Advertisment

ಅಟಲ್ ಸೇತುವೆಯಿಂದ ಧುಮುಕಿ ಆತ್ಮ*ಹತ್ಯೆಗೆ ಯತ್ನಿಸಿದ ಯುವತಿ: ಬೆಚ್ಚಿ ಬೀಳಿಸುತ್ತೆ ವಿಡಿಯೋ

author-image
Gopal Kulkarni
Updated On
ಅಟಲ್ ಸೇತುವೆಯಿಂದ ಧುಮುಕಿ ಆತ್ಮ*ಹತ್ಯೆಗೆ ಯತ್ನಿಸಿದ ಯುವತಿ: ಬೆಚ್ಚಿ ಬೀಳಿಸುತ್ತೆ ವಿಡಿಯೋ
Advertisment
  • ಆತ್ಮಹತ್ಯೆ ಮಾಡಿಕೊಳ್ಳುವವರ ನೆಚ್ಚಿನ ತಾಣವಾಗುತ್ತಿದೆಯಾ ಅಟಲ್ ಸೇತು?
  • 56 ವರ್ಷದ ಮುಂಬೈ ನಿವಾಸಿ ಅಟಲ್ ಬ್ರೀಡ್ಜ್​ನಿಂದ ಹಾರಲು ಯತ್ನಿಸಿದ್ದೇಕೆ ?
  • ಮಹಿಳೆಯನ್ನು ಕಾಪಾಡಲು ಕ್ಯಾಬ್​ ಡ್ರೈವರ್, ಪೊಲೀಸರ ಹರಸಾಹ ಎಂತಹದು?

ಮುಂಬೈ: ಮುಂಬೈನಲ್ಲಿರುವ ಅಟಲ್ ಸೇತು ಟ್ರಾಫಿಕ್ ಕಂಟ್ರೋಲ್ ಉದ್ದೇಶದಿಂದಾಗಿ ನಿರ್ಮಿಸಲಾಗಿದೆ. ಸಮುದ್ರದ ಮಧ್ಯೆಯೇ ಸುಮಾರು 16 ಕಿಲೋ ಮೀಟರ್​ನಷ್ಟು ಉದ್ದವಿರುವ ಈ ಸೇತು ಮುಂಬೈನ ಸೇವರಿಯಿಂದ ಆರಂಭವಾಗಿ ಉರಾನ್ ತಾಲೂಕಿನ ಚಿರ್ಲೆಯಲ್ಲಿ ಕೊನೆಗೊಳ್ಳುತ್ತದೆ. ಈ ಒಂದು ಸೇತುವೆ ನಿರ್ಮಾಣವಾದಾಗ ಮುಂಬೈನ ಹೆಮ್ಮೆಯಂತೆ ಸುದ್ದಿಯಾಗಿತ್ತು. ಆದ್ರೆ ಸದ್ಯ ಇದು ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಹಾಟ್​ಸ್ಪಾಟ್​ ಆಗಿ ಗುರುತಿಸಿಕೊಳ್ಳುತ್ತಿದೆ. ಕಳೆದ ತಿಂಗಳವಷ್ಟೇ 65 ವರ್ಷದ ವ್ಯಾಪಾರಿಯೊಬ್ಬರು ತಮ್ಮ ಕಾರ್ ಅಟಲ್ ಸೇತು ಮೇಲೆ ನಿಲ್ಲಿಸಿ ಬ್ರೀಡ್ಜ್​ನಿಂದ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.

Advertisment

ಇದನ್ನೂ ಓದಿ:ಗಡಿಯಲ್ಲಿ ಹದ್ದಿನ ಕಣ್ಣಿಡಲು ಬರ್ತಿವೆ MQ9B ಡ್ರೋನ್​ಗಳು; ಪಾಕ್-ಚೀನಾ ಎದೆಯಲ್ಲಿ ನಡುಕ; ಏನಿದರ ಸಾಮರ್ಥ್ಯ?

56 ವಯಸ್ಸಿನ ಮುಲುಂದದ ನಿವಾಸಿ ಅಟಲ್ ಸೇತುವಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವಾಗ ಅದೃಷ್ಟವಶಾತ್ ಕ್ಯಾಬ್ ಡ್ರೈವರ್ ಹಾಗೂ ಟ್ರಾಫಿಕ್ ಪೊಲೀಸರ ಹರಸಾಹಸದಿಂದ ಬದುಕುಳಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಗೆ ಯತ್ನ ಎಂದು ಕಾಣುತ್ತಿದೆಯಾದರು. ರಕ್ಷಣೆಯಾದ ಮಹಿಳೆ ಬೇರೆಯದ್ದೇ ಕಥೆಯನ್ನು ಹೇಳಿದ್ದಾಳೆ.

ಇದನ್ನೂ ಓದಿ:R N Agarwal: ಅಗ್ನಿ ಕ್ಷಿಪಣಿಗಳ ಪಿತಾಮಹ ಡಾ. ರಾಮ್ ನರೈನ್ ಅಗರ್ವಾಲ್ ನಿಧನ

Advertisment

ಮಹಿಳೆಯನ್ನು ರೀಮಾ ಪಟೇಲ್ ಎಂದು ಗುರುತಿಸಲಾಗಿದೆ. ಮುಲುಂದದಿಂದ ಕ್ಯಾಬ್​ ಬಾಡಿಗೆ ತೆಗೆದುಕೊಂಡು ಅಟಲ್ ಸೇತುವಿನ ಕಡೆ ಬಂದಿದ್ದಳು. ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಅಟಲ್ ಸೇತುವಿನ ಬ್ರಿಡ್ಜ್​ನಿಂದ ಬೀಳಲು ಯತ್ನಿಸಿದ ಮಹಿಳೆಯನ್ನು ಕ್ಯಾಬ್ ಡ್ರೈವರ್ ರಕ್ಷಿಸಲು ಆಕೆಯ ಕೂದಲನ್ನು ಹಿಡಿದಿದ್ದ. ಇದೇ ವೇಳೆ ಅದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ಕ್ಯಾಬ್​ ಡ್ರೈವರ್ ಗಟ್ಟಿಯಾಗಿ ಮಹಿಳೆಯ ಕೂದಲನ್ನು ಹಿಡಿದುಕೊಂಡಿದ್ದು ಹಾಗೂ ಆಕೆ ಬ್ರಿಡ್ಜ್​ ನಡುವೆ ನೇತಾಡುತ್ತಿದ್ದನ್ನು ಕಂಡು ಕೂಡಲೇ ರಕ್ಷಣೆಗೆ ಧಾವಿಸಿ ಕೊನೆಗೆ ಮಹಿಳೆಯನ್ನು ಹರಸಾಹಸಪಟ್ಟು ರಕ್ಷಿಸಿದ್ದಾರೆ.

ಟ್ರಾಫಿಕ್ ಪೊಲೀಸರು ಹೇಳುವ ಪ್ರಕಾರ, ನಾವು ಅದೇ ದಾರಿಯಲ್ಲಿ ಸಂಚಾರ ಮಾಡುತ್ತಿದ್ದೆವು. ಆ ವೇಳೆ ಬ್ರಿಡ್ಜ್ ನಡುವೆ ಒಂದು ಕಾರ್ ನಿಂತಿದ್ದನ್ನು ಕಂಡೆವು. ಕೂಡಲೇ ಹತ್ತಿರ ಹೋಗಿ ನೋಡಿದಾಗ, ಮಹಿಳೆಯನ್ನು ರಕ್ಷಿಸಲು ಕ್ಯಾಬ್​ ಚಾಲಕ ಸಾಹಸ ಮಾಡುತ್ತಿದ್ದ. ಕೂಡಲೇ ನಾವು ಕೂಡ ರಕ್ಷಣೆಗೆ ಧಾವಿಸಿ ,ಆಕೆಯನ್ನು ರಕ್ಷಿಸಿದೆವು ಎಂದು ಪೊಲೀಸ್ ಇನ್ಸ್​ಪೆಕ್ಟರ್ ಗುಲ್ಫರೋಜ್ ಮುಜಾವರ್ ಹೇಳಿದ್ದಾರೆ.

Advertisment


">August 16, 2024

ಮಹಿಳೆಯನ್ನು ರಕ್ಷಿಸಿದ ಪೊಲೀಸರು ಅಮರ್​ಶೇಟ್, ಕಿರನ್ ಮಹತ್ರೆ, ಯಶ್​ ಸೋನಾವಾನೆ ಎಂದು ಹೇಳಲಾಗಿದೆ. ಕ್ಯಾಬ್ ಡ್ರೈವರ್​ನ ಹೆಸರು ಸಂಜಯ್ ದ್ವಾರಕಾ ಯಾದವ್ ಎಂದು ತಿಳಿದು ಬಂದಿದೆ. ರಕ್ಷಣೆ ನಂತರ ನಾನು ಕೆಲವೊಂದಿಷ್ಟು ದೇವರ ಫೋಟೋ ನೀರಿನಲ್ಲಿ ಮುಳುಗಿಸುವುದಿತ್ತು. ಅದು ಒಂದು ಆಚರಣೆಯಾಗಿತ್ತು. ಆ ಕಾರಣವಾಗಿ ನಾನು ಅಟಲ್ ಸೇತುವಿನ ಬ್ರಿಡ್ಜ್​ ಗೊಡೆಯ ಕೆಳಗೆ ಇಳಿದಿದ್ದೆ ಎಂದು ಹೇಳಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment