ಗಾಯಗೊಂಡು ಮನೆಯಿಂದ ಆಸ್ಪತ್ರೆಗೆ ಓಡಿದ ಪ್ರಿಯಕರ
ಪ್ರಿಯಕರನನ್ನ ಯುವತಿ ತನ್ನ ಮನೆಗೆ ಕರೆಯಿಸಿಕೊಂಡಿದ್ದೇಕೆ?
ತನಿಖೆ ಕೈಗೊಂಡಿರುವ ಪೊಲೀಸರು, ಯುವತಿ ಸಿಕ್ಕಿದ್ದಾಳಾ.?
ಮುಂಬೈ: ಯುವಕ, ಯುವತಿ ಪ್ರೀತಿಯಲ್ಲಿ ಬೀಳುವುದು ಕಾಮನ್. ಆದರೆ ಈ ಪ್ರೀತಿಯನ್ನ ಹಾಗೇ ಮುಂದುವರೆಸಿಕೊಂಡು ಹೋಗುವುದು ಮುಖ್ಯ. ಮುಂದುವರೆಸಿಕೊಂಡು ಹೋದ ಮೇಲೆ ಮದುವೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯ. ಈ ಮದುವೆ ವಿಚಾರದಲ್ಲಿ ಇಬ್ಬರ ನಡುವೆ ಸ್ವಲ್ಪ ಅಡೆತಡೆಗಳು ಬಂದರೆ ಏನು ನಡೆದು ಹೋಗುತ್ತೋ ಎನ್ನುವುದು ಊಹೆ ಮಾಡುವುದು ಕಷ್ಟ. ಸದ್ಯ ಇಲ್ಲೊಂದು ಸಂಗತಿಯಲ್ಲಿ ಯುವಕನ ಖಾಸಗಿ ಅಂಗವನ್ನ ಯುವತಿ ಗಾಯಗೊಳಿಸಿದ್ದಾಳೆ.
ಇದನ್ನೂ ಓದಿ: ಕುಸ್ತಿ ಅಖಾಡದಿಂದ ರಾಜಕೀಯಕ್ಕೆ ವಿನೇಶ್ ಫೋಗಟ್.. ಎಲೆಕ್ಷನ್ನಲ್ಲಿ ಬಬಿತಾ ಫೋಗಟ್ ವಿರುದ್ಧ ಸೈ ಅಂತಾರಾ?
26 ವರ್ಷದ ಪ್ರಿಯತಮೆ ಹಾಗೂ 31 ವರ್ಷದ ಪ್ರಿಯಕರ ಈ ಇಬ್ಬರು ಕೆಲವು ವರ್ಷಗಳಿಂದ ಪ್ರೀತಿ ಮಾಡಿಕೊಂಡಿದ್ದರು. ಲವ್ ಚೆನ್ನಾಗಿಯೇ ನಡೆದುಕೊಂಡು ಬಂದಿದೆ. ಆದರೆ ಈ ನಡುವೆ ಪ್ರಿಯತಮೆ ಮದುವೆ ಆಗುವಂತೆ ಪ್ರಿಯಕರನಲ್ಲಿ ಬೇಡಿಕೆ ಇಟ್ಟಿದ್ದಾಳೆ. ಆದರೆ ಇದನ್ನು ಆತ ನಿರಾಕರಣೆ ಮಾಡಿದ್ದಾನೆ. ಮದುವೆಗಾಗಿ ಯುವತಿ ಪದೇ ಪದೇ ಪೀಡಿಸುತ್ತಿದ್ದರೂ ಪ್ರಿಯಕರನಿಂದ ಮದುವೆ ಬೇಡ ಎಂದು ಉತ್ತರ ಬಂದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಇಂದು ಕೂಡ ಧಾರಾಕಾರ ಮಳೆ.. 4 ಜಿಲ್ಲೆಗಳಿಗೆ ಅಲರ್ಟ್; ಮನೆಗಳಿಗೆ ನುಗ್ಗಿದ ನೀರು, ಬೆಳೆ ಎಲ್ಲ ಜಲಾವೃತ
ಇದರಿಂದ ಬೇಸತ್ತ ಪ್ರಿಯತಮೆ ಪ್ರಿಯಕರನನ್ನ ಉಪಾಯದಿಂದ ತನ್ನ ಮನೆಗೆ ಕರೆಯಿಸಿಕೊಂಡು ಎಂದಿನಂತೆ ಮಾತಾಡಿದ್ದಾಳೆ. ಬಳಿಕ ಚಾಕುವಿನಿಂದ ಪ್ರಿಯಕರನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಆತನ ಖಾಸಗಿ ಅಂಗದ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ಇದರಿಂದ ಆತ ತೀವ್ರವಾಗಿ ಗಾಯಗೊಂಡಿದ್ದನು. ಹೇಗೋ ಅವಳಿಂದ ತಪ್ಪಿಸಿಕೊಂಡು ಸಮೀಪದ ಆಸ್ಪತ್ರೆಗೆ ಓಡಿ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ನಂತರ ಪೊಲೀಸ್ ಠಾಣೆಗೆ ಹೋಗಿ ಕೇಸ್ ದಾಖಲು ಮಾಡಿದ್ದಾನೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಇನ್ನು ಈ ಘಟನೆಯು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಸಿಟಿಯ ಪದ್ಮಾ ನಗರ ಏರಿಯಾದಲ್ಲಿ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ