Advertisment

ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡೋ ಆಸೆಯೇ? SSLC ಮಾಡಿದ್ದೀರಾ? ಹಾಗಿದ್ರೆ ಬೇಗ ಅಪ್ಲೈ ಮಾಡಿ

author-image
AS Harshith
Updated On
ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡೋ ಆಸೆಯೇ? SSLC ಮಾಡಿದ್ದೀರಾ? ಹಾಗಿದ್ರೆ ಬೇಗ ಅಪ್ಲೈ ಮಾಡಿ
Advertisment
  • ರಾಜ್ಯ ಸರ್ಕಾರದಡಿ ಕೆಲಸ ಮಾಡುವ ಅವಕಾಶ
  • 196 ಹುದ್ದೆಗಳು ಖಾಲಿ.. ಬೇಗ ಅರ್ಜಿ ಸಲ್ಲಿಸಿ
  • ಅರ್ಹತೆ? ಕೊನೆಯ ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿ

ಯುವತಿಯರೇ ರಾಜ್ಯ ಸರ್ಕಾರದಡಿ ಕೆಲಸ ಹುಡುಕುತ್ತಿದ್ದೀರಾ? ಹಾಗಿದ್ರೆ ಅಂತವರಿಗಾಗಿ ಸಿಹಿ ಸುದ್ದಿ ಇಲ್ಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗದಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

Advertisment

ಅಂದಹಾಗೆಯೇ, 196 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಆದರೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಹತೆ ಏನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಈ ಎಲ್ಲ ಮಾಹಿತಿ ಇಲ್ಲಿದೆ ಓದಿ.

ಹುದ್ದೆ ಬಗ್ಗೆ ಮಾಹಿತಿ:

ಮುಂಡರಗಿ- 29
ನರಗುಂದ- 17
ಗದಗ- 45
ರೋಣ- 35
ಶಿರಹಟ್ಟಿ- 70

ಖಾಲಿ ಇರುವ ಹುದ್ದೆಗಳು:

ಅಂಗನವಾಡಿ ಕಾರ್ಯಕರ್ತೆ- 46
ಅಂಗನವಾಡಿ ಸಹಾಯಕಿ- 150

ವಿದ್ಯಾರ್ಹತೆ:

ಅಂಗನವಾಡಿ ಕಾರ್ಯಕರ್ತೆ- 10ನೇ ತರಗತಿ, ಪಿಯುಸಿ, ಡಿಪ್ಲೊಮಾ ಮಾಡಿರಬೇಕು
ಅಂಗನವಾಡಿ ಸಹಾಯಕಿ- ಪಿಯುಸಿ ಉತ್ತೀರ್ಣರಾಗಿರಬೇಕು

ಇದನ್ನೂ ಓದಿ: ಕರ್ನಾಟಕ ಕಂದಾಯ ಇಲಾಖೆಯಲ್ಲಿ ಉದ್ಯೋಗವಕಾಶ.. ಅರ್ಜಿ ಸಲ್ಲಿಸಲು 3 ದಿನ ಬಾಕಿ

Advertisment

ವಯೋಮಿತಿ:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ ವಯಸ್ಸು ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:

PWD ಅಭ್ಯರ್ಥಿಗಳು -10 ವರ್ಷ

ಅರ್ಜಿ ಶುಲ್ಕ:

ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಇದನ್ನೂ ಓದಿ: BEL ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳು.. ಈ ಪದವಿ ಹೊಂದಿದವರಿಗೆ ನೇರ ಸಂದರ್ಶನದಿಂದ ಆಯ್ಕೆ!

ಆಯ್ಕೆ ಪ್ರಕ್ರಿಯೆ ಹೇಗೆ?

ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಮೆರಿಟ್‌ ಲಿಸ್ಟ್‌ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Advertisment

ಅರ್ಜಿ ಸಲ್ಲಿಸುವುದು ಹೇಗೆ?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಹೊರಡಿಸಿರುವ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಆನ್​ಲೈನ್​ ಮೊರೆ ಹೋಗಬೇಕು. ಅದಕ್ಕಾಗಿ ಈ ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ದಿನಾಂಕಗಳು:

ಮುಂಡರಗಿ- ಆಗಸ್ಟ್‌ 20, 2024- ಸೆಪ್ಟೆಂಬರ್‌ 19, 2024
ನರಗುಂದ- ಆಗಸ್ಟ್‌ 20, 2024- ಸೆಪ್ಟೆಂಬರ್‌ 19, 2024
ಗದಗ- ಆಗಸ್ಟ್‌ 17, 2024- ಸೆಪ್ಟೆಂಬರ್‌ 17, 2024
ರೋಣ- ಆಗಸ್ಟ್‌ 17, 2024- ಸೆಪ್ಟೆಂಬರ್‌ 17, 2024
ಶಿರಹಟ್ಟಿ- ಆಗಸ್ಟ್‌ 17, 2024- ಸೆಪ್ಟೆಂಬರ್‌ 17, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment