/newsfirstlive-kannada/media/post_attachments/wp-content/uploads/2025/03/WOMEN-BUILT-BUILDINGS.jpg)
ಭಾರತದಲ್ಲಿ ಅನೇಕ ಐತಿಹಾಸಿ ಕಟ್ಟಡಗಳು ನಮಗೆ ಕಾಣ ಸಿಗುತ್ತವೆ. ಸಾವಿರಾರು ವರ್ಷಗಳ ಪರಂಪರೆಯಲ್ಲಿ ಸಹಸ್ರ ಸಹಸ್ರ ರಾಜರು ಆಳಿ ಹೋಗಿದ್ದಾರೆ. ಯುದ್ಧ ಸ್ಮಾರಕವಾಗಿ, ಪ್ರೇಮ ಸ್ಮಾರಕವಾಗಿ ಅನೇಕ ರಾಜರು ಅನೇಕ ಐತಿಹಾಸಿಕ ಕಟ್ಟಡಗಳನ್ನು ಕಟ್ಟಿದ್ದಾರೆ. ಅವು ಈ ದೇಶದ ಇತಿಹಾಸದ, ಪರಂಪರೆಯ ಹಾಗೂ ಸಂಸ್ಕೃತಿ ಕಥೆಯ ಗುರುತಾಗಿ ಇಂದಿಗೂ ಕೂಡ ನಿಂತಿವೆ. ಕೇವಲ ರಾಜರು ಮಾತ್ರವಲ್ಲ, ರಾಣಿ, ಮಹರಾಣಿಯರು ಕೂಡ ಈ ರೀತಿ ಅನೇಕ ಐತಿಹಾಸಿಕ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಯಾರದೋ ನೆನಪಿಗೆ, ಇನ್ಯಾವುದೋ ಕಾರಣಕ್ಕೆ ಭವ್ಯವೆನಿಸುವ, ಭವ್ಯ ಇತಿಹಾಸ ಹೇಳುವ ಕಟ್ಟಡಗಳು ನಮ್ಮ ದೇಶದಲ್ಲಿ ಕಾಣಸಿಗುತ್ತವೆ.
1. ಹುಮಾಯು ಕಾ ಮುಕಾಬರಾ: ದೆಹಲಿಯಲ್ಲಿರುವ ಹುಮಾಯು ಕಾ ಮುಕಾಬರ್ನ್ನು ರಾಜ ಹುಮಾಯುನ ಪತ್ನಿ ಹಮಿದ್ ಬಾನೋ ಬೇಗಂ ನಿರ್ಮಿಸಿದ ಕಟ್ಟಡವಿದು. ಕೆಂಪು ಕಲ್ಲಿನಿಂದ ಕಟ್ಟಲಾಗಿರುವ ಈ ಕಟ್ಟಡವನ್ನು ಪಾರ್ಸಿ ಗುಂಬದ್ನ ಉಪಯೋಗ ಮಾಡಲಾಗಿದೆ ಇದರ ಭವ್ಯತೆಯನ್ನು ನೋಡಲು ಜನರು ದೂರ ದೂರದಿಂದ ಬರುತ್ತಾರೆ.
2. ರಾಣಿ ಕಿ ವಾವ್: ಗುಜರಾತ್ನ ಪಾಟನ್ನಲ್ಲಿರುವ ಈ ರಾಣಿ ಕಿ ವಾವ್ ಕಟ್ಟಡ ವಿಶ್ವದ ಅತ್ಯಂತ ಸುಂದರ ಕಟ್ಟಡಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಈ ಒಂದು ಸ್ಮಾರಕ ಕಟ್ಟಡವನ್ನು ರಾಣಿ ಉದಯಮತಿ ತನ್ನ ತಂದೆ ರಾಜಾ ಭೀಮದೇವನ ನೆನಪಿಗಾಗಿ ಕಟ್ಟಿಸಿದ್ದು. ಈ ಒಂದು ಜಾಗದಲ್ಲಿ ಅನೇಕ ಬಾಲಿವುಡ್ ಸಿನಿಮಾಗಳ ಶೂಟಿಂಗ್ಗಳು ನಡೆದಿವೆ.
3. ಹಂಪಿಯ ವಿರೂಪಾಕ್ಷ ಮಂದಿರ: ನಮ್ಮದೇ ರಾಜ್ಯದಲ್ಲಿರುವ ಹಂಪಿಯ ವಿರುಪಾಕ್ಷ ಮಂದಿರವನ್ನು ಕೂಡ ನಮ್ಮದೇ ಭಾರತದ ನಾರಿ ಸ್ಥಾಪಿಸಿದ್ದು. 740ನೇ ಇಸ್ವಿಯಲ್ಲಿ ರಾಣಿ ಲೋಕಮಹಾದೇವಿ ತನ್ನ ತಂದೆ ದ್ವೀತಿಯ ವಿಕ್ರಮಾದಿತ್ಯನು ಪಲ್ಲವರ ವಿರುದ್ಧ ವಿಜಯ ಸಾಧಿಸಿದನ ನೆನಪಿಗಾಗಿ ಹಂಪಿಯಲ್ಲಿ ಈ ವಿರೂಪಾಕ್ಷ ಮಂದಿರ ನಿರ್ಮಾಣವಾಯಿತು. ಈ ಮಂದಿರದ ಭವ್ಯತೆಯನ್ನು ನೋಡಲು ಈಗಲೂ ಕೂಡ ದೇಶ ವಿದೇಶಗಳಿಂದ ಜನರು ಹರಿದು ಬರುತ್ತಾರೆ. ವಿಜಯನಗರ ಸಾಮ್ರಾಜ್ಯದ ಗುರುತುಗಳೊಂದಿಗೆ ಈ ವಿರೂಪಾಕ್ಷ ದೇವಾಲಯಕ್ಕೂ ಭೇಟಿ ನೀಡುತ್ತಾರೆ.
4. ಮೋಹಿನಿಶ್ವರ ಶಿವಾಲಯ ಮಂದಿರ: ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಸ್ಥಾಪಿತಗೊಂಡಿರುವ ಈ ಶಿವನ ಮಂದಿರವನ್ನು ಕಾಶ್ಮೀರದ ರಾಜ ಹರಿಸಿಂಗ್ನ ಪತ್ನಿ ಮಹಾರಾಣಿ ಮೋಹಿನಿಬಾಯಿ 1915ರಲ್ಲಿ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಮಹಾರಾಣಿ ಮೋಹಿನಿಯವರ ಹೆಸರಿನಿಂದಾಗಿಯೇ ಈ ದೇವಾಲಯಕ್ಕೆ ಮೋಹಿನೀಶ್ವರ ದೇವಾಲಯ ಎಂಬ ಹೆಸರು ಬಂತು.
5. ಇತ್ಮದ್ ಉದ್ ದೌಲ್: ಈ ಹಿಂದೆ ನಾವು ನಿಮಗೆ ಬೇಬಿ ತಾಜ್ ಮಹಲ್ ಬಗ್ಗೆ ಹೇಳಿದ್ದೇವು. ಅದನ್ನು ಇತ್ಮದ್ ಉದ್ ದೌಲ್ ಎಂದೇ ಕರೆಯಲಾಗುತ್ತದೆ. ಇದು ಕೂಡ ಆಗ್ರಾದಲ್ಲಿಯೇ ಇದೆ. ಮೊಘಲರ ರಾಜ ಜಹಾಂಗೀರ್ನ ಪತ್ನಿ ನೂರಜಹಾನ್ ತನ್ನ ತಂದೆ ಮಿರ್ಜಾ ಗಿಯಾಸ್ ಬೇಗ್ ನೆನಪಿಗಾಗಿ ಈ ಒಂದು ಕಟ್ಟಡವನ್ನು ಕಟ್ಟಿದ್ದಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ