/newsfirstlive-kannada/media/post_attachments/wp-content/uploads/2024/01/MUMBAI-1.jpg)
ಮಹಾರಾಷ್ಟ್ರದ ಪುಣೆಯಲ್ಲಿ ಸ್ನೇಹಿತನ ಗುಂಡೇಟಿಗೆ ಮಹಿಳಾ ಟೆಕ್ಕಿಯೊಬ್ಬಳು ಬಲಿಯಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಿಂಜವಾಡಿಯಲ್ಲಿರುವ ಒಯೊ ಟೌನ್ ಹೌಸ್ ಹೋಟೆಲ್ನಲ್ಲಿ ಕೃತ್ಯ ನಡೆದಿದೆ.
ರಿಷಬ್ ನಿಗಮ್ ಕೊಲೆಗೈದ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ವಂದನಾ ದ್ವಿವೇದಿ ಕೊಲೆಯಾದ ಮಹಿಳಾ ಟೆಕ್ಕಿ. ಇಬ್ಬರು ಹಂಜವಾಡಿಯಲ್ಲಿರುವ ಐಟಿ ಕಂಪನಿ ಒಂದರಲ್ಲಿ ವಂದನಾ ಕೆಲಸ ಮಾಡುತ್ತಿದ್ದಳು. ಬಂಧಿತ ರಿಷಬ್ ಉತ್ತರ ಪ್ರದೇಶ ಲಖನೌ ನಿವಾಸಿ ಆಗಿದ್ದಾನೆ.
ಕಳೆದ 10 ವರ್ಷಗಳಿಂದ ಇಬ್ಬರು ಲವ್ ಮಾಡುತ್ತಿದ್ದರು. ಅಂತೆಯೇ ಉತ್ತರ ಪ್ರದೇಶದಿಂದ ರಿಷಬ್, ವಂದನಾಳನ್ನು ಭೇಟಿಯಾಗಲು ಬಂದಿದ್ದ. ಜನವರಿ 25 ರಂದು ಇಬ್ಬರು ಹೋಟೆಲ್ ಬುಕ್ ಮಾಡಿದ್ದರು. ಭೇಟಿ ಹೆಸರಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಸಿಕ್ಕ ಸಿಸಿಟಿವಿ ವಿಡಿಯೋ ಪ್ರಕಾರ, ರಾತ್ರಿ 10 ಗಂಟೆ ಸುಮಾರಿಗೆ ವಂದನಾಳನ್ನು ಕೊಲೆ ಮಾಡಿ ಹೋಟೆಲ್ನಿಂದ ಪರಾರಿಯಾಗಿದ್ದಾನೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ಆರಂಭಿಸಿದ್ದಾರೆ. ವಿಚಾರಣೆ ಹಿನ್ನೆಲೆಯಲ್ಲಿ ಹೋಟೆಲ್ ಕೂಡ ಸೀಲ್ ಮಾಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ