ವಾಶಿಂಗ್​​ ಮಷಿನ್​​ನಲ್ಲಿ ಆಲೂಗಡ್ಡೆ ತೊಳೆದ ಯುವತಿ.. ಬೆಚ್ಚಿಬಿದ್ದ ಜನ; ಆಮೇಲೇನಾಯ್ತು?

author-image
Veena Gangani
Updated On
ವಾಶಿಂಗ್​​ ಮಷಿನ್​​ನಲ್ಲಿ ಆಲೂಗಡ್ಡೆ ತೊಳೆದ ಯುವತಿ.. ಬೆಚ್ಚಿಬಿದ್ದ ಜನ; ಆಮೇಲೇನಾಯ್ತು?
Advertisment
  • ವೈರಲ್​ ಆದ ವಿಡಿಯೋ ನೋಡಿ ಗೊಂದಲಕ್ಕೀಡಾದ ನೆಟ್ಟಗರು
  • ಅಬ್ಬಾ.. ಕೊಳಕಾದ ಆಲೂಗಡ್ಡೆಯನ್ನು ಹೀಗೂ ಸ್ವಚ್ಚ ಮಾಡಬಹುದೇ!
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ವಿಡಿಯೋ​

ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಆ ವಿಡಿಯೋಗಳನ್ನು ನೋಡುವ ನೆಟ್ಟಿಗರು ಅಚ್ಚರಿ ಪಡುತ್ತಾ ಲೈಕ್ ಕೂಡ ಮಾಡುತ್ತಾರೆ. ಬಟ್ಟೆ ತೊಳೆಯಲು ವಾಷಿಂಗ್ ಮಷಿನ್​ ಯೂಸ್ ಮಾಡ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ವಾಷಿಂಗ್ ಮಷಿನ್​​ನಲ್ಲಿ ಬಟ್ಟೆ ಬದಲು ಆಲೂಗಡ್ಡೆ ಹಾಕಿದ್ದಾಳೆ.

publive-image

ಇದನ್ನೂ ಓದಿ: ಮಧ್ಯಮ ವರ್ಗದವರಿಗೆ ರಿಲೀಫ್.. ಹೊಸ ಆದಾಯ ತೆರಿಗೆ ನೀತಿಯಿಂದ ನಿಮಗೆ ಉಳಿತಾಯ ಎಷ್ಟು? ಹೇಗೆ?

ಹೌದು, ಆಲೂಗಡ್ಡೆಯನ್ನು ಸ್ವಚ್ಛಗೊಳಿಸಲು ಮಹಿಳೆ ವಾಷಿಂಗ್ ಮಷಿನ್‌ಗೆ ಹಾಕಿದ ವಿಡಿಯೋ 11 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ. ಇದೇ ವಿಡಿಯೋ ನೋಡಿದ ಸಾಕಷ್ಟು ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ. ಒಬ್ಬ ಮಹಿಳೆ ಅಂಗಡಿಯಿಂದ ಖರೀದಿಸಿದ ಆಲೂಗಡ್ಡೆಯ ಚೀಲವನ್ನು ವಾಷಿಂಗ್ ಮಷಿನ್‌ಗೆ ಹಾಕುತ್ತಾಳೆ. ಅದರ ಜೊತೆಗೆ ಪಾತ್ರ ತೊಳೆಯುವ ಸ್ಪಾಂಜ್ ಸ್ಕ್ರಬ್ಬರ್ ಹಾಕುತ್ತಾಳೆ. ಬಳಿಕ ವಾಷಿಂಗ್ ಮಷಿನ್​ನನ್ನು ಆನ್​ ಮಾಡುತ್ತಾಳೆ. ಕೆಲ ನಿಮಿಷಗಳ ನಂತರ ವಾಷಿಂಗ್ ಮಷಿನ್​ನಿಂದ ಆಲೂಗಡ್ಡೆಯನ್ನು ಹೊರ ತೆಗೆಯುತ್ತಾಳೆ. ಆಗ ಆಲೂಗಡ್ಡೆ ಮೇಲಿನ ಎಲ್ಲ ಕೊಳಕು ಹೋಗಿ ಸ್ವಚ್ಛ ಆಗುತ್ತೆ.

ಇದೇ ರೀಲ್ಸ್​ ಇದುವರೆಗೆ 11 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು ಹುಚ್ಚರಿಗೆ ಲೈಫ್ ಹ್ಯಾಕ್, ಸೋಮಾರಿಗಳಿಗಲ್ಲ, ನೀವು ಇದನ್ನು ಸೇವಿಸಿದರೆ ನಿಮಗೆ ಆಹಾರ ವಿಷವಾಗುವುದು ಖಂಡಿತ, ಅಡುಗೆ ಮಾಡಲು ಅಡುಗೆ ಪುಸ್ತಕವನ್ನು ನೋಡುತ್ತಿದ್ದೀರಾ. ಆದರೆ ಆಲೂಗಡ್ಡೆ ತೊಳೆಯಲು ಸೋಮಾರಿತನ ಏಕೆ? ಆಲೂಗಡ್ಡೆ ತೊಳೆಯಲು ನೀರು ಎಷ್ಟು ವೇಸ್ಟ್​ ಮಾಡಿದ್ದಾರೆ ನೋಡಿ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment