/newsfirstlive-kannada/media/post_attachments/wp-content/uploads/2025/06/eyebrow-shape.jpg)
ಹೆಣ್ಣು ಮಕ್ಕಳಿಗೆ ಸೌಂದರ್ಯ ಅನ್ನೋದು ತುಂಬಾನೇ ಮುಖ್ಯ. ಅದರಲ್ಲೂ ಮಹಿಳೆಯರ ಅಂದವನ್ನು ಮತ್ತಷ್ಟೂ ಹೆಚ್ಚಿಸೋದು ಐಬ್ರೋ. ಹೌದು, ಹುಡುಗಿಯರು ಎಷ್ಟು ಚಂದವಾಗಿ ರೆಡಿಯಾದ್ರೂ ಮೊದಲು ಎಲ್ಲರ ಕಣ್ಣಿಗೆ ಬಿಳುವುದೇ ಅವರ ಐಬ್ರೋ. ಈ ಐಬ್ರೋ ಶೇಪ್ ಮಾಡಿದ್ರೆ ಮುಖ ಎಷ್ಟೊಂದು ಅಂದವಾಗಿ ಕಾಣಿಸುತ್ತೆ. ಪ್ರತಿ ತಿಂಗಳು ಮಹಿಳೆಯರು ಬ್ಯೂಟಿ ಪಾರ್ಲರ್‌ಗೆ ಹೋಗಿ ಐಬ್ರೋ ಶೇಪ್ ಮಾಡಿಸಿಕೊಂಡು ಬರುತ್ತಾರೆ. ಮಹಿಳೆಯರೇ ಆಗಲಿ ಅಥವಾ ಪುರುಷರೇ ಆಗಲಿ ಹುಬ್ಬು ಪ್ರತಿಯೊಬ್ಬರ ಅಂದವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಕಬಿನಿ ಡ್ಯಾಂ ಭರ್ತಿಗೆ 3 ಅಡಿ ಭಾಕಿ.. ಕೆಳಸೇತುವೆ ಮುಳುಗಡೆ, 20 ಗ್ರಾಮಗಳ ಸಂಪರ್ಕ ಕಡಿತ..! Photos
ಹುಬ್ಬು ಬೆಳೆಯುತ್ತಾ ಹೋದಂತೆ ಅದಕ್ಕೆ ಶೇಪ್ ನೀಡಿಲ್ಲವೆಂದಾದರೆ ಮುಖ ಚಂದವಾಗಿ ಕಾಣಿಸುತ್ತೆ. ಆದ್ರೆ ಇದೀಗ ವೈದ್ಯರಿಂದ ಅಚ್ಚರಿ ವಿಚಾರ ಬಹಿರಂಗವಾಗಿದೆ. ಮಹಿಳೆಯರು ಐಬ್ರೋ ಶೇಪ್ ಮಾಡಿಸಿಕೊಳ್ಳುವುದರಿಂದ ಹೆಪಟೈಟಿಸ್ ಬಿ ಸೋಂಕು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರೊಬ್ಬರು ಹೇಳಿದ್ದಾರೆ.
ಹೆಚ್ಚಿನ ಮಹಿಳೆಯರು, ಐಬ್ರೋ ಶೇಪ್, ಥ್ರೆಡ್ಡಿಂಗ್ ಅಥವಾ ಅನ್ವಾಂಟೆಡ್ ಹೇರ್ ತೆಗೆಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಹುಬ್ಬಿಗೆ ಆಕಾರ ಕೊಟ್ಟರೆ ಮುಖಕ್ಕೆ ಒಂದು ಕಳೆ. ಆದರೆ ಈ ಥ್ರೆಡಿಂಗ್ ಮಾಡಿಸಿಕೊಳ್ಳುವುದರಿಂದ ಹೆಪಟೈಟಿಸ್ ಬಿ ಸೋಂಕು ಕಾಣಿಸಿಕೊಳ್ಳುತ್ತದೆ ಅಂತ ಮುಂಬೈ ಮೂಲದ ವೈದ್ಯರು ಹೇಳಿದ್ದಾರೆ.
View this post on Instagram
ಇನ್ನೂ, ಹೆಪಟೈಟಿಸ್ ಬಿ ಒಂದು ಯಕೃತ್ತಿನ ಸೋಂಕು. ಇದು ಹೆಪಟೈಟಿಸ್ ಬಿ ವೈರಸ್ (HBV) ನಿಂದ ಉಂಟಾಗುತ್ತದೆ. ಇದು ತೀವ್ರ ಅಥವಾ ದೀರ್ಘಕಾಲದವರೆಗೆ ಇರಬಹುದು. ತೀವ್ರ ಸೋಂಕು ಸಾಮಾನ್ಯವಾಗಿ ಚಿಕಿತ್ಸೆ ಇಲ್ಲದೆ ಗುಣವಾಗುತ್ತದೆ. ಆದರೆ ದೀರ್ಘಕಾಲದ ಸೋಂಕು ಯಕೃತ್ತಿನ ಹಾನಿಗೆ ಕಾರಣವಾಗಬಹುದು. ಹೆಪಟೈಟಿಸ್ ಬಿ ಸೋಂಕು ರಕ್ತ ಮತ್ತು ಇತರ ದೇಹದ ದ್ರವಗಳ ಮೂಲಕ ಹರಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ