/newsfirstlive-kannada/media/post_attachments/wp-content/uploads/2024/09/Bangalore-Wife-Death-1.jpg)
ಬೆಂಗಳೂರು: ಇವತ್ತು ಗಣೇಶನ ಹಬ್ಬ.. ಎಲ್ಲರ ಮನೆಯಲ್ಲೂ ಗೃಹಿಣಿಯರು ಪೂಜೆ ಮಾಡಿ ದೇವಸ್ಥಾನಕ್ಕೆ ಹೋಗ್ತಿದ್ರೆ, ಅದೊಂದು ಮನೆಯಲ್ಲಿ ಮಾತ್ರ ಸೂತಕ ಆವರಿಸಿತ್ತು. ಗಂಡನೇ ದೇವರು ಅಂತ ಮನೆಗೆ ಕಾಲಿಟ್ಟವಳು ಹೊತ್ತಲ್ಲದ ಹೊತ್ತಲ್ಲಿ ಬಾತ್​ರೂಂನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ಇದನ್ನೂ ಓದಿ:ದರ್ಶನ್ ರೀತಿ ಮದುವೆ ಆದ್ರೆ ತಪ್ಪೇನು? ಗಂಡನ ಡಿಮ್ಯಾಂಡ್‌ಗೆ ಹೆಂಡತಿ ಸಾವಿಗೆ ಶರಣು; ಆಗಿದ್ದೇನು?
ಅನುಷಾ.. ಕಣ್ಣಲ್ಲಿ ಭವಿಷ್ಯದ ಹೊಂಗನಸು. ಐದು ವರ್ಷದ ಹಿಂದೆ ಈಕೆಯನ್ನ ಬೆಂಗಳೂರಿನ ಹುಳಿಮಾವಿನ ಈ ಶ್ರೀಹರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಪ್ರೀತಿಗೆ ಸಾಕ್ಷಿ ಎಂಬಂತೆ ಈ ದಂಪತಿಗೆ ಎರಡು ವರ್ಷದ ಮಗು ಇದೆ. ಆದ್ರೀಗ ಇದೇ ಅನುಷಾ ಬಾತ್​ರೂಂನಲ್ಲಿ ಬೆಂದು ಹೋಗಿದ್ದಾಳೆ.
/newsfirstlive-kannada/media/post_attachments/wp-content/uploads/2024/09/Bangalore-Wife-Death.jpg)
ಗಂಡನ ಪರಸಂಗದ ಆಟಕ್ಕೆ ಅಮಾಯಕ ಪತ್ನಿ ಬಲಿ?
ನಗುನಗುತ್ತಲೇ ಗಂಡನ ಕೈ ಹಿಡಿದು ಬಂದಿದ್ದ ಇದೇ ಅನುಷಾ ಇದೇ ಗಂಡನಿಂದಲೇ ಚಿತ್ರಹಿಂಸೆ ಪಟ್ಟು ಶವವಾಗಿದ್ದಾಳೆ ಅನ್ನೋ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಈ ಕರಿಮಣಿ ಮಾಲೀಕ ಮಾಡಿದ್ದ ಮಹಾ ಮೋಸವಾದ್ರು ಏನು ಅನ್ನೋದೇ ಭಯಾನಕ.
ಇದನ್ನೂ ಓದಿ: ಬೆಂಗಳೂರಲ್ಲಿ ಘೋರ ದುರಂತ.. ವಾಟ್ಸ್‌ಆ್ಯಪ್ ವಿಡಿಯೋ ಕಾಲ್‌ನಲ್ಲೇ ಬೆಂಕಿ ಹಚ್ಚಿಕೊಂಡ ಮಹಿಳೆ; ಕಾರಣವೇನು?
ಮದುವೆಯಾದ ಆರಂಭದಲ್ಲಿ ಚೆನ್ನಾಗಿಯೇ ಇದ್ದ ಶ್ರೀಹರಿ ಬರ್ತಾ ಬರ್ತಾ ವರಸೆ ಬದಲಿಸಿದ್ದ. ಕಳೆದ ಮೂರು ತಿಂಗಳಿನಿಂದ ಆಕೆಗೆ ಡಿವೋರ್ಸ್​ ಕೊಡುವಂತೆ ಟಾರ್ಚರ್ ಕೊಟ್ಟಿದ್ನಂತೆ. ಪದೇ ಪದೇ ನನಗೆ ಬೇರೆ ಸಂಬಂಧ ಇದೆ. ನನ್ನ ಬಿಟ್ಬಿಡು ಅಂತಾ ಪೀಡಿಸ್ತಿದ್ನಂತೆ. ಮಗುವಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದ ಅನುಷಾಳ ತಾಳ್ಮೆಯ ಕಟ್ಟೆ ಒಡೆದಿತ್ತು. ಹೀಗಾಗಿ, ಗಂಡನಿಗೆ ವಾಟ್ಸಾಪ್ ಕಾಲ್ ಮಾಡಿ ಬಾತ್​ ರೂಂನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು.
/newsfirstlive-kannada/media/post_attachments/wp-content/uploads/2024/09/Bangalore-husband-and-Wife-1.jpg)
ಅನುಷಾಳ ಪೋಷಕರು ಮನೆಗೆ ಬಂದು ನೋಡುವಷ್ಟ್ರಲ್ಲಿ ಅನುಷಾ ಅರ್ಧ ಬೆಂದು ಹೋಗಿದ್ದಳು. ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಮಗಳ ಸಾವಿಗೆ ಅಳಿಯನೇ ಕಾರಣ. ಅನುಷಾ ತಂದೆ ಹೇಮಂತ್ ಅವರು ಶ್ರೀಹರಿ ನಟ ದರ್ಶನ್ ಎರಡನೇ ಮದುವೆ ಆಗಿದ್ದಾನೆ. ಅವರು ಸಂತೋಷವಾಗಿಲ್ವಾ. ನಾನು ಎರಡನೇ ಮದುವೆ ಆದ್ರೆ ತಪ್ಪೇನು ಎಂದು ಕೇಳುತ್ತಿದ್ದನಂತೆ ಎಂದು ಹೇಳಿದ್ದಾರೆ. ಅನುಷಾ ಬೆಂಕಿ ಹಚ್ಚಿಕೊಳ್ಳೋದು ನೋಡಿದ್ರೂ ಶ್ರೀಹರಿ ಸುಮ್ಮನಾಗಿದ್ದ. ಅನುಷಾಳ ಕಾಪಾಡಬಹುದಿತ್ತು ಆದ್ರೂ ಕಾಪಾಡಿಲ್ಲ. ಸಾಯಲಿ ಅಂತಾನೇ ಸುಮ್ಮನೆ ಇದ್ದಾನೆ. ಮದುವೆ ಆದಾಗಿನಿಂದಲೂ ಚಿತ್ರಹಿಂಸೆ ನೀಡ್ತಾನೆ ಇದ್ದ ಎಂದು ಪೋಷಕರು ಆರೋಪಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/09/Bangalore-Wife-Death-Case.jpg)
ಅನುಷಾ ಮೃತದೇಹವನ್ನ ಅಂತ್ಯಕ್ರಿಯೆಗಾಗಿ ಬನಶಂಕರಿ ವಿದ್ಯುತ್ ಚಿತಾಗಾರಕ್ಕೆ ಒಯ್ದಾಗ ಶ್ರೀಹರಿ ಹಾಗೂ ಅನುಷಾ ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಸುಳ್ಳು ಆರೋಪ ಮಾಡ್ತಿದ್ದೀರಾ ಅಂತ ಶ್ರೀಹರಿ ಮನೆಯವ್ರು ವಾಗ್ವಾದಕ್ಕಿಳಿದಿದ್ರಿಂದ ಹೈಡ್ರಾಮಾ ಸೃಷ್ಟಿಯಾಗಿತ್ತು.
/newsfirstlive-kannada/media/post_attachments/wp-content/uploads/2024/09/Bangalore-lady-Death.jpg)
ಇದನ್ನೂ ಓದಿ: ಪ್ರೀತಿಸಿ, ಹುಡುಗಿ ಜೊತೆ ಸುತ್ತಾಡಿ.. ಪ್ರೇಮಿಗಳಿಗಾಗಿ ಎರಡು ದಿನ ಸಂಬಳ ಸಹಿತ ರಜೆ ಘೋಷಿಸಿದ ಕಂಪನಿ
ಮ್ಯಾರೇಜ್ ಇಸ್ ಮೇಡ್​ ಇನ್ ಹೆವೆನ್​ ಅಂತಾರೆ. ಆದರೆ ಕೊರಳಿಗೆ ತಾಳಿ ಕಟ್ಟಿದ್ದ ಗಂಡನ ಮೋಸದಾಟ ಸಹಿಸದ ಅನುಷಾ ಜೀವಂತ ಬೆಂದು ಪ್ರಾಣ ಕಳೆದುಕೊಂಡಿದ್ದು ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us