newsfirstkannada.com

ಬರೋಬ್ಬರಿ 270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್‌.. ಈ ಕಿಲಾಡಿ ಲೇಡಿ ಸ್ಕೂಟಿ ಮೇಲಿರೋ ದಂಡ ಎಷ್ಟು ಗೊತ್ತಾ?

Share :

Published April 7, 2024 at 8:39pm

    ಈ ಲೇಡಿಯನ್ನು ಪತ್ತೆ ಹಚ್ಚೋದೇ ಬೆಂಗಳೂರು ಪೊಲೀಸರಿಗೆ ದೊಡ್ಡ ಸವಾಲು

    ಪೊಲೀಸರಿಂದ ತಪ್ಪಿಸಿಕೊಳ್ಳಲು ಕಿಲಾಡಿ ಲೇಡಿ ಮಾಡ್ತಿರೋ ಮಾಸ್ಟರ್ ಪ್ಲಾನ್ ಏನು?

    ಎಲ್ಲಿರುವೆ ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಕಾಡುತ್ತಿರೋ ರೂಪಸಿಯೇ!

ಬೆಂಗಳೂರು: ಆಕೆ ಕಿಲಾಡಿ ಲೇಡಿ. ರಸ್ತೆಗಳಿದ್ರೆ ಆ ನಾರಿ ಹೋಗಿದ್ದೇ ದಾರಿ. ಒನ್​ ವೇ ಅಂತ ನೋಡಲ್ಲ. ಹೆಲ್ಮೆಂಟ್ ಅಂತೂ ಹಾಕೋದೆ ಇಲ್ಲ. ಹೀಗೆ ತಾನೂ ಹೋಗಿದ್ದೆ ದಾರಿ ಎಂದು ಎಲ್ಲೆಂದರಲ್ಲಿ ಗಾಡಿ ನುಗ್ಗಿಸುತ್ತಿದ್ದ ಆ ಮಹಿಳೆಯ ವಾಹನದ ಮೇಲಿರುವ ದಂಡದ ಮೊತ್ತ ಕೇಳಿದ್ರೆ ನೀವು ಬೆಕ್ಕಸ ಬೆರಗಾಗ್ತೀರಿ. ಇಷ್ಟು ದಿನ ಹುಡುಗರಷ್ಟೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ತಾರೆ ಅನ್ನೋ ಸುದ್ದಿ ಕೇಳ್ತಿದ್ದೀರಿ. ಆದ್ರೆ ಇವತ್ತು ರೂಲ್ಸ್ ಬ್ರೇಕ್ ಮಾಡೋದ್ರಲ್ಲಿ ಹುಡುಗರನ್ನ ಮೀರಿಸೋ ಜಗತ್ ಕಿಲಾಡಿಯನ್ನ ಸಿಕ್ಕಿ ಬಿದ್ದಿದ್ದಾಳೆ. ಬೆಂಗಳೂರಿನ ಸಂದಿ ಗೊಂದಿಗಳಲ್ಲಿ ಸಿಕ್ಕ ಸಿಕ್ಕಂತೆ ನುಗ್ಗಿರೋ ಈ ಲೇಡಿಗಾಗಿ ಪೊಲಿಸರು ಹುಡುಕುದೇ ಇರೋ ಜಾಗ ಇಲ್ಲ. ಪತ್ತೆ ಮಾಡದೇ ಇರೋ ಏರಿಯಾನೇ ಇಲ್ಲ. ಹೀಗಾಗಿ ಬೆಂಗಳೂರು ಸಂಚಾರಿ ಪೊಲೀಸರು ಎಲ್ಲಿರುವೆ ರೂಲ್ಸ್ ಬ್ರೇಕ್ ಮಾಡೋ ರೂಪಸಿಯೇ ಅಂತಿದ್ದಾರೆ.

ಕಿಲಾಡಿ ಲೇಡಿಯಿಂದ 270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್‌‌

ಸದ್ಯ ಬೆಂಗಳೂರು ಪೊಲೀಸರು ಇದೇ ಹಾಡು ಹಾಡ್ತಿದ್ದಾರೆ. ರೂಲ್ಸ್ ಬ್ರೇಕ್ ಮಾಡಿ ಮಾಡಿ ಕಿಲಾಡಿ ಲೇಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾಳೆ. ಈ ಕಿಲಾಡಿ ಲೇಡಿ ಸಂಚಾರ ನಿಯಮವನ್ನ ಗಾಳಿಗೆ ತೋರಿದ ರೀತಿ ನೋಡಿ ಪೊಲೀಸರು ಕಂಗಲಾಗಿದ್ದಾರೆ. ಒಂದು ಬಾರಿಯಲ್ಲ, ಎರಡು ಬಾರಿಯಲ್ಲ, ಬರೋಬ್ಬರಿ 270 ಬಾರಿ. ಅಬ್ಬಾಬ್ಬ ರೂಲ್ಸ್ ಬ್ರೇಕ್ ಮಾಡೋದ್ರಲ್ಲಿ ಈ ಲೇಡಿ ರೆಕಾರ್ಡ್ ಬರೆದು ಬಿಟ್ಟಿದ್ದಾಳೆ. 270 ಬಾರಿ ನಿಯಮಗಳನ್ನ ಮುರಿದು ಈ ಲೇಡಿ ನಗರದ ಸಂಚಾರಿ ಪೊಲೀಸರ ನಿದ್ದೆಗೆಡಿಸಿದ್ದಾಳೆ. ಈಕೆಗಾಗಿ ಹುಡುಕಿ ಹುಡುಕಿ ಬೆಂಗಳೂರು ಸಂಚಾರಿ ಪೊಲೀಸರು ಹೈರಾಣಗಿರೋದಂತು ಸುಳ್ಳಲ್ಲ.

ಅಷಕ್ಕೂ ಈ ಲೇಡಿ ಹೆಸರು ವೀಣಾ ಅಂತ. ಈ ಲೇಡಿ ಮಾಡಿದ ಕೆಲಸಕ್ಕೆ ಪಾಪ ನಮ್ಮ ಬೆಂಗಳೂರು ಸಂಚಾರಿ ಪೊಲೀಸರು ಮಂಡೆ ಬಿಸಿ ಮಾಡ್ಕೊಂಡಿದ್ದಾರೆ. ರೂಲ್ಸ್ ಬ್ರೇಕ್ ಮಾಡೋದ್ರಲ್ಲಿ ಹುಡುಗರನ್ನೇ ಮೀರಿಸಿ ರೆಕಾರ್ಡ್ ಬರೆದಿದ್ದಾಳೆ. ಹೆಲ್ಮೆಟ್ ಇಲ್ಲದೆ ಸಂಚಾರ, ಡ್ರೈವಿಂಗ್​ನಲ್ಲಿಯೇ ಮೊಬೈಲ್​ ಬಳಕೆ, ತ್ರಿಬಲ್ ರೈಡಿಂಗ್ ಸೇರಿದಂತೆ ಬರೋಬ್ಬರಿ 270 ಬಾರಿ ಸಂಚಾರಿ ನಿಯಮವನ್ನ ಗಾಳಿಗೆ ತೂರಿದ್ದಾರೆ. ಇಷ್ಟಾದ್ರೂ ಕೂಡ ಇನ್ನೂ ನಗರದ ಟ್ರಾಫಿಕ್ ಪೊಲೀಸರ ಕೈಯಲ್ಲಿ ತಗ್ಲಾಕೊಂಡಿಲ್ಲ ಅನ್ನೋದೆ ಇಲ್ಲಿ ಇಂಟ್ರೆಸ್ಟಿಂಗ್.

₹25 ಸಾವಿರ‌ ಮೌಲ್ಯದ ಸ್ಕೂಟರ್​ ಮೆಲೆ ₹1,36,000 ದಂಡ

KA03 JE5705 ನಂಬರಿನ 25 ಸಾವಿರದಿಂದ 30 ಸಾವಿರ ಮೌಲ್ಯದ ಈ ಆ್ಯಕ್ಟೀವಾ ಮೇಲೆ ಬರೋಬ್ಬರಿ ಆ್ಯಕ್ಟಿವಾ ಮೇಲೆ 1 ಲಕ್ಷದ 36 ಸಾವಿರ ದಂಡ ಇದೆ. ಆದ್ರೂ ಕೂಡ ಈಕೆ ಆರಾಮಾಗಿಯೇ ಓಡಾಡ್ತಿದ್ದು ಇದೀಗ ಸುಧಾಮನಗರದಲ್ಲಿ ಕಾಣಿಸಿಕೊಂಡಿದ್ದರ ಬಗ್ಗೆ ವ್ಯಕ್ತಿಯೊಬ್ಬರು ಟ್ವಿಟ್ಟರ್​ನಲ್ಲಿ ನಗರದ ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್​ ಹಾಕಿದ್ದು, ದಂಡ ವಸೂಲಿ ಮಾಡುವಂತೆ ಮನವಿ ಮಾಡಿದ್ದಾರೆ.

ಈ ಲೇಡಿಯನ್ನ ಪತ್ತೆ ಹಚ್ಚೋದೆ ಪೊಲೀಸರಿಗೆ ಸವಾಲು!

ಇನ್ನು, ಈ ಕಿಲಾಡಿಯನ್ನ ಪತ್ತೆ ಹಚ್ಚೋದೆ ಪೊಲೀಸರಿಗೆ ದೊಡ್ಡ ಚಾಲೆಂಜ್ ಆಗಿದೆ. ನಿಮಗೆಲ್ಲಾ ಗೊತ್ತಿರುವಂತೆ ಎರಡು ತಿಂಗಳ ಹಿಂದೆ ನಗರದ ಸಂಚಾರಿ ಪೊಲೀಸರು ಟ್ರಾಫಿಕ್ ರೂಲ್ಸ್​ ಫಾಲೋ ಮಾಡದವರ ವಿರುದ್ಧ ಸಮರ ಸಾರಿದ್ರು. 50 ಸಾವಿರಕ್ಕಿಂತ ಹೆಚ್ಚು ದಂಡ ಇರುವ ವಾಹನಗಳನ್ನ ಸೀಜ್ ಮಾಡಿದ್ರು. ಅಲ್ಲದೆ ಅದರ ಮಾಲೀಕರಿಗೆ ನೋಟಿಸ್ ಕೊಟ್ಟು ದಂಡವನ್ನ ವಸೂಲಿ ಮಾಡುವ ಕೆಲಸ ಮಾಡಿದ್ರು. ಬಟ್ ಅಂತಹ ಸಂದರ್ಭದಲ್ಲೂ ಕೂಡ ಈಕೆಯನ್ನ ಪತ್ತೆ ಹಚ್ಚಲು ನಗರದ ಪೊಲೀಸರಿಗೆ ಸಾಧ್ಯವಾಗಿಲ್ಲ. ಸದ್ಯ ಈಕೆ ವಾಹನದ ಹಿಂಬದಿಯಲ್ಲಿರುವ ನಂಬರ್​ ಪ್ಲೇಟ್​​ ರಿಮೂವ್ ಮಾಡಿದ್ರಿಂದ, ಸಿಸಿ ಟಿವಿಗಳಲ್ಲೂ ಕೂಡ ವಾಹನದ ನಂಬರ್ ಸರಿಯಾಗಿ ಕ್ಯಾಪ್ಚರ್ ಆಗ್ತಿಲ್ಲ. ಇದರಿಂದ ಎಲ್ಲೆಂದರಲ್ಲಿ ಓಡಾಡ ಮಾಡ್ತಿದ್ದಾರೆಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡುವ ಮೂಲಕ ಆದಷ್ಟು ಬೇಗ ಈಕೆಯಿಂದ ಪೈನ್ ವಸೂಲಿ ಮಾಡುವಂತ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಎಲ್ಲಿರುವೆ ಟ್ರಾಫಿಕ್ ಪೊಲೀಸರನ್ನ ಕಾಡುತ್ತಿರೋ ರೂಪಸಿಯೇ.. ಈಕೆ ಸಂಚಾರಿ ನಿಯಮ ಬ್ರೇಕ್​ ಮಾಡಿದ್ದು ಕೇಳಿದ್ರೆ..

ಪೊಲೀಸರು ನಗರದಲ್ಲಿ ಟ್ರಾಫಿಕ್​ ಅನ್ನ ಕಂಟ್ರೋಲ್ ಮಾಡೋಕೆ ನಾನಾ ಅಸ್ತ್ರಗಳನ್ನ ಪ್ರಯೋಗ ಮಾಡ್ತಿದ್ದಾರೆ. ಪದೇ ಪದೇ ಸಂಚಾರ ನಿಯಮವನ್ನ ಬ್ರೇಕ್ ಮಾಡೋರನ್ನ ಟೆಕ್ನಾಲಜಿಯನ್ನ ಬಳಕೆ ಮಾಡ್ತಿದ್ದಾರೆ. ಎಐ ಕ್ಯಾಮಾರಾ, ಡ್ರೋಣ್ ಹಾರಾಟ ಸೇರಿದಂತೆ ಸಂಚಾರದ ಅನುಕೂಲಕ್ಕಾಗಿ ಎಲ್ಲ ಪ್ರಯೋಗ ಮಾಡ್ತಿದ್ದಾರೆ. ಆದ್ರೂ ಕೂಡ ವೀಣಾನಂತ ಕಿಲಾಡಿಗಳು ಟ್ರಾಫಿಕ್ ರೂಲ್ಸ್ ಪಾಲಿಸದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದಾರೆ. ಟ್ರಾಫಿಕ್ ಪೊಲೀಸರ ಕೈಯಲ್ಲಿ ಸಿಕ್ಕಿಬಿಳದೇ ಓಡಾಡ್ತಿದ್ದು, ಆದಷ್ಟು ಬೇಗ ಸಂಚಾರಿ ಪೊಲೀಸರು ಇಂತವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ. ಆಗಲೇ ನಿಯಮಗಳನ್ನ ಗಾಳಿಗೆ ತೂರಿ ಓಡಾಡೋರಿಗೆ ಬುದ್ಧಿ ಬರೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್‌.. ಈ ಕಿಲಾಡಿ ಲೇಡಿ ಸ್ಕೂಟಿ ಮೇಲಿರೋ ದಂಡ ಎಷ್ಟು ಗೊತ್ತಾ?

https://newsfirstlive.com/wp-content/uploads/2024/04/bng-rules-break.jpg

Load More