newsfirstkannada.com

ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್.. ಮಹಿಳಾ ಆಯೋಗದಿಂದ ಶಾಕಿಂಗ್ ಮಾಹಿತಿ..!

Share :

Published May 10, 2024 at 7:21am

    ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿರುವ ಮಹಿಳೆ

    ಮಹಿಳೆ ದೂರಿನ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಮಾಹಿತಿ

    ಪೊಲೀಸರು ಎಂದು ಹೇಳಿಕೊಂಡು ಬಂದ ಮೂವರಿಂದ ಬೆದರಿಕೆ

ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದಾರೆ. ಇಲ್ಲಿ ಶಾಸಕ ರೇವಣ್ಣ ಜೈಲು ಶಿಕ್ಷೆಗೆ ಗುರಿಯಾಗಿದ್ರೂ ಪ್ರಜ್ವಲ್ ಬಂದು ಶರಣಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ ಅಶ್ಲೀಲ ವಿಡಿಯೋ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ.. ಪ್ರಜ್ವಲ್ ರೇವಣ್ಣ ವಿರುದ್ಧ ದೂರು ಕೊಡಲು ಒತ್ತಡ ಹೇದರುತ್ತಿರುವ ಆರೋಪ ಕೇಳಿಬಂದಿದೆ.

ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್​
ಪ್ರಜ್ವಲ್ ರೇವಣ್ಣ ಏಪ್ರಿಲ್ 26ರಂದು ವೋಟ್ ಹಾಕ್ತಿದ್ದಂತೆ ಫ್ಲೈಟ್ ಹತ್ತಿ ಜರ್ಮನಿಗೆ ಹೋಗಿದ್ದಾರೆ. ಇದೀಗ ಪ್ರಜ್ವಲ್‌ನ ವಾಪಸ್ ಭಾರತಕ್ಕೆ ಕರೆಸಿಕೊಳ್ಳೋದೆ ಎಸ್‌ಐಟಿ, ಸಿಐಡಿಗೆ ದೊಡ್ಡ ಸವಾಲಾಗಿದೆ. ಈ ಮಧ್ಯೆ ಪ್ರಜ್ವಲ್ ವಿರುದ್ಧ ದೂರುಗಳ ಸರಣಿಯೇ ನಡೀತಿದೆ. ಆದ್ರೀಗ ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಎಸ್‌ಐಟಿ ಮೇಲೆ ಅನುಮಾನಗಳ ಕಾರ್ಮೋಡ ಮೂಡಿರೋ ಹೊತ್ತಲ್ಲಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪ್ರಜ್ವಲ್ ವಿರುದ್ಧ ಸುಳ್ಳು ದೂರುಗಳ ಸರಮಾಲೆ ಸೃಷ್ಟಿಸುತ್ತಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..

ಸುಳ್ಳು ದೂರಿಗೆ ಒತ್ತಡ
ಪ್ರಜ್ವಲ್ ರೇವಣ್ಣ ವಿರುದ್ಧ ಸುಳ್ಳು ದೂರು ನೀಡಲು ಮಹಿಳೆ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.. ಇದೇ ವಿಚಾರಕ್ಕೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ ಅಂತ ತಿಳಿದುಬಂದಿದೆ.. ‘ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡಲು ಒತ್ತಡ ಹೇರಲಾಗುತ್ತಿದೆ ಅಂತ ಮಹಿಳೆ ಆರೋಪಿಸಿದ್ದಾರೆ. ಪೊಲೀಸರು ಎಂದು ಹೇಳಿಕೊಂಡು ಬಂದ ಮೂವರು ಬೆದರಿಕೆ ಹಾಕಿದ್ದಾರೆ.. ಸಿವಿಲ್​ ಡ್ರೆಸ್​ನಲ್ಲಿ ಬಂದು ಸುಳ್ಳು ದೂರು ನೀಡುವಂತೆ ಒತ್ತಾಯ ಹೇರಿದ್ದರಂತೆ. ಅಲ್ಲದೇ ಬೇರೆ, ಬೇರೆ ನಂಬರ್​ಗಳಿಂದ ಮಹಿಳೆಗೆ ನಿರಂತರ ಫೋನ್ ಕರೆ ಮಾಡಿ ಬೆದರಿಕೆ ಹಾಕ್ತಿದ್ದಾರೆ ಅಂತ ಮಹಿಳೆ ನೀಡಿರುವ ದೂರಿನ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಮಾಹಿತಿ ನೀಡಿದೆ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ಒಟ್ಟಾರೆ, ಎಸ್‌ಐಟಿ ತನಿಖೆ ಬಗ್ಗೆ ಬಿಜೆಪಿ-ಜೆಡಿಎಸ್‌ ಅನುಮಾನವನ್ನ ವ್ಯಕ್ತಪಡಿಸ್ತಿದೆ.. ಈ ಹೊತ್ತಲ್ಲಿ ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ.. ಇದು ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಟ್ವಿಸ್ ಕೊಟ್ಟಿದ್ದು, ಸಂತ್ರಸ್ತ ಮಹಿಳೆಯರನ್ನೇ ಅನುಮಾನದ ಕಣ್ಣಿನಿಂದ ನೋಡುವಂತೆ ಮಾಡಿರೋದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್.. ಮಹಿಳಾ ಆಯೋಗದಿಂದ ಶಾಕಿಂಗ್ ಮಾಹಿತಿ..!

https://newsfirstlive.com/wp-content/uploads/2024/05/prajwal-revanna10.jpg

Load More