿಕೊಳ್ಳುತ್ತೆ. ಪ್ರೀತಿ ಎಂಬ ಮಧುರ ಬಳ್ಳಿಯೊಂದು ಹೃದಯದಲ್ಲಿ ಹಬ್ಬಲು ಶುರುವಾಗುತ್ತದೆ. ಇದು ಪ್ರಕೃತಿಯ ವರ ಹಾಗೂ ನಿಯಮ ಕೂಡ. ಇತ್ತೀಚೆಗಂತೂ ಪ್ರೀತಿ, ಪ್ರೇಮವೆಂಬ ಸಂಬಂಧಗಳು ಸಂಕುಚಿತಗೊಂಡಿವೆ. ಡೇಟಿಂಗ್, ಲಿವಿಂಗ್ ಟುಗೆದರ್ನಂತಹ ವ್ಯವಸ್ಥೆಗಳು ಹಳೆಯ ಸಂಪ್ರದಾಯಗಳನ್ನು ತೆರೆಮರೆಗೆ ಸರಿಸುತ್ತಿವೆ. ಇಂತಹ ಕಾಲದಲ್ಲೂ ಅಮೆರಿಕಾದ ಒಂದು ಹುಡುಗಿ ಇನ್ನೊಂದು ಬೇರೆಯದ್ದೇ ಹಂತಕ್ಕೆ ಹೋಗಿದ್ದಾಳೆ. ಒಂದು ಮರದ ಮೇಲೆ ಆಕೆಗೆ ಪ್ರೇಮಾಂಕುರವಾಗಿದೆ.ಅದರೊಂದಿಗೆ ಆಕೆ ಡೇಟಿಂಗ್ ಮಾಡುತ್ತಿದ್ದಾಳೆ.
ಇದನ್ನೂ ಓದಿ: VIDEO; ಟ್ರಾನ್ಸ್‌ಫಾರ್ಮರ್ ಮೇಲೆ ಬಳ್ಳಿಯಂತೆ ನೇತಾಡಿದ ಯುವತಿ; 800 ಮನೆಗಳಿಗೆ ವಿದ್ಯುತ್ ಕಟ್! ಆಗಿದ್ದೇನು?
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ದೊಡ್ಡ ಸದ್ದು ಮಾಡುತ್ತಿದೆ. ಅದು ಯುವತಿಯೊಬ್ಬಳು ಮರದೊಂದಿಗೆ ಡೇಟಿಂಗ್ ಮಾಡುತ್ತಿರುವುದು. ವಿಡಿಯೋದಲಲ್ಲಿ ಅವಳೇ ಹೇಳಿಕೊಂಡಂತೆ ಅವಳು ಕಳೆದ ಎರಡು ವಾರಗಳಿಂದ ಈ ಮರದೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ. ಕುಳಿತರು ನಿಂತರು ಆಕೆಗೆ ಮರ ಪಕ್ಕದಲ್ಲಿಯೇ ಇರಬೇಕು. ಇಡೀ ದಿನದ ಬದುಕಿನ ಪ್ರತಿ ಸೆಕಂಡ್ ಕೂಡ ಆಕೆ ಮರವನ್ನು ಬಿಟ್ಟು ಕದಲುವುದಿಲ್ಲ.
ಇದು ಮಾತ್ರವಲ್ಲ ಆಕೆ ಮರದೊಂದಿಗೆ ಎಐ ವ್ಯವಸ್ಥೆಯನ್ನು ಕೂಡ ಸಂಯೋಜಿಸಿದ್ದಾಳೆ. ರಾತ್ರಿ ಮಲಗುವಾಗ ಮರ ಪಕ್ಕದಲ್ಲಿಯೇ ಇರುತ್ತೆ. ಮಧ್ಯಾಹ್ನ ನೀರಿನಲ್ಲಿ ಆಡಬೇಕಾದರೂ ಮರ ಪಕ್ಕದಲ್ಲಿ ಇರಲೇಬೇಕು. ಅದು ಇಲ್ಲದೇ ಯಾವ ಕಾರ್ಯವೂ ನಡೆಯುವುದಿಲ್ಲ. ಇನ್ನೂ ಒಂದು ವಿಚಿತ್ರ ಹೇಳಬೇಕು ಅಂದ್ರೆ ವಿಡಿಯೋದಲ್ಲಿ ಆ ಯುವತಿಯೇ ಹೇಳಿದ ಪ್ರಕಾರ. ಇತ್ತೀಚೆಗೆ ಆಕೆ ಸಮುದ್ರ ತೀರದಲ್ಲಿ ಹೋದಾಗ ಆ ಮರದೊಂದಿಗೆ ರೋಮ್ಯಾನ್ಸ್ನ್ನು ಕೂಡ ಮಾಡಿದ್ದಾಳಂತೆ.
ಇದನ್ನೂ ಓದಿ:ಮತ್ತೆ ವೈರಲ್ ಆದ ನ್ಯೂಜಿಲೆಂಡ್ನ ಯುವ ಸಂಸದೆ ಹನಾ; ಮಸೂದೆಯ ಪ್ರತಿ ಹರಿದು ಡಾನ್ಸ್ ಮಾಡಿದ್ದು ಯಾಕೆ?
ಯುವತಿ ಹೇಳುವ ಪ್ರಕಾರ ನಮ್ಮಿಬ್ಬರ ನಡುವೆ ಒಂದು ಪ್ರಚಲಿತವಲ್ಲದ ಸಂಬಂಧವಿದೆ. ಈ ಬಗ್ಗೆ ಸಾರ್ವಜನಿಕರ ಎದುರು ಹೇಳಿಕೊಳ್ಳಲು ನಿಜಕ್ಕೂ ಕೊಂಚ ನಾಚಿಕೆ ಅನಿಸುತ್ತದೆ. ಹೀಗಾಗಿ ನಾನು ನನ್ನ ಥೆರಪಿಸ್ಟ್ ಬಳಿ ಎಲ್ಲವನ್ನು ಹೇಳಿಕೊಳ್ಳುತ್ತೇನೆ ಅವರು ನನಗೆ ಸಲಹೆಯನ್ನು ನೀಡುತ್ತಾರೆ. ಅದರಂತೆಯೇ ನಾನು ನಡೆಯುತ್ತೇನೆ. ಹೀಗಾಗಿ ನನ್ನ ಹಾಗೂ ಈ ಗಿಡದ ನಡುವೆ ಒಂದು ಮಧುರ ಬಾಂಧವ್ಯ ಶಾಶ್ವತವಾಗಿ ನೆಲೆಗೊಳ್ಳುವಂತೆ ಆಗಿದೆ ಎಂದು ಹೇಳಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ