newsfirstkannada.com

ಸತ್ತ ಚಿಕ್ಕಪ್ಪನ ಹೆಸರಿನಲ್ಲಿ ಸಾಲ ಪಡೆಯೋ​ ಐಡಿಯಾ.. ಮೃತದೇಹವನ್ನು ಬ್ಯಾಂಕ್​ಗೆ ತಂದು ಸಹಿಹಾಕಲು ಯತ್ನಿಸಿದ ಲೇಡಿ

Share :

Published April 20, 2024 at 8:05am

    ಚಿಕ್ಕಪನ ಮೃತದೇಹವನ್ನು ವ್ಹೀಲ್​ಚೇರ್​ನಲ್ಲಿ ಆಸ್ಪತ್ರೆಗೆ ತಂದ ಮಹಿಳೆ

    ಜ್ವರವೆಂದು ನಂಬಿಸಿ ಸಹಿ ಹಾಕಲು ಯತ್ನಿಸಿದ ಖತರ್ನಾಕ್​ ಮಹಿಳೆ

    ಸಾಲ ಪಡೆಯಲು ಮಹಿಳೆ ಮಾಡಿದ ಐಡಿಯಾ ಕಂಡು ಬೆಚ್ಚಿಬಿದ್ದ ಬ್ಯಾಂಕ್​ ಸಿಬ್ಬಂದಿ

ಮಹಿಳೆಯೊಬ್ಬಳು ಸಾಲ ಪಡೆಯಲು ಮೃತದೇಹವನ್ನ ಬ್ಯಾಂಕಿಗೆ ಕೊಂಡೊಯ್ದಿದ್ದಾಳೆ. ಈ ವಿಚಿತ್ರ ಘಟನೆ ಬ್ರೆಜಿಲ್​ನ ರಿಯೊ ಡಿ ಜನೈರೊದಲ್ಲಿ ನಡೆದಿದೆ.

ಮಹಿಳೆಯೊಬ್ಬಳು ಮೃತ ಚಿಕ್ಕಪ್ಪನ ಹೆಸರಿನಲ್ಲಿ ಬ್ಯಾಂಕ್ ಸಾಲ ಪಡೆಯಲು ಮುಂದಾಗಿದ್ದಾಳೆ. ಇದಕ್ಕಾಗಿ ಆಕೆ ಯಾರಿಗೂ ಅನುಮಾನ ಬಾರದಂತೆ ತನ್ನ ಚಿಕ್ಕಪ್ಪನ ಮೃತದೇಹವನ್ನು ವ್ಹೀಲ್ ಚೇರ್ ಮೇಲೆ ಕೂರಿಸಿ ಬ್ಯಾಂಕಿಗೆ ಕೊಂಡೊಯ್ದಿದ್ದಾಳೆ.

ನನ್ನ ಚಿಕ್ಕಪ್ಪನಿಗೆ ತೀವ್ರ ಜ್ವರ ಇದೆ, ಅವರಿಗೆ ಮಾತನಾಡಲು ಕಷ್ಟವಾಗುತ್ತಿದೆ ಎಂದು ಬ್ಯಾಂಕ್ ಸಿಬ್ಬಂದಿಗೆ ಹೇಳಿದ್ದಾಳೆ. ಸಾಲ ಪತ್ರಕ್ಕೆ ಸಹಿ ಹಾಕಿಸಲು ಯತ್ನಿಸಿದಾಗ ಬ್ಯಾಂಕ್ ಸಿಬ್ಬಂದಿಗೆ ಅನುಮಾನ ಮೂಡಿದೆ. ಕೂಡಲೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 50 ಮಂದಿ ಸಂಚರಿಸುತ್ತಿದ್ದ ದೋಣಿ ಪಲ್ಟಿ; ಇಬ್ಬರು ಸಾವು, 7 ಮಂದಿ ನಾಪತ್ತೆ 

ವಂಚನೆಯ ಆರೋಪದ ಮೇಲೆ ಆ ಮಹಿಳೆಯನ್ನು ಪೋಲಿಸರು ಬಂಧಿಸಿದ್ದಾರೆ. ಮಹಿಳೆ ಮೃತ ಚಿಕ್ಕಪ್ಪನ ಮೃತದೇಹ ತಂದಿರೋದನ್ನು ಬ್ಯಾಂಕ್​ ಸಿಬ್ಬಂದಿ ತಮ್ಮ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಸದ್ಯ ದೃಶ್ಯ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸತ್ತ ಚಿಕ್ಕಪ್ಪನ ಹೆಸರಿನಲ್ಲಿ ಸಾಲ ಪಡೆಯೋ​ ಐಡಿಯಾ.. ಮೃತದೇಹವನ್ನು ಬ್ಯಾಂಕ್​ಗೆ ತಂದು ಸಹಿಹಾಕಲು ಯತ್ನಿಸಿದ ಲೇಡಿ

https://newsfirstlive.com/wp-content/uploads/2024/04/Brazil-deadbody.jpg

Load More