/newsfirstlive-kannada/media/post_attachments/wp-content/uploads/2024/10/N-T-RAMASWAMY-1.jpg)
ನಟ ನಟಿಯರು ಅಂದ್ರೆ ಸ್ಕ್ರೀನ್​ನಲ್ಲಿ ಜನರ ಮುಂದೆ ಹೇಗೆ ಕಾಣಿಸಿಕೊಳ್ತಾರೋ ಜನರು ಅವರನ್ನ ಹಾಗೇ ಒಪ್ಪಿಕೊಳ್ತಾರೆ. ಅವರದ್ದು ರೀಲ್​ ಲೈಫ್​ ಬೇರೆ ಇರುತ್ತೆ.. ರಿಯಲ್​ ಲೈಫ್​​ ಬೇರೆ ಇರುತ್ತೆ ಅನ್ನೋದನ್ನ ಬಹುತೇಕ ಮಂದಿ ಅರ್ಥ ಮಾಡಿಕೊಳ್ಳೋದೇ ಇಲ್ಲ.
ಕೆಲವೊಂದು ಸಲ ಅದು ನಟ ನಟಿಯರ ಮೇಲೂ ತುಂಬಾನೇ ಪ್ರಭಾವ ಬೀರುತ್ತೆ ಈಗಲೂ ಅಂತಹುದ್ದೇ ಒಂದು ಘಟನೆ ನಡೆದಿದೆ. ಇದ್ದದ್ದನ್ನ ಇದ್ದ ಹಾಗೆ ಒಪ್ಪಿಕೊಳ್ಳದೆ. ರೀಲ್​ನ ರಿಯಲ್​ ಅನ್ಕೊಂಡು ಮಹಿಳೆಯೊಬ್ಬರು ಮಾಡಿದ್ದ ಒಂದು ಕೆಲಸ ಇವತ್ತು ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದೆ. ಸಿನಿಮಾ ಅಂದಮೇಲೆ ಹೀರೋ ಹೀರೋಯಿನ್​ ಜೊತೆಗೆ ವಿಲನ್​ ಇರೋದು ಕಾಮನ್​. ಆದ್ರೆ ಇಲ್ಲಿ ವಿಲನ್​​ ಇದ್ದಿದ್ದೇ ತಪ್ಪಾಗಿಬಿಟ್ಟಿದೆ. ಆ ಪಾತ್ರ ಮಾಡಿದ ನಟ ಪಜೀತಿ ಅನುಭವಿಸಿದ್ದಾರೆ.
ಕಳೆದ ವಾರವಷ್ಟೇ ರಿಲೀಸ್​ ಆದ ಸಿನಿಮಾ ಪ್ರೇಕ್ಷಕರ ಮನದ ಕದ ತಟ್ಟಿದೆ. ಹೊಸಬರ ಚಿತ್ರಗಳಿಗೆ ಜನ ಥಿಯೇಟರ್​ಗೆ ಬರೋದೇ ಕಡಿಮೆ ಇರೋ ಇಂಥಾ ಟೈಮಲ್ಲಿ ಲವ್​ರೆಡ್ಡಿ ಸಿನಿಮಾ ಹೌಸ್​ ಫುಲ್​ ಪ್ರದರ್ಶನ ಕಾಣ್ತಾ ಇದೆ. ಆದ್ರೆ ಈಗ ಸಿನಿಮಾ ಕಂಟೆಂಟ್​ನಿಂತ ಹೆಚ್ಚಾಗಿ ಈ ಒಂದು ವಿಚಾರದಿಂದ ಭಾರೀ ಸುದ್ದಿಯಾಗ್ತಿದೆ. ಅಂಜನ್​ ರಾಮಚಂದ್ರ ಮತ್ತು ಶ್ರಾವಣಿ ನಟನೆಯ ಲವ್​ರೆಡ್ಡಿ ಸಿನಿಮಾವನ್ನ ನೋಡಿದ ಮಹಿಳಾ ಪ್ರೇಕ್ಷಕರೊಬ್ಬರು ಹೀಗೆ ಚಿತ್ರದ ಖಳನಾಯಕನ ಮೇಲೆ ಎರಗಿದ್ರು. ಶರ್ಟ್​ ಹಿಡಿದು ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಯನ್ನೂ ಮಾಡಿದ್ದಾರೆ.
WATCH: A shocking incident unfolded in a theatre when a woman slapped Telugu actor #NTRamaswamy after his character caused the separation of the lead couple in a film. pic.twitter.com/l97LrtDYtL
— The Federal (@TheFederal_News)
WATCH: A shocking incident unfolded in a theatre when a woman slapped Telugu actor #NTRamaswamy after his character caused the separation of the lead couple in a film. pic.twitter.com/l97LrtDYtL
— The Federal (@TheFederal_News) October 25, 2024
">October 25, 2024
ಲವ್​ ರೆಡ್ಡಿ, ಸಿನಿಮಾದ ಟೈಟಲ್​ನಲ್ಲಿ ಇರುವಂತೆಯೇ ಪ್ರೀತಿಯಾಧಾರಿತ ಸಿನಿಮಾ ಆಗಿದ್ದು, ಇಲ್ಲಿ ಹೀರೋ ಊಹೆಯಲ್ಲೇ ಹೀರೋಯಿನ್​ನ ಪ್ರೀತಿ ಮಾಡ್ಕೊಂಡು ಪಡೋ ಪಾಡು ಕೊನೆಗೆ ಆಕೆ ಸಿಗದೇ ಇದ್ದಾಗ ಆಗೋ ನೋವು ಎಲ್ಲವೂ ಪ್ರೇಕ್ಷಕರ ಮನಮುಟ್ಟುವಂತೆ ಮಾಡ್ತಿದೆ.ಅದೇ ರೀತಿ ನಿನ್ನೆ ಹೈದರಾಬಾದ್‌ನ ನಿಜಾಂಪೇಟ್‌ನಲ್ಲಿರುವ ಜಿಪಿಆರ್ ಮಾಲ್‌ನಲ್ಲಿ ಶೋ ಮುಗಿದ ಮೇಲೆ ಚಿತ್ರತಂಡ ಸರ್ಪ್ರೈಸ್​ ಎಂಟ್ರಿ ಕೊಟ್ಟು ಪ್ರೇಕ್ಷಕರ ಜೊತೆ ಮಾತಾಡೋಕೆ ಟ್ರೈ ಮಾಡ್ತಾರೆ. ನಟ ಅಂಜನ್ ರಾಮಚಂದ್ರ, ನಟಿ ಶ್ರಾವಣಿ, ನಿರ್ದೇಶಕ ಸ್ಮರಣ್ ರೆಡ್ಡಿ ಎಲ್ಲರೂ ಥಿಯೇಟರ್​ನಲ್ಲಿ ಮಾತು ಶುರು ಮಾಡ್ತಿದ್ದಂತೆ ಮಹಿಳೆ ಏಕಾಏಕಿ ಬಂದು ತಂದೆ ಪಾತ್ರಧಾರಿ ನಟ ಎನ್‌ಟಿ ರಾಮಸ್ವಾಮಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಕೂಡಲೇ ಅಲರ್ಟ್​ ಆದ ಚಿತ್ರತಂಡ ಮಹಿಳೆಯನ್ನ ಎಳೆದುಕೊಂಡು ಪಕ್ಕಕ್ಕೆ ಕರೆದುಕೊಂಡು ಹೋಗ್ತಾರೆ ಅವರಿಗೆ ಇದು ಕೇವಲ ಸಿನಿಮಾ ಅಷ್ಟೇ ನಿಜ ಜೀವನದಲ್ಲಿ ಅವರು ಕೆಟ್ಟವರಲ್ಲ ಎಂದು ಹೇಳ್ತಾರೆ. ಆದ್ರೂ ಮಹಿಳೆ ಅದನ್ನ ಒಪ್ಪಿಕೊಂಡಿಲ್ಲ. ಬಳಿಕ ಆಕೆಯನ್ನ ಥಿಯೇಟರ್​ನಿಂದ ಹೊರಗೆ ಕರೆದುಕೊಂಡು ಹೋಗಲಾಗಿದೆ.
/newsfirstlive-kannada/media/post_attachments/wp-content/uploads/2024/10/N-T-RAMASWAMY-ATTACK-1.jpg)
ಮತ್ತೊಂದು ಉದಾಹರಣೆ ಅಂದ್ರೆ 1987-1988 ರಲ್ಲಿ ಹಿಂದಿಯಲ್ಲಿ ರಾಮಾಯಣ ಪ್ರಸಾರ ಆಗ್ತಿತ್ತು.. ಪ್ರತಿ ಭಾನುವಾರ ಈ ಸೀರಿಯಲ್ ಬೆಳಗ್ಗೆ ಪ್ರಸಾರ ಆಗುತ್ತಿತ್ತು. ಇದರ ಪ್ರಖ್ಯಾತಿಯ ಎಷ್ಟರ ಮಟ್ಟಿಗೆ ಇತ್ತು ಅಂದ್ರೆ ಆ ಸೀರಿಯಲ್​ ನೋಡೋಕಂತಾನೇ ಜನರು ಸ್ನಾನ ಮಾಡಿಕೊಂಡು ಬಂದು ಕೂರೋದು. ರಾಮ ಬಂದಾಗ ಟಿವಿಗೆ ಪೂಜೆ ಮಾಡೋದು ಎಲ್ಲವನ್ನೂ ಮಾಡ್ತಿದ್ರು. ಈ ಸೀರಿಯಲ್​ನ ರಾಮನ ಪಾತ್ರಧಾರಿ ಅರುಣ್ ಗೋವಿಲ್​ಗೆ​ ಸೀರಿಯಲ್​ನ ಜನರು ಒಪ್ಪಿಕೊಂಡಿದ್ದು​ ಒಂದು ಕಡೆ ಖುಷಿ ತಂದ್ರೆ ಮತ್ತೊಂದ್ಕಡೆ.. ಇವರು ಹೋಗಿದ ಕಡೆಯಲ್ಲೆಲ್ಲಾ ಜನರು ಇವರನ್ನ ದೇವರಂತೆಯೇ ಕಂಡು ಕೈ ಮುಗಿಯುತ್ತಿದ್ರು, ಕಾಲಿಗೆ ಬೀಳ್ತಿದ್ರು. ಇದನ್ನ ಕಂಡ ಅರುಣ್​ ಗೋವಿಲ್​ ತನಗೆ ಸಿಗರೇಟ್​ ಸೇದೋ ಅಭ್ಯಾಸವಿದ್ರೂ ಅದನ್ನ ಬಿಟ್ಟು ಬಿಟ್ಟರು.
ಇದನ್ನೂ ಓದಿ:ಬಾಲಿವುಡ್ ಗಾಯಕನಿಗೆ ಡೂಡಲ್​ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಗೂಗಲ್: ಯಾರು ಈ ಕೆಕೆ?
/newsfirstlive-kannada/media/post_attachments/wp-content/uploads/2024/10/N-T-RAMASWAMY-ATTACK.jpg)
ಇನ್ನೂ ನಮ್ಮ ಕನ್ನಡದ ನಟ ವಜ್ರಮುನಿ. ಖಳ ನಾಯಕನಾಯಕನಾಗಿ ನಮ್ಮೆಲ್ಲರನ್ನ ರಂಜಿಸಿದ್ದ ನಟ.. ಇವರ ಪೌರಾಣಿಕ ಪಾತ್ರಗಳನ್ನ ಅಚ್ಚುಕಟ್ಟಾಗಿ ನಟಿಸುತ್ತಿದ್ದ ನಟ. ಇವರ ಸಿನಿಮಾಗಳನ್ನ ನೋಡಿ ವಜ್ರಮುನಿಯವರ ಮಕ್ಕಳೇ ತಂದೆಯಂದ್ರೆ ಭಯ ಪಡ್ತಿದ್ರಂತೆ. ಅದೇನೇ ಇರ್ಲಿ ಸಿನಿಮಾದಲ್ಲಿ ಮಾಡೋ ಪಾತ್ರಗಳನ್ನ ನಿಜ ಜೀವನದಲ್ಲಿ ಅವರು ಹೀಗೇ ಇರೋದು ಅಂತ ನಿರ್ಧರಿಸಿದ್ರೆ ಹೇಗೆ ಅಲ್ವಾ? ಸಿನಿಮಾದ ಪಾತ್ರವೇ ಬೇರೆ. ನಿಜ ಜೀವನವೇ ಬೇರೆ. ಇದನ್ನ ಎಲ್ಲರೂ ಅರ್ಥ ಮಾಡ್ಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us