/newsfirstlive-kannada/media/post_attachments/wp-content/uploads/2024/11/FILM-CHEMBER.jpg)
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ರಾಜ್ಯ ಮಹಿಳಾ ಆಯೋಗ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮಕ್ಕಾಗಿ ಆಗ್ರಹಿಸಿದೆ. ಎರಡು ಡೆಡ್ ಲೈನ್ ಮುಗಿದರೂ POSH ಕಮಿಟಿ ರಚನೆ ಮಾಡದಿರೋದಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಆಗ್ರಹಿಸಿದೆ.
ಪತ್ರದಲ್ಲಿ ಏನಿದೆ..?
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜಾರಿಗೆ ಬಂದಿರುವ ಕಾರ್ಯಾಸ್ಥಾನದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ತಂದಿರುವ ಕಾಯ್ದೆಯು ಸಮರ್ಪಕ ಅನುಷ್ಠಾನದ ಕುರಿತು ಕರ್ನಾಟಕ ರಾಜ್ಯದ ಚಲನಚಿತ್ರ ಉದ್ಯಮದ ಮಹಿಳಾ ಕಲಾವಿದೆಯರು ಹಾಗೂ ಮಹಿಳಾ ಸದಸ್ಯೆಯರ ಸಭೆ ಕರೆಯಲು ತಿಳಿಸಲಾಗಿತ್ತು. ದಿನಾಂಕ 27.08.2024 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು.
ದಿನಾಂಕ 16.09.2024ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಆಯೋಜನೆಗೊಂಡಿತ್ತು. ನಂತರ ದಿನಾಂಕ 18.09.2024ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೆಚ್ಚಿನ ಮಾಹಿತಿ ಒದಗಿಸುವಂತೆ ಕೋರಿ ಪತ್ರ ಬರೆಯಲಾಗಿತ್ತು. ಆ ಪತ್ರದಲ್ಲಿ 2013ರಂತೆ ಅಂತರಿಕ ದೂರು ಸಮಿತಿಯ ರಚನೆಯ ಕುರಿತು ವಿವರಣೆ ಕೇಳಲಾಗಿತ್ತು.
ನಮಗೆ 30 ದಿನಗಳ ಕಾಲಾವಕಾಶ ನೀಡಬೇಕೆಂದು ವಾಣಿಜ್ಯ ಮಂಡಳಿ ಕೇಳಿತ್ತು. 30 ದಿನಗಳಲ್ಲಿ ಯಾವುದೇ ಮಾಹಿತಿ ನೀಡದಿರುವ ಕಾರಣ ದಿನಾಂಕ 30.10.2024ರಂದು ಮಹಿಳಾ ಆಯೋಗ ನೆನಪೋಲೆ ಕಳುಹಿಸಿತ್ತು. ದಿನಾಂಕ 14.11.2024ರಂದು ನಮಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ವಾಣಿಜ್ಯ ಮಂಡಳಿ ಕೋರಿತ್ತು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಬುರುಡೆ ಒಡೆಯುವ ಮಾತು.. ಮಂಜು-ರಜತ್ ಮಧ್ಯೆ ಆಗಿದ್ದೇನು?
ಆದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ರಿ) ಸಂಸ್ಥೆಯು ಕರ್ನಾಟಕ ಸಂಘ- ಸಂಸ್ಥೆ ನೊಂದಾವಣೆ ಕಾಯ್ದೆಯಂತೆ ನೊಂದಾಯಿಸಿಕೊಂಡಿದ್ದು, ಇವರು ತಮ್ಮ ಸಂಸ್ಥೆಯಲ್ಲಿ ಕಾರ್ಯಾಸ್ಥಾನದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕಾಯ್ದೆ ಪ್ರಕಾರ POSH ಕಮಿಟಿ ರಚಿಸಿರುವುದಿಲ್ಲ ಎಂದು ಮಹಿಳಾ ಆಯೋಗ ಮನಗಂಡಿದೆ. ಈ ಕಾರಣದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಶಿಫಾರಸು ಮಾಡುತ್ತಿದ್ದೇವೆ ಎಂದು ಮಹಿಳಾ ಆಯೋಗ ಆಗ್ರಹಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್