21 ಕೋಟಿ ಲಾಟರಿ ಗೆದ್ದ ಮಹಿಳೆಗೆ ಬಿಗ್ ಶಾಕ್‌.. ಟಿಕೆಟ್‌ ದಾನ ಮಾಡಿದ ಮೇಲೆ ಏನಾಯ್ತು ಗೊತ್ತಾ?

author-image
admin
Updated On
21 ಕೋಟಿ ಲಾಟರಿ ಗೆದ್ದ ಮಹಿಳೆಗೆ ಬಿಗ್ ಶಾಕ್‌.. ಟಿಕೆಟ್‌ ದಾನ ಮಾಡಿದ ಮೇಲೆ ಏನಾಯ್ತು ಗೊತ್ತಾ?
Advertisment
  • ಒಟ್ಟು 5 ಲಾಟರಿ ಟಿಕೆಟ್‌ಗಳನ್ನ ಖರೀದಿ ಮಾಡಿದ್ದ ನತದೃಷ್ಟ ಮಹಿಳೆ
  • ಅದರಲ್ಲಿ ಒಂದು ಲಾಟರಿ ಟಿಕೆಟ್‌ಗೆ 21 ಕೋಟಿ ರೂಪಾಯಿ ಬಹುಮಾನ
  • ದಾನ ಮಾಡಿರುವ ಜಾಕೆಟ್‌ಗೆ ಹುಡುಕಾಟ ನಡೆಸುತ್ತಿದ್ದಾಗ ರೋಚಕ ಟ್ವಿಸ್ಟ್!

ಇದೊಂದು ಅಪರೂಪದಲ್ಲೇ ಅಪರೂಪದ ಸ್ಟೋರಿ. ಪಿಕ್ಚರ್ ಅಭಿ ಬಾಕಿ ಹೈ ಅನ್ನೋ ಹಾಗೆ ಈ ಲಾಟರಿ ಕಥೆ ಇನ್ನೂ ಮುಗಿದಿಲ್ಲ. 21 ಕೋಟಿ ರೂಪಾಯಿ ಲಾಟರಿ ಗೆದ್ದ ಪೆನ್ಸಿಲ್ವೇನಿಯಾದ ಮಹಿಳೆ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಮಿಲ್ಡ್ರೆಡ್ ಸಿಮೋನೆರಿಲುಟ್ ಎಂಬ ಪೆನ್ಸಿಲ್ವೇನಿಯಾದ 76 ವರ್ಷದ ಈ ಮಹಿಳೆ ಒಟ್ಟು 5 ಲಾಟರಿ ಟಿಕೆಟ್‌ಗಳನ್ನ ಖರೀದಿ ಮಾಡಿದ್ದರು. ಅದರಲ್ಲಿ ಒಂದು ಲಾಟರಿ ಟಿಕೆಟ್‌ಗೆ 21 ಕೋಟಿ ರೂಪಾಯಿ ಬಂಪರ್ ಹೊಡೆದಿದೆ. 21 ಕೋಟಿ ಗೆದ್ದ ಮಹಿಳೆಗೆ ಖುಷಿಯಾದ್ರು ಒಂದೇ ಕ್ಷಣಕ್ಕೆ ಕಂಗಾಲಾಗಿದ್ದಾರೆ.

publive-image

ಈ ನತದೃಷ್ಟ ಮಹಿಳೆ ಖರೀದಿಸಿದ್ದ 5ರಲ್ಲಿ ಒಂದು ಟಿಕೆಟ್‌ಗೆ 21 ಕೋಟಿ ಲಾಟರಿ ಹೊಡೆದಿದೆ. ಆದರೆ ಆ ಲಾಟರಿ ಟಿಕೆಟ್ ಇಟ್ಟಿದ್ದ ಜಾಕೆಟ್ ಅನ್ನ ಇವರು ದಾನ ಮಾಡಿದ್ದಾರೆ. ಬಡವರಿಗಾಗಿ ಸೇವೆ ಸಲ್ಲಿಸುವ ಒಂದು NGOಗೆ ಮಿಲ್ಡ್ರೆಡ್ ಸಿಮೋನೆರಿಲುಟ್ ತನ್ನ ಜಾಕೇಟ್ ದಾನ ಮಾಡಿದ್ದರು. ಆ ಜಾಕೆಟ್ ಜೇಬಿನಲ್ಲೇ 5 ಲಾಟರಿ ಟಿಕೆಟ್ ಇಟ್ಟಿದ್ದರಂತೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಇದನ್ನೂ ಓದಿ: ಅತ್ಯಂತ ದುಬಾರಿ ಮದುವೆಗೆ ಸಾಕ್ಷಿಯಾಗಲಿದೆ ಜಗತ್ತು! ಈ ವಿವಾಹಕ್ಕೆ ಖರ್ಚಾಗಲಿರುವ ಹಣ ಎಷ್ಟು ಗೊತ್ತಾ? 

ಲಾಟರಿ ಟಿಕೆಟ್‌ಗಳನ್ನ ಜಾಕೆಟ್‌ ಜೇಬಿನಲ್ಲಿಟ್ಟಿದ್ದು ನೆನಪಾದ ಮೇಲೆ ಈ ಮಹಿಳೆ ಆ NGO ಬಳಿ ಹೋಗಿದ್ದಾರೆ. NGO ನವರು ಆ ಜಾಕೆಟ್‌ ಅನ್ನು ಯಾರೋ ಬಡ ಜನರಿಗೆ ಅದನ್ನ ನೀಡಿದ್ದೇವೆ ಎಂದಿದ್ದಾರೆ. ಆದರೆ ಆ ಜಾಕೆಟ್ ಯಾರು ತೆಗೆದುಕೊಂಡು ಹೋಗಿದ್ದಾರೆ ಅಂತ ಯಾರ ಬಳಿಯೂ ಮಾಹಿತಿ ಇಲ್ಲ. ಸದ್ಯ ಜಾಕೆಟ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ.

publive-image

ಕೊನೆಗೆ ಈ ಮಹಿಳೆ ಲಾಟರಿ ಸಂಸ್ಥೆಯ ಬಳಿ ಹೋಗಿ ನಡೆದ ವಿಚಾರವನ್ನೆಲ್ಲಾ ಹೇಳಿದ್ದಾರೆ. ಲಾಟರಿ ಸಂಸ್ಥೆ ಮಹಿಳೆಗೆ ಈಗ ಲಾಟರಿ ಟಿಕೆಟ್ ನೀಡಿ ಹಣ ಪಡೆಯಲು ಮತ್ತೊಂದು ಅವಕಾಶ ನೀಡಿದ್ದಾರೆ. ಮೇ 8ರವರ ಒಳಗೆ ಲಾಟರಿ ಟಿಕೆಟ್ ಕೊಟ್ಟರೆ 21 ಕೋಟಿ ರೂಪಾಯಿ ಈ ಮಹಿಳೆಯ ಕೈ ಸೇರಲಿದೆ. ಕಣ್ಣೀರಿಡುತ್ತಿರುವ ಈ ಮಹಿಳೆ ದಾನ ಮಾಡಿರೋ ಆ ಜಾಕೆಟ್‌ ಯಾರ ಬಳಿ ಇದೆ. ಅದು ಮತ್ತೆ ಅವರ ಕೈ ಸೇರುತ್ತಾ ಅನ್ನೋದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment