newsfirstkannada.com

ಕೆಲ ವರ್ಷಗಳಿಂದ ಕತ್ತಲ ಕೋಣೆಯಲ್ಲಿ ನರಳುತ್ತಿರೋ ಮಹಿಳೆ.. ಈಕೆಯ ಕಥೆ ಕೇಳಿದ್ರೆ ಕರುಳು ಚುರುಕ್‌ ಅನ್ನುತ್ತೆ

Share :

Published March 27, 2024 at 5:48am

  ತನ್ನೊಡಲು ಸೇರಿರುವ ಮಗಳ ಸ್ಥಿತಿ ನೋಡಿ ಹೆತ್ತ ತಾಯಿ ಕಣ್ಣೀರು

  ಆಟೋದಿಂದ ಕೆಳಗೆ ಬಿದ್ದಿದ್ದಕ್ಕೆ ಮಗನಿಗೆ ಅಂಗವೈಕಲ್ಯ ಉಂಟಾಗಿದೆ

  ಇದಕ್ಕೆ ಪರಿಣಾಮವೇ ಆ ಮಹಿಳೆ ಮಾನಸಿಕವಾಗಿ ಖಿನ್ನತೆಗೆ ಕಾರಣ

ಇದು ಕರುಣಾಜನಕ ಕಥೆ. ಹೆಣ್ಣು ಮಗಳೊಬ್ಬಳು ಕೆಲ ವರ್ಷಗಳಿಂದ ಕತ್ತಲ ಕೋಣೆಯಲ್ಲಿ ನರಳುತ್ತಿರುವ ಕಣ್ಣೀರ ಕಥೆ ಇದು. ಸೂರ್ಯನ ಬೆಳಕು ನೋಡದೆ ವರ್ಷಗಟ್ಟಲೇ ಕಳೆಯುತ್ತಿರುವ ಈಕೆಯ ಆಕ್ರಂದನ ನಿಜಕ್ಕೂ ಕರುಳು ಚುರುಕ್‌ ಅನ್ನುವಂತಿದೆ.

ಕತ್ತಲ ಕೋಣೆ.. ನಾಲ್ಕು ಗೋಡೆ ಮಧ್ಯೆ ಕುಗ್ಗಿ ಹೋಗಿರೋ ಮಹಿಳೆ. ಕರುಳು ಚುರುಕ್‌ ಅನ್ನಿಸುತ್ತೆ ಈಕೆಯ ಯಾತನೆ. ಬಾಯಾರಿಕೆಯಿಂದ ಒದ್ದಾಡಿದ್ರೂ ಹನಿ ನೀರು ಕೊಡೋರು ಇರಲಿಲ್ಲ. ಅಷ್ಟಕ್ಕೂ ಹೀಗೆ ಹಾಸಿಗೆ ಹಿಡಿದಿರೋ ಮಹಿಳೆ ಮೊದಲು ಹೇಗಿದ್ರು ಗೊತ್ತಾ?.

ಗಂಡನ ಜೊತೆ ಇರುವಾಗ ಮುಖದ ತುಂಬಾ ಲಕ್ಷಣ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ಗರ್ಭಿಣಿ ಹೇಗಿದ್ದವಳು ಹೇಗಾಗಿದ್ದಾಳೆ. ಎದ್ದು ಕೂರೋಕೂ ಆಗದ ಸ್ಥಿತಿ ಇಗ ಇದೆ. ಆದ್ರೀಗ ಕಟ್ಟಿಕೊಂಡ ಗಂಡನೂ ಜೊತೆಗಿಲ್ಲ. ಅತ್ತೆಯೂ ಆಸರೆ ನೀಡ್ತಿಲ್ಲ. ಮರಳಿ ತನ್ನೊಡಲು ಸೇರಿರೋ ಮಗಳ ಸ್ಥಿತಿ ನೋಡಿ ಹೆತ್ತ ತಾಯಿಗೆ ಕಣ್ಣೀರಿಡೋದು ಬಿಟ್ಟು ಬೇರೆ ದಾರಿ ಇಲ್ಲ.

ಇದನ್ನೂ ಓದಿ: ಮೋಹಕ ತಾರೆ ಅಭಿಮಾನಿಗಳಿಗೆ ಬೇಸರದ ಸುದ್ದಿ.. ಶಾಕಿಂಗ್ ನಿರ್ಧಾರ ಅನೌನ್ಸ್ ಮಾಡಿದ ರಮ್ಯಾ; ಏನದು?

ಯಲಹಂಕದ ಚಿಕ್ಕಗೊಲ್ಲರಹಟ್ಟಿಯ ಹೆಣ್ಮಗಳೊಬ್ಬಳ ಕತೆಯಿದು. ಕೆಲ ವರ್ಷದ ಹಿಂದೆ ಹೆರಿಗೆ ನೋವಿನಿಂದ ಒದ್ದಾಡಿದ್ದ ನೇತ್ರಾವತಿಗೆ ಆಟೋದಲ್ಲೇ ಡೆಲಿವರಿಯಾಗಿತ್ತು. ಆಟೋದಿಂದ ಕೆಳಗೆ ಬಿದ್ದಿದ್ರಿಂದ ಮಗುವಿಗೆ ಅಂಗವೈಕಲ್ಯವುಂಟಾಗಿದೆ. ಅಷ್ಟೇ ಅಲ್ಲ, ಮಗುವಿನ ಮಾನಸಿಕ ಸ್ಥಿತಿ ಸರಿಯಿಲ್ಲ. ಹೀಗಾಗಿ ನೇತ್ರಾವತಿಗೆ ಮುಂದೆ ಹುಟ್ಟೋ ಮಗುವೂ ಹೀಗೇ ಆಗುತ್ತೇನೋ ಎಂಬ ಆತಂಕದಿಂದ ಅತ್ತೆ ಗಂಡ-ಹೆಂಡತಿನಾ ದೂರ ಮಾಡಿದಳು ಅನ್ನೋ ಆರೋಪವಿದೆ. ಇದಕ್ಕೆ ಪರಿಣಾಮವೇ ಆ ಮಹಿಳೆ ಮಾನಸಿಕವಾಗಿ ಖಿನ್ನತೆಗೆ ತುತ್ತಾಗಿದ್ದಾಳೆ.

ಮಗಳ ಈ ದಾರುಣ ಸ್ಥಿತಿ ಕಂಡು ಹೆತ್ತೊಡಲು ನಿತ್ಯ ಕಣ್ಣೀರು ಹಾಕ್ತಿದೆ. ನಾನಿರೋವರೆಗೂ ಸರಿ. ಆಮೇಲೆ ಮಗಳಿಗೆ ಗತಿಯೇನು ಅನ್ನೋ ಚಿಂತೆ ಆ ತಾಯಿಯದ್ದು ಆಗಿದೆ.

ನಾನು ತಾಯಿ, ಇರೊಗಂಟ ಮಾಡುತ್ತೇನೆ. ನಾನು ಇಲ್ಲದೇ ಹೋದ ಮೇಲೆ ಇವರಿಗ್ಯಾರು ಆಗ್ತಾರೋ. ಅಳಯ, ಮಗ ಯಾರು ಇವಳನ್ನ ನೋಡುತ್ತಿಲ್ಲ. ನಾನು ದುಡಿಯಬೇಕು ಅವಳಿಗೆ ತಂದು ಹಾಕಬೇಕು. ಆದರೆ ಈಗೀಗ ಕೆಲಸಕ್ಕೆ ಹೋಗುತ್ತಿಲ್ಲ. ನಾನು ಕೆಲಸಕ್ಕೆ ಹೋದರೆ ಅವಳನ್ನ ನೋಡಿಕೊಳ್ಳುವರು ಯಾರು ಇಲ್ಲ.

ನೇತ್ರಾವತಿ ತಾಯಿ

ಇತ್ತ 13 ವರ್ಷದ ಮಗ ಸದ್ಯ ತಂದೆ, ಅಜ್ಜಿಯ ಜೊತೆಗಿದ್ದಾನೆ. ಎದ್ದು ನಡೆಯೋಕಾಗದ ಸ್ಥಿತಿ ಆ ಪೋರನದ್ದು. ಅತ್ತೆ ಮನೆಯವ್ರೂ ಬಡವರೇನೇ. ಆದ್ರೂ ನೇತ್ರಾವತಿ ಮಾಡಿದ ತಪ್ಪೇನು? ಪತ್ನಿಗೆ ಆಸರೆಯಾಗ್ಬೇಕಿದ್ದ ಪತಿ ದೂರ ಮಾಡಿದ್ದು ತಪ್ಪಲ್ವಾ?. ಸಂಬಂಧಪಟ್ಟ ಅಧಿಕಾರಿಗಳು ಮಹಿಳೆಗೆ ಕತ್ತಲ ಕೋಣೆಯಿಂದ ಮುಕ್ತಿ ಕೊಡಿಸಬೇಕಿದೆ. ಬಡ ಕುಟುಂಬದ ಸಹಾಯಕ್ಕೆ ಬಂದು ನೇತ್ರಾವತಿಯ ಚಿಕಿತ್ಸೆಗೆ ನೆರವಿನ ಹಸ್ತ ನೀಡ್ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಲ ವರ್ಷಗಳಿಂದ ಕತ್ತಲ ಕೋಣೆಯಲ್ಲಿ ನರಳುತ್ತಿರೋ ಮಹಿಳೆ.. ಈಕೆಯ ಕಥೆ ಕೇಳಿದ್ರೆ ಕರುಳು ಚುರುಕ್‌ ಅನ್ನುತ್ತೆ

https://newsfirstlive.com/wp-content/uploads/2024/03/WOMAN_HOUSE_ARREST_2.jpg

Load More