/newsfirstlive-kannada/media/post_attachments/wp-content/uploads/2024/08/BAGALAGUNTE-SUICIDE-CASE.jpg)
ಬೆಂಗಳೂರು: ಬಾಗಲಗುಂಟೆ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಮಮತಾ ಎಂಬ 31 ವರ್ಷದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಇಬ್ಬರು ಯುವಕರ ಹೆಸರು ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯ ಸಾವಿಗೆ ಅವಳದೇ ಇಬ್ಬರು ಕ್ಲಾಸ್ಮೇಟ್ ಕಾರಣವಾಗಿದ್ದು ನಿಜಕ್ಕೂ ಆಘಾತಕಾರಿ ವಿಷಯ. ವಿವಾಹಿತ ಮಹಿಳೆಗೆ ಆಕೆಯ ಕ್ಲಾಸ್ಮೇಟ್ಸ್ನಿಂದ ಅಶ್ಲೀಲ ಮೆಸೇಜ್ಗಳು ಬರುತ್ತಿದ್ದವು ಅನ್ನೋ ಆರೋಪ ಕೇಳಿ ಬಂದಿದೆ. ಅಶೋಕ್ ಹಾಗೂ ಗಣೇಶ್ ಎಂಬ ಯುವಕರ ವಿರುದ್ದ ಡೆತ್ ನೋಟ್ ಬರೆದಿಟ್ಟಿರುವ ಮೃತ ಮಹಿಳೆ ಮಮತಾ, ನನ್ನ ಜೊತೆ ಸಹಕರಿಸು, ನೈಟ್ಔಟ್ ಹೋಗೋಣವೆಂದು ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ತನ್ನ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ.
ಇದನ್ನೂ ಓದಿ:ಬಾಡಿ ಸ್ಮೆಲ್, ಲೈಂಗಿಕ ಅತೃಪ್ತಿ; ಸಂಬಂಧ ಮುರಿದು ಬೀಳಲು ನೈಜ ಕಾರಣಗಳೇನು? ನೀವು ಓದಲೇಬೇಕು!
ಮಮತಾಳ ಸ್ಕೂಲ್ಮೇಟ್ಸ್ ಆಗಿದ್ದ ಗಣೇಶ್ ಹಾಗೂ ಅಶೋಕ್ ಅಶ್ಲೀಲ ಮೆಸೇಜ್ ಕಳಿಸಿ ನಮ್ಮ ಜೊತೆ ಸಹಕರಿಸದಿದ್ದರೆ ನಿನ್ನನ್ನು ಸುಮ್ಮನೇ ಬಿಡೋದಿಲ್ಲ ನಿನ್ನ ಸಂಸಾರವನ್ನು ಹಾಳು ಮಾಡುತ್ತೇವೆ ಎಂದು ಸಂದೇಶಗಳನ್ನು ಕಳಿಸುತ್ತಿದ್ದರಂತೆ. ಇದರಿಂದ ಮನನೊಂದ ಮಹಿಳೆ ಆರೋಪಿಗಳ ವಿರುದ್ಧ ಡೆತ್ನೋಟ್ ಬರೆದಿಟ್ಟು, ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಮೃತ ಮಮತಾ ಪತಿ ಲೋಕೇಶ್ರಿಂದ ದೂರು ದಾಖಲಾಗಿದೆ. ಡೆತ್ನೋಟ್ ಆಧರಿಸಿ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ. ಮಮತಾ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಸ್ವಿಚ್ ಮಾಡಿಕೊಂಡು ಪರಾರಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ