Advertisment

ಚಿಕಿತ್ಸೆ ನೀಡದೇ ಮಹಿಳೆಯ ಸಾಯಿಸಿದ್ರಂತೆ ವೈದ್ಯರು; ಆ್ಯಂಬುಲೆನ್ಸ್​ನಲ್ಲಿ ಶವ ಇಟ್ಟು ಪ್ರತಿಭಟನೆ

author-image
Ganesh
Updated On
ಚಿಕಿತ್ಸೆ ನೀಡದೇ ಮಹಿಳೆಯ ಸಾಯಿಸಿದ್ರಂತೆ ವೈದ್ಯರು; ಆ್ಯಂಬುಲೆನ್ಸ್​ನಲ್ಲಿ ಶವ ಇಟ್ಟು ಪ್ರತಿಭಟನೆ
Advertisment
  • ಅಂಬೇಡ್ಕರ್ ಮೆಡಿಕಲ್ ಕಾಲೇಜು ವಿರುದ್ಧ ಆರೋಪ
  • 34 ವರ್ಷದ ನಾಜ್ನಿ‌ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಳು
  • ಡಾಕ್ಟರ್​ ನಿರ್ಲಕ್ಷ್ಯದಿಂದಾಗಿ ಈ ರೀತಿ ಆಗಿದೆ ಎಂದು ಕಣ್ಣೀರು

ಅಂಬೇಡ್ಕರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಹಿಳೆ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. 34 ವರ್ಷದ ನಾಜ್ನಿ‌ ಎಂಬ ಮಹಿಳೆ ಮೂರು ದಿನಗಳ ಹಿಂದೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು.

ಏನಿದು ಆರೋಪ..?

Advertisment

ಆಸ್ಪತ್ರೆಯಲ್ಲಿ ಎರಡು ದಿನದವಾದರೂ ಚಿಕಿತ್ಸೆ ನೀಡದೇ ಡಾಕ್ಟರ್​ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ. ಎರಡು ದಿನದ ಬಳಿಕ ಆಪರೇಷನ್ ಮಾಡಿರೋದಾಗಿ ತಿಳಿಸಿದ್ದಾರೆ. ನಂತರ ಆಪರೇಷನ್ ಸಕ್ಸಸ್ ಆಗಿದೆ, ಎರಡು ದಿನ ನಿಗಾ ಇಡಲು ಐಸಿಯುವಿಗೆ ಶಿಫ್ಟ್ ಮಾಡಿದ್ದಾರಂತೆ. ನಂತರ ‌ನರದ ಸಮಸ್ಯೆ ಇದೆ ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬೇರೆ ಆಸ್ಪತ್ರೆಗೆ ತೆರಳುವ ವೇಳೆ ಆಂಬ್ಯುಲೆನ್ಸ್​ನಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂಬಸ್ಥರು ಸಿಟ್ಟಿಗೆದ್ದು ಡಾಕ್ಟರ್​ ನಿರ್ಲಕ್ಷ್ಯದಿಂದಾಗಿ ಈ ರೀತಿ ಆಗಿದೆ ಎಂದು ಕಣ್ಣೀರು ಇಟ್ಟಿದ್ದಾರೆ. ಆಸ್ಪತ್ರೆಯ ಮುಂದೆ ಆ್ಯಂಬುಲೆನ್ಸ್​ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment