VIDEO:ನ್ಯೂಸ್​ಪೇಪರೇ ಸಾರಿಯಾಯ್ತು..! ನಾಲ್ಕು ಗಂಟೆಗಳಲ್ಲಿ ದಿನಪತ್ರಿಕೆಯನ್ನು ಸೀರೆ ಮಾಡಿದ ಯುವತಿ

author-image
Gopal Kulkarni
Updated On
VIDEO:ನ್ಯೂಸ್​ಪೇಪರೇ ಸಾರಿಯಾಯ್ತು..! ನಾಲ್ಕು ಗಂಟೆಗಳಲ್ಲಿ ದಿನಪತ್ರಿಕೆಯನ್ನು ಸೀರೆ ಮಾಡಿದ ಯುವತಿ
Advertisment
  • ನ್ಯೂಸ್​ಪೇಪರ್​ನಲ್ಲಿ ಸಾರಿ ತಯಾರಿಸಿದ ಯುವತಿ ವಿಡಿಯೋ ವೈರಲ್
  • ನಾಲ್ಕೇ ನಾಲ್ಕು ಗಂಟೆಯಲ್ಲಿ ರೆಡಿಯಾಯ್ತು ಅದ್ಭುತ ವಿನ್ಯಾಸದ ಸಾರಿ
  • ಯುವತಿಯ ವಿಡಿಯೋಗೆ ಬಂದ ವೀವ್ಸ್​ಗಳ ಸಂಖ್ಯೆ ಎಷ್ಟು ಅಂತ ಗೊತ್ತಾ?

ಸೀರೆ ಅಂದ್ರೆ ಹೆಣ್ಣು ಮಕ್ಕಳ ಅಂದವನ್ನು ಮತ್ತಷ್ಟು ಸುಂದರಗೊಳಿಸುವ ಒಂದು ಅದ್ಭುತ ಧಿರಿಸು. ಮಟ್ಟಸವಾಗಿ ಸೀರೆಯುಟ್ಟುಕೊಂಡು, ನೆರಿಗೆಯ ಅಂಚನ್ನು ಕಾಲಿಂದ ಒದೆಯುತ್ತಾ ನಡೆದುಕೊಂಡು ಅವರು ಬಂದರೆ ಸೌಂದರ್ಯವೆಂಬ ಸೌಂದರ್ಯದ ಪದಕ್ಕೂ ಒಂದು ಕ್ಷಣ ಹೊಟ್ಟೆಕಿಚ್ಚಾಗುವ ಸಮಯವದು.

ಸೀರೆ ಹೆಣ್ಣು ಮಕ್ಕಳಿಗೆ ಎಷ್ಟು ಚೆಂದವೋ ಅಷ್ಟೇ ಹೆಣ್ಣು ಮಕ್ಕಳಿಗೆ ಸೀರೆಯೆಂದರೆ ಒಂದು ವ್ಯಾಮೋಹ. ಹಲವು ಬಗೆಯ ಸೀರೆಗಳನ್ನು ತಮ್ಮ ಅಲ್ಮೇರಾದಟ್ಟರೂ ಕೂಡ ಮತ್ಯಾವುದೋ ಡಿಸೈನ್ ಟ್ರೆಂಡಿಂಗ್ ಬಂದರೆ ಸಾಕು ಅದರತ್ತ ಅವರ ಕಣ್ಣುಗಳು ಹರಿಯುತ್ತವೆ. ಹೊಸ ಹೊಸ ಡಿಸೈನ್​ಗಳು ಅವರ ಕಣ್ಮನ ಸೆಳೆಯುತ್ತವೆ. ಆದ್ರೆ ಇಲ್ಲೊಬ್ಬ ಯುವತಿ ಜಗತ್ತಿನ ಎಲ್ಲಾ ಸಾರಿ ಡಿಸೈನ್​ಗಳಿಗೂ ಸೆಡ್ಡು ಹೊಡೆಯುವಂತಾ ಸಾರಿಯನ್ನು ತಯಾರಿಸಿದ್ದಾಳೆ.ಅದಕ್ಕೆ ಆಕೆ ತೆಗೆದುಕೊಂಡ ಸಮಯ ಕೇವಲ 4 ಗಂಟೆ ಮಾತ್ರ.

ಇದನ್ನೂ ಓದಿ:ಇಲ್ಲೊಂದು ಅದ್ಭುತ ಹಳ್ಳಿ! ಇಲ್ಲಿ ಎಣ್ಣೆ ಕುಡಿಯಂಗಿಲ್ಲ.. ಚಟಕ್ಕೆ ಬಿದ್ದವ್ರಿಗೆ ಎಂಟ್ರಿಯೇ ಇಲ್ಲ..

ಪಾರ್ವತಿಯೆಂಬ ಯುವತಿ ನ್ಯೂಸ್​ ಪೇಪರ್​ಗಳಿಂದ ಸಾರಿ ತಯಾರಿಸಿ ದೊಡ್ಡ ಸುದ್ದಿಯಾಗಿದ್ದಾರೆ. ಹಲವಾರು ನ್ಯೂಸ್​ ಪೇಪರ್​ಗಳನ್ನು ಒಟ್ಟು ಮಾಡಿ ತಾವೇ ಡಿಸೈನ್ ಮಾಡಿ ಈ ಒಂದು ಸಾರಿಯನ್ನು ರೆಡಿ ಮಾಡಿದ್ದಲ್ಲದೇ, ತಾವೇ ಉಟ್ಟುಕೊಂಡು ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದಾರೆ. ಅವರ ಈ ಒಂದು ಸಾರಿ ಡಿಸೈನ್ ಸಖತ್ ವೈರಲ್ ಆಗಿದೆ.
ಪಾರ್ವತಿ ಮೊದಲಿನಿಂದಲೂ ಆರ್ಟ್ ವರ್ಕ್​ಶಾಪ್​ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುತ್ತಾರೆ. ತಮ್ಮ ಕ್ರೀಯಾಶೀಲತೆಯನ್ನು ಮೆರೆಯುತ್ತಾರೆ. ಸದ್ಯ ನ್ಯೂಸ್​ ಪೇಪರ್​​ ಮೂಲಕ ಸಾರಿ ಸಿದ್ಧಗೊಳಿಸಿದ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:ಟ್ಯಾಟೂ ಪ್ರಿಯರೇ ಹುಷಾರ್.. ಹಚ್ಚೆ ಚುಚ್ಚಿಸಿಕೊಳ್ಳುವ ಮೊದಲು ನೀವು ಏನು ಮಾಡಬೇಕು; ತಪ್ಪದೇ ಈ ಸ್ಟೋರಿ ಓದಿ!

ಕೇವಲ ಈ ಸಾರಿಯನ್ನುಟ್ಟುಕೊಂಡು ಪೋಸ್ ಮಾತ್ರ ಕೊಟ್ಟಿಲ್ಲ. ಈ ವಿಡಿಯೋದಲ್ಲಿ ಸಾರಿ ಹೇಗೆ ತಯಾರಿಸಬಹುದು ಎಂಬ ಬಗ್ಗೆ ಬೇರೆಯವರಿಗೆ ಮಾಹಿತಿಯನ್ನು ಕೂಡ ಕೊಟ್ಟಿದ್ದಾರೆ ಪಾರ್ವತಿ.

ಪಾರ್ವತಿ ಮಾಡಿದ ಸಾರಿ ಹಾಗೂ ಉಟ್ಟುಕೊಂಡು ಕ್ಯಾಮರಾಗೆ ಪೋಸ್ಟ್ ಕೊಟ್ಟ ವಿಡಿಯೋದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು ಸುಮಾರು 20.6 ಲಕ್ಷ ವೀವ್ಸ್ ಬಂದಿವೆ. 65 ಸಾವಿರ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಅದರ ಜೊತೆಗೆ ಪಾರ್ವತಿಯ ಕೌಶಲ್ಯವನ್ನು ಕೂಡ ಜನರು ಹಾಡಿ ಹೋಗಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment