ದೇವರ ಹೆಸರಲ್ಲಿ ಹಣಕ್ಕಾಗಿ ಡಿಮ್ಯಾಂಡ್.. ಕೊಡದಿದ್ದಕ್ಕೆ ದಾರಿಹೋಕನಿಗೆ ಚಾಟಿ ಏಟು..?

author-image
Ganesh
Updated On
ದೇವರ ಹೆಸರಲ್ಲಿ ಹಣಕ್ಕಾಗಿ ಡಿಮ್ಯಾಂಡ್.. ಕೊಡದಿದ್ದಕ್ಕೆ ದಾರಿಹೋಕನಿಗೆ ಚಾಟಿ ಏಟು..?
Advertisment
  • ಬೆಂಗಳೂರಲ್ಲಿ ನಡೆಯಿತು ಅಮಾನವೀಯ ಕೃತ್ಯ
  • ಮಹಿಳೆ, ಓರ್ವ ವ್ಯಕ್ತಿಯಿಂದ ಏಕಾಏಕಿ ದಾಳಿ
  • ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಬೆಂಗಳೂರು: ದೇವರ ಹೆಸರಿನಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಿ ಕೊಡದಿದ್ದಕ್ಕೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಮಾರತ್ ಹಳ್ಳಿಯ ಬಸ್ ನಿಲ್ದಾಣ ಬಳಿ ಘಟನೆ ನಡೆದಿದೆ.

ವಿಡಿಯೋ ವೈರಲ್..!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡ್ತಿರೋದನ್ನು ನೋಡಬಹುದಾಗಿದೆ. ಮಹಿಳೆಯೋರ್ವರು ಕಲ್ಲನ್ನು ಎತ್ತಿ ಹಲ್ಲೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಅಲ್ಲಿಗೆ ಬರುವ ಮತ್ತೊಬ್ಬ ವ್ಯಕ್ತಿ ಚಾಟಿ ಹಿಡಿದು ಹಲ್ಲೆ ಮಾಡಿದ್ದಾನೆ.

ದೇವರ ಮೂರ್ತಿ, ಚಾಟಿ ಹಿಡಿದು ಹಣ ಕೇಳುವ ಜನರ ವಿರುದ್ಧ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿ ಬಳಿ ಹಣ ಕೇಳಿದ್ರು. ಕೊಡದಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡುವ ವಿಡಿಯೋ ವೈರಲ್ ಆಗಿದೆ. ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಇದನ್ನೂ ಓದಿ: ವಿಮಾನಗಳ ಕಿಟಕಿಯಲ್ಲಿ ವಿಡಿಯೋ ರೆಕಾರ್ಡ್ ಮಾಡದಂತೆ DGCA ಆದೇಶ; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment