ಮಲೆನಾಡಿನ ಮಹಾಮಳೆಗೆ ಮತ್ತೊಂದು ಸಾವು.. ಸಂಕ ದಾಟುವಾಗ ಕೊಚ್ಚಿಹೋದ ಮಹಿಳೆ

author-image
Ganesh
Updated On
ಮಲೆನಾಡಿನ ಮಹಾಮಳೆಗೆ ಮತ್ತೊಂದು ಸಾವು.. ಸಂಕ ದಾಟುವಾಗ ಕೊಚ್ಚಿಹೋದ ಮಹಿಳೆ
Advertisment
  • ಗದ್ದೆಗೆ ಹೊರಟಿದ್ದಾಗ ಯಮನಂತೆ ಬಂದ ನೆರೆ
  • ಮರದಲ್ಲಿ ನೇತಾಡುತ್ತಿದ್ದ ಶವ ಕಂಡು ಜನ ಗಾಬರಿ
  • ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಕಳೆದ ಮೂರು ದಿನದಿಂದ ಬಾರೀ ಮಳೆಯಾಗುತ್ತಿದ್ದು, ಮಹಿಳೆಯೋರ್ವಳು ಜಮೀನಿನ ಸಂಕ ದಾಟಲು ಹೋದಾಗ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

ತಾಲೂಕಿನ ಬೈಸೆ ಗ್ರಾಮದ ಚೀಕಳಿ ನಿವಾಸಿ ಶಶಿಕಲಾ (43) ಮೃತ ಮಹಿಳೆ. ಮೃತ ಮಹಿಳೆ ಶಶಿಕಲಾ ಬೆಳಗ್ಗೆ ಅಗೆ ಹಾಕಲು ನೋಡಿಕೊಂಡು ಬರಲು ಜಮೀನಿಗೆ ಹೋಗಿದ್ದು ವಾಪಾಸು ಬಂದಿರಲಿಲ್ಲ. ಕೆಲ ಹೊತ್ತು ಬಿಟ್ಟು ಮನೆಯವರು ಹುಡುಕಲು ಹೋದ ಸಂದರ್ಭದಲ್ಲಿ ಜಮೀನಿನ ಹತ್ತಿರದ ಸಂಕದಿಂದ ಒಂದು ಕಿಮೀ ದೂರದ ದುಮುಕದ ಗದ್ದೆಯ ಕಾಲು ಸೇತುವೆ ಹತ್ತಿರ ಹಳ್ಳದಲ್ಲಿ ಮೃತದೇಹವೊಂದು ಮರಕ್ಕೆ ಸಿಕ್ಕಿಹಾಕಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಮೃತ ಶಶಿಕಲಾರ ಮೃತದೇಹ ಎಂದು ಗೊತ್ತಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಇರುವೆಗಳೂ ಆಪರೇಷನ್ ಮಾಡ್ತವೆ..! ಮನುಷ್ಯರ ಹೊರತುಪಡಿಸಿದ್ರೆ ಈ ಕಲೆಗಾರಿಕೆ ಇರೋದು ಇವುಗಳಿಗೆ ಮಾತ್ರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment