/newsfirstlive-kannada/media/post_attachments/wp-content/uploads/2025/03/DHLI-WOMEN-1.jpg)
ದೆಹಲಿಯ ವಿವೇಕ ವಿಹಾರದ ಫ್ಲ್ಯಾಟ್ವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಫ್ಲ್ಯಾಟ್ ಮಾಲೀಕನ ಮೇಲೆ ಅನುಮಾನಗೊಂಡ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಮೃತಪಟ್ಟ ಮಹಿಳೆಯ ಆ ಮನೆಯಲ್ಲಿ ತನ್ನ ಗಂಡನೊಂದಿಗೆ ವಾಸವಾಗಿದ್ದಳು. ಬ್ಲ್ಯಾಂಕೆಟ್ನಲ್ಲಿ ಸುತ್ತಿ, ಬ್ಯಾಗ್ನಲ್ಲಿ ಮೃತದೇಹವನ್ನು ಅದರಲ್ಲಿ ತುರುಕಿ ಬೆಡ್ನ ಕೆಳಗಡೆ ಇಡಲಾಗಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಸುತ್ತಮುತ್ತಲಿನವರಿಗೆ ದುರ್ವಾಸನೆ ಬಂದ ಬಳಿಕ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಆಗ ಪೊಲೀಸರು ಬಂದು ತಪಾಸಣೆ ನಡೆಸಿದಾಗ ಈ ಒಂದು ಘೋರ ದುರಂತ ಬೆಳಕಿಗೆ ಬಂದಿದೆ. ಪೊಲೀಸರು ಫ್ಲ್ಯಾಟ್ಗೆ ಬಂದಾಗ ಅದು ಹೊರಗಿನಿಂದ ಲಾಕ್ ಆಗಿತ್ತು. ಮನೆಯೆಲ್ಲಾ ಹುಡುಕಿದಾಗ ಪೊಲೀಸರಿಗೆ ಹಿಂಬದಿಯ ಬಾಗಿಲಿಗೆ ರಕ್ತ ಮೆತ್ತಿಕೊಂಡಿದ್ದು ಕಂಡು ಬಂದಿದೆ.
ಇದನ್ನೂ ಓದಿ:ಎಲಾನ್ ಮಸ್ಕ್ ಹೆಸರು ಹೇಳಿ ನಿವೃತ್ತ ಪೈಲೆಟ್ಗೆ ವಂಚನೆ.. ದೋಚಿದ್ದು ಎಷ್ಟು ಲಕ್ಷ ಗೊತ್ತಾ?
ಪೊಲೀಸರು ಅನುಮಾನ ವ್ಯಕ್ತಪಡಿಸಿದ ಪ್ರಕಾರ ಈ ಒಂದು ಕೃತ್ಯದಲ್ಲಿ ಕನಿಷ್ಠ ಮೂರು ಜನವಾದರು ಭಾಗಿಯಾಗಿರುವ ಸಾಧ್ಯತೆಯಿದೆಯಂತೆ. ಸದ್ಯ ಮನೆ ಮಾಲೀಕನನ್ನು ಬಂಧಿಸಿರು ಪೊಲೀಸರು ಮುಂದಿನ ತನಿಖೆಗೆ ಇಳಿದಿದ್ದಾರೆ. ಇದರ ಹಿಂದೆ ಯಾರಿದ್ದಾರೆ. ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಸಂಪೂರ್ಣ ತನಿಖೆಯ ನಂತರವಷ್ಟೇ ಬೆಳಕಿಗೆ ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ